Homeಸುದ್ದಿಗಳುಕ್ರೀಡೆ ಮತ್ತು ಅರಿವು ಮೂಡಿಸುವ ವೈಶಿಷ್ಟ್ಯಪೂರ್ಣ ಕಾರ್ಯಕ್ರಮ

ಕ್ರೀಡೆ ಮತ್ತು ಅರಿವು ಮೂಡಿಸುವ ವೈಶಿಷ್ಟ್ಯಪೂರ್ಣ ಕಾರ್ಯಕ್ರಮ

ವಿಶೇಷ ವರದಿ :
ವೈ ಬಿ ಕಡಕೋಳ
ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರು
ಕ್ಷೇತ್ರ ಸಂಪನ್ಮೂಲ ಕೇಂದ್ರ ಸವದತ್ತಿ

ಕ್ರೀ ಡೆ ಎಂಬುದು ಸಂಘಟಿತ, ಸ್ಪರ್ಧಾತ್ಮಕ ಮತ್ತು ಕುಶಲತೆಯಿಂದ ಕೂಡಿದ ದೈಹಿಕ ಚಟುವಟಿಕೆಯಾಗಿದೆ. ಅಲ್ಲದೇ ಇದಕ್ಕೆ ಬದ್ಧತೆ ಮತ್ತು ನ್ಯಾಯದ ಆಟದ ಅಗತ್ಯವಿರುತ್ತದೆ. ಇದರಲ್ಲಿ ವಿಜೇತನನ್ನು ವಸ್ತುನಿಷ್ಠ ಮಾರ್ಗಗಳಿಂದ ನಿರ್ಧರಿಸಲಾಗುತ್ತದೆ. ಇದನ್ನು ನಿಯಮಗಳ ಅಥವಾ ವಾಡಿಕೆಗಳ ಶ್ರೇಣಿಯಿಂದ ನಡೆಸಲಾಗುವುದು. ಕ್ರೀಡೆಯಲ್ಲಿ ಫಲಿತಾಂಶವನ್ನು(ಗೆಲುವು ಅಥವಾ ಸೋಲು) ನಿರ್ಧರಿಸುವಾಗ ದೈಹಿಕ ಸಾಮರ್ಥ್ಯಗಳು ಮತ್ತು ಸ್ಪರ್ಧಿಯ ಕೌಶಲಗಳು ಪ್ರಮುಖ ಅಂಶಗಳಾಗುತ್ತವೆ. ಅರಿವು ಎಂದರೆ ತಿಳಿವು, ಜ್ಞಾನ ಎಂದು ಸಾಮಾನ್ಯವಾದ ಅರ್ಥ. ಮನಶ್ಶಾಸ್ರ್ತದ ಪ್ರಕಾರ ಅರಿವು ; ಸಂವೇದನೆ, ಭಾವನೆ, ಅನುಭೂತಿ ಮತ್ತು ಸಂಕಲ್ಪ, ಇಚ್ಛಾಶಕ್ತಿ, ಪ್ರೇರಣೆ – ಇವು ಪ್ರಜ್ಞೆಯ ಮೂರು ಅಂತಿಮಕ್ರಿಯೆಗಳು.

ಸವದತ್ತಿ ತಾಲೂಕು ಮಟ್ಟದ ಕ್ರೀಡೆ ಮತ್ತು ಅರಿವು ಮೂಡಿಸುವ ಒಂದು ವೈಶಿಷ್ಟ್ಯಪೂರ್ಣ ಕಾರ್ಯ ಕ್ರಮ. ಯರಗಟ್ಟಿಯ ಸರಕಾರಿ ಹಿರಿಯ ಪ್ರಾಥಮಿಕ ಮಾದರಿ ಶಾಲೆಯಲ್ಲಿ ಸೋಮವಾರ ಬಹಳ ಔಚಿತ್ಯಪೂರ್ಣವಾಗಿ ಜರುಗಿತು.

ಈ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಮುನವಳ್ಳಿ ಸೋಮಶೇಖರ ಮಠದ ಪರಮಪೂಜ್ಯ ಶ್ರೀ.ಮ.ನಿ.ಪ್ರ.ಸ್ವ. ಮುರುಘೇಂದ್ರ ಮಹಾಸ್ವಾಮಿಗಳವರು ವಹಿಸಿದ್ದರು. ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮೋಹನ ದಂಡಿನ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಬಿ. ಎನ್. ಬ್ಯಾಳಿಯವರ ಉಪಸ್ಥಿತಿಯಲ್ಲಿ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರು ಗಳಾದ ವೈ. ಬಿ. ಕಡಕೋಳ. ಡಿ, ಎಲ್, ಭಜಂತ್ರಿ, ಎಸ್ ಬಿ ಬೆಟ್ಟದ ಕರ್ನಾಟಕ ರಾಜ್ಯ ಶಿಕ್ಷಕರ ಸಂಘದ ಸವದತ್ತಿ ತಾಲೂಕಿನ ಪದಾಧಿಕಾರಿಗಳಾದ ಶಿವಾನಂದ ಮಿಕಲಿ.ನಲಿಕಲಿ ರಾಜ್ಯ ಸಂಪನ್ಮೂಲ ವ್ಯಕ್ತಿಗಳಾದ ಮನೋಹರ ಚೀಲದ. ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತಿಯಲ್ಲಿ ಸಸಿಗೆ ನೀರುಣಿಸುವ ಮೂಲಕ ವೇದಿಕೆಯಲ್ಲಿನ ಗಣ್ಯರು ಕಾರ್ಯ ಕ್ರಮ ಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಿದರು.

ಉದ್ಘಾಟನಾ ಪರ ನುಡಿಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮೋಹನ ದಂಡಿನ ರವರು ಸಮನ್ವಯ ಶಿಕ್ಷಣದ ಮಹತ್ವ,  ಕ್ರೀಡೆ ಮತ್ತು ಅರಿವು ಮೂಡಿಸುವ ಕಾರ್ಯಕ್ರಮ ದ ಉದ್ದೇಶಗಳು ವಿಕಲಚೇತನ ಮಕ್ಕಳಿಗೆ ಈ ಕಾರ್ಯಕ್ರಮವನ್ನು ಆಯೋಜಿಸಿದ ಸರಕಾರದ ಉದ್ದೇಶ ವನ್ನು ವಿವರವಾಗಿ ತಿಳಿಸಿದರು.

ಕ್ಷೇತ್ರ ಸಮನ್ವಯಾಧಿಕಾರಿಗಳಾದ ಬಿ ಎನ್ ಬ್ಯಾಳಿಯವರು ಮಾತನಾಡಿ ವಿಕಲಚೇತನ ಮಕ್ಕಳಲ್ಲಿ ಅಗಾಧವಾದ ಪ್ರತಿಭೆ ಇರುತ್ತದೆ. ಈ ಪ್ರತಿಭೆ ಗೆ ಪ್ರೋತ್ಸಾಹ ನೀಡಿದರೆ ಅವರಿಂದ ವಿಶಿಷ್ಟವಾದ ಸಾಧನೆ ಜರುಗಲು ಸಾಧ್ಯತೆ ಇದೆ ಎಂಬುದನ್ನು ಪರಿಗಣಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಇದರ ಜೊತೆಗೆ ಕ್ಷೇತ್ರ ಭೇಟಿಯನ್ನು ಜರುಗಿಸುತ್ತಿರುವುದು ಈ ವರ್ಷದ ಕಾರ್ಯಕ್ರಮ ದ ಉದ್ದೇಶಗಳಲ್ಲಿ ಒಂದಾಗಿದೆ. ಇದು ಕೇವಲ ವಿದ್ಯಾರ್ಥಿಗಳಿಗೆ ಅಷ್ಟೇ ಅಲ್ಲ ಪಾಲಕರಿಗೂ ಕೂಡ ಜರುಗುತ್ತಿದ್ದು. ಎಲ್ಲರೂ ಸಕ್ರಿಯವಾಗಿ ಪಾಲ್ಗೊಂಡು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕರೆ ನೀಡಿದರು.

ಮಾಧ್ಯಮ ಅಕಾಡೆಮಿಯ ರಾಜ್ಯ ಪುರಸ್ಕಾರ ಗೌರವಕ್ಕೆ ಪಾತ್ರರಾದ ಪುಂಡಲೀಕ ಬಾಳೋಜಿಯವರು ಮಾತನಾಡಿ ಇದೊಂದು ವಿಶಿಷ್ಟ ಕಾರ್ಯ ಕ್ರಮ ಯರಗಟ್ಟಿಯಲ್ಲಿ ಜರುಗಿಸುವ ಮೂಲಕ ತಾಲೂಕಿನ ಎಲ್ಲಾ ಮಕ್ಕಳಿಗೂ ಇದರ ಸದುಪಯೋಗ ಆಗಲಿ ವಿಕಲಚೇತನ ಮಕ್ಕಳಿಗೆ ಇದು ನಿಜವಾಗಿಯೂ ಉತ್ತಮ ಕಾರ್ಯ. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಗೈದವರನ್ನು ಸನ್ಮಾನಿಸುತ್ತಿರುವುದು ಶಿಕ್ಷಣ ಇಲಾಖೆಯ ಮಹತ್ವ ಪೂರ್ಣ ಕಾರ್ಯ ಗಳಲ್ಲಿ ಒಂದಾಗಿದೆ. ಸೋಲು ಗೆಲುವಿನ ಸೋಪಾನ ಎಂಬುದನ್ನು ಅರಿತು ಪಾಲಕರೂ ಮಕ್ಕಳು ಇದರಲ್ಲಿ ಪಾಲ್ಗೊಳ್ಳಲು ಕರೆ ನೀಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಾಧ್ಯಮ ಅಕಾಡೆಮಿಯ ರಾಜ್ಯ ಗೌರವ ಕ್ಕೆ ಪಾತ್ರರಾದ ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ಉಪಾಧ್ಯಕ್ಷರಾದ ಪುಂಡಲೀಕ ಬಾಳೋಜಿಯವರು. ಸವದತ್ತಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘಟನೆ ಯ ತಾನಾಜಿರಾವ್ ಮುರಂಕರ, ಯರಗಟ್ಟಿ ತಾಲೂಕು ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾದ ಶಿವಾನಂದ ಬಳಿಗಾರ,  ಕರ್ನಾಟಕ ರಾಜ್ಯ ನೌಕರರ ಸಂಘದ ಸವದತ್ತಿ ತಾಲೂಕು ಘಟಕದ ಉಪಾಧ್ಯಕ್ಷ ರಾದ ವಿಜಯ ಮೆಳವಂಕಿ, ಪರಸಗಡ ತಾಲೂಕು ಸರಕಾರಿ ಪತ್ತಿನ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮಂಜುನಾಥ ಕಮ್ಮಾರ, ಮಾಧ್ಯಮ ಪ್ರತಿನಿಧಿ ಈರಣ್ಣ ಹುಲ್ಲೂರ, ಇತ್ತೀಚೆಗೆ ರಾಜ್ಯ ಮಟ್ಟದ ವಿಕಲಚೇತನರ ಕ್ರೀಡಾ ಕೂಟದಲ್ಲಿ ತಾಲೂಕಿನ ಹೂಲಿ ಗ್ರಾಮದ ವಿದ್ಯಾರ್ಥಿನಿ ನಾಗವೇಣಿ ಮುತ್ತಪ್ಪ ಮುಳ್ಳೂರ.(ವಾಕ್ ಮತ್ತು ಶ್ರವಣ ದೋಷ ವಿಭಾಗದಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆ ಯಾದ) ಹಾಗೂ ಈರಣ್ಣ ಶೆಟ್ಟಿಮೆಳಿ ಜೊತೆಗೆ ವಿಕಲಚೇತನರ ಸೇವೆಯಲ್ಲಿ ಪ್ರೌಢಶಾಲಾ ವಿಭಾಗದ ಸಂಪನ್ಮೂಲ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಡಿ ಎಲ್ ಭಜಂತ್ರಿ, ಶಾಲಾ ಸಿದ್ದತಾ ಕೇಂದ್ರ ದಲ್ಲಿ ಸಹಾಯಕಿಯಾಗಿ ಸೇವೆ ಸಲ್ಲಿಸುತ್ತಿರುವ ಮಾಶಾಬಿ ಯಡೊಳ್ಳಿ, ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆ ಯಾಗಿ ಯರಗಟ್ಟಿ ಪಟ್ಟಣ ಪಂಚಾಯಿತಿ ಯಲ್ಲಿ ಸೇವೆ ಸಲ್ಲಿಸುತ್ತಿರುವ ರಷೀದಾ ಎ ಚಿಕ್ಕುಂಬಿಯವರನ್ನು ಸೇರಿದಂತೆ ನಲಿಕಲಿ ವಿಷಯದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಸೇವೆ ಸಲ್ಲಿಸುತ್ತಿರುವ ಮನೋಹರ ಚೀಲದ. ಎಸ್ ಬಿ ನವಲಗುಂದ, ಮಹಾಂತೇಶ ಮುಂಡರಗಿ, ನವೀನ ಪಾಟೀಲ, ಗುರುಮಾತೆ ಬಿದರಿ ತಾಲೂಕು ಮಟ್ಟದ ತರಭೇತಿ ಆಯೋಜಿಸುವಲ್ಲಿ ಗಮನಾರ್ಹ ಕಾರ್ಯ ಗೈಯುತ್ತಿರುವ ರತ್ನ ಸೇತಸನದಿ ಮೊದಲಾದವರನ್ನು ವೇದಿಕೆಯಲ್ಲಿ ಗೌರವಿಸಲಾಯಿತು.

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವಹಿಸಿ ಮಾತನಾಡಿದ ಮುನವಳ್ಳಿ ಸೋಮಶೇಖರ ಮಠದ ಪರಮಪೂಜ್ಯ ಮುರುಘೇಂದ್ರ ಸ್ವಾಮೀಜಿಯವರು “ತಾಲೂಕಿನ ವಿದ್ಯಾರ್ಥಿಗಳಿಗೆ ಮತ್ತು ಪಾಲಕರಿಗೆ ಕ್ರೀಡೆ ಮತ್ತು ಅರಿವು ಮೂಡಿಸುವ ಚಟುವಟಿಕೆಗಳನ್ನು ಯರಗಟ್ಟಿಯಲ್ಲಿ ಹಮ್ಮಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ. ನಾವಿಂದು ಗಾನಯೋಗಿ ಪಂಚಾಕ್ಷರಿ ಗವಾಯಿಗಳನ್ನು ಸ್ಮರಿಸಬೇಕು ಅಂದಿನ ದಿನಗಳಲ್ಲಿ ಅವರು ಅಂಧರಾದರೂ ನಾಡಿಗೆ ಸಂಗೀತ ಕ್ಷೇತ್ರದಲ್ಲಿ ಅಮೂಲ್ಯವಾದ ಕೊಡುಗೆ ನೀಡಿರುವುದು ಇಂದಿನ ದಿನಗಳಲ್ಲಿ ಕೂಡ ಎಲ್ಲಾ ರಂಗದಲ್ಲಿ ವಿಕಲಚೇತನರಿಗೆ ಸರಕಾರ ಅವಕಾಶವನ್ನು ಕಲ್ಪಿಸುತ್ತಿರುವುದನ್ನು ನೋಡಿದರೆ ಹೆಮ್ಮೆ ಎನಿಸುತ್ತದೆ. ಈ ದಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದವರನ್ನು ಸನ್ಮಾನಿಸುತ್ತಿರುವುದು ಈ ಕಾರ್ಯಕ್ರಮದ ವಿಶೇಷ. ಎಲ್ಲರೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಇನ್ನೂ ಹೆಚ್ಚು ಸಾಧನೆ ಮಾಡುವಂತಾಗಲಿ ಎಂಬುದು ಈ ಕಾರ್ಯಕ್ರಮದ ಉದ್ದೇಶ. ಜೊತೆಗೆ ಈ ಎಲ್ಲಾ ಸಾಧಕರ ಪರಿಶ್ರಮ ವಿದ್ಯಾರ್ಥಿಗಳಿಗೆ ಕೂಡ ತಿಳಿಯುವ ಮೂಲಕ ಅವರಲ್ಲಿ ಕೂಡ ಪ್ರೋತ್ಸಾಹ ದೊರೆತರೆ ತಾವೂ ಕೂಡ ಏನನ್ನಾದರೂ ಮಾಡಲು ಸಾಧ್ಯ ಎಂಬುದನ್ನು ಅರಿಯಲು ಇಂತಹ ಕಾರ್ಯಕ್ರಮ ನಿಜವಾಗಿಯೂ ಸಾರ್ಥಕ. ದೇವರು ತಮ್ಮೆಲ್ಲರಿಗೂ ಒಳ್ಳೆಯದನ್ನು ಮಾಡಲಿ”ಎಂದು ಶುಭ ಹಾರೈಸಿದರು.

ಈ ಕಾರ್ಯಕ್ರಮದಲ್ಲಿ ತಾಲೂಕಿನ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಮಲ್ಲಿಕಾರ್ಜುನ ಮಲಕನ್ನವರ, ಮೋಹನ ಬಾಳೇಕುಂದರಗಿ, ಬಾಳೇಶ ಸಿದ್ದಬಸನ್ನವರ,  ವಸಂತ ಬಡಿಗೇರ ಸೇರಿದಂತೆ ಗ್ರಾಮೀಣ ಪುನರ್ವಸತಿ ಕಾರ್ಯ ಕರ್ತರಾದ ಎಸ್ ಎಂ ಹೂಗಾರ, ಎಚ್ ಎ ಮುಲ್ಲಾ, ಆರ್ ಎಂ ಬಿರಾದಾರ ಗೌಡರ, ಬೀರಪ್ಪ ಹಳೇಮನಿ, ಎಂ ಆರ್ ಮಠಪತಿ,  ಎ ಜಿ ದೇವರ ಮನಿ, ಬಿ ಎಸ್ ಉಗರಗೋಳ,  ಆರ್ ಎ ಚಿಕ್ಕುಂಬಿ, ಎ ಎನ್ ನದಾಫ, ಮಂಜುಳಾ ಗೊರಗುದ್ದಿ,  ವಾಯ್ ಎಂ ಮಾಯಪ್ಪನವರ, ಸುನೀತಾ ರಾಮನ್ನವರ, ಶಶಿಕಲಾ ದನದಮನಿ, ಬಿ ಬಿ ಕಬ್ಬೂರ ಮೊದಲಾದವರು ಉಪಸ್ಥಿತರಿದ್ದರು.

ನಂತರ ಕಪ್ಪೆಯೋಟ, ಲಿಂಬು ಚಮಚ, ಕೆರೆ ದಡ, ಮ್ಯುಜಿಕಲ್ ಚೇರ್ ಸೇರಿದಂತೆ ವಿವಿಧ ಕ್ರೀಡಾ ಚಟುವಟಿಕೆಗಳನ್ನು ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಮತ್ತು ಪಾಲಕರಿಗೆ ಕಾವ್ಯ ಗಾಯನ ಹಾಗೂ ಚಿತ್ರಕಲೆ ಸ್ಪರ್ಧೆಗಳನ್ನು ಕೂಡ ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ಜರುಗಿಸಲಾಯಿತು. ಈ ಕಾರ್ಯವನ್ನು ದೈಹಿಕ ಶಿಕ್ಷಕರಾದ ಎಸ್ ಎಸ್ ಚಿಲಕಂಡಿ, ಎಂ. ಎನ್. ಚವಡಪ್ಪನವರ,  ಎಸ್ ಎಫ್ ಬಡಿಗೇರ, ರವಿಕುಮಾರ, ಎಸ್ ಬಡಿಗೇರ, ಎಸ್ ಡಿ ಗಾಣಗಿ, ಬಿ ಎಂ ಸರದಾರ, ಜೆ ಬಿ ತಳವಾರ, ಬಿ ವೈ ಅಗಸಗಿ,  ಬಿ ಆರ್ ಮಲ್ಲೂರ ಮೊದಲಾದವರು ಜವಾಬ್ದಾರಿ ವಹಿಸಿಕೊಂಡು ನಿರ್ಣಾಯಕವಾಗಿ ಕಾರ್ಯ ಜರುಗಿಸಿದರು. ಇವರೆಲ್ಲರಿಗೂ ಕಾರ್ಯ ಕ್ರಮದ ಕೊನೆಯಲ್ಲಿ ವೈ ಬಿ ಕಡಕೋಳ ಅವರ ಬದುಕು ಬಂಡಿ ಕೃತಿ ನೀಡುವ ಮೂಲಕ ಗೌರವಿಸಲಾಯಿತು.
ಕ್ಷೇತ್ರ ಭೇಟಿ
ಕ್ಷೇತ್ರ ಭೇಟಿಯ ಅಂಗವಾಗಿ ಸವದತ್ತಿ ತಾಲೂಕು ವಿಕಲಚೇತನ ಮಕ್ಕಳ ಚಟುವಟಿಕೆಗಳನ್ನು ಯರಗಟ್ಟಿ ಗೋಕಾಕ ಮಾರ್ಗದಲ್ಲಿ ಇರುವ ಬೀರಪ್ಪನ ಗುಡ್ಡವನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು.
ಕ್ಷೇತ್ರ ಭೇಟಿಗೆ ಬಸ್ ಮೂಲಕ ತೆರಳುವ ಸಂದರ್ಭದಲ್ಲಿ ಪೂಜ್ಯರಾದ ಮುನವಳ್ಳಿ ಸೋಮಶೇಖರ ಮಠದ ಮುರುಘೇಂದ್ರ ಸ್ವಾಮೀಜಿಯವರು ಪುಂಡಲೀಕ ಬಾಳೋಜಿಯವರು, ತಾನಾಜಿರಾವ್ ಮುರಂಕರ, ಶಿವಾನಂದ ಬಳಿಗಾರ್,  ವೈ ಬಿ ಕಡಕೋಳ, ಎಸ್ ಬಿ ಬೆಟ್ಟದ, ಡಿ ಎಲ್ ಭಜಂತ್ರಿ, ಮಾಶಾಬಿ ಯಡೊಳ್ಳಿ, ರಷೀದಾ ಚಿಕ್ಕುಂಬಿ,  ರವಿಕುಮಾರ ಬಡಿಗೇರ, ಜೆ ಬಿ ತಳವಾರ, ವಸಂತ ಬಡಿಗೇರ, ಮನೋಹರ ಚೀಲದ, ಶಿವಾನಂದ ಮಿಕಲಿ, ಬಿ. ಎನ್. ಬ್ಯಾಳಿ ಮೊದಲಾದವರು ಚಾಲನೆ ನೀಡಿದರು.

ಬೀರದೇವರ ಬೆಟ್ಟದ ವೀಕ್ಷಿಸಲು ಪಾಲಕರು ಮತ್ತು ಮಕ್ಕಳ ತಂಡ ಹೊರಟಿತು.
ಬೀರದೇವರ ಗುಡ್ಡಕ್ಕೆ ತಲುಪಿದ ನಂತರ ಎಲ್ಲರಿಗೂ ಬಿಸ್ಕಿಟ್ ಹಾಗೂ ಕುಡಿಯುವ ನೀರನ್ನು ನೀಡಲಾಯಿತು. ಬೆಟ್ಟದಲ್ಲಿ ನಿಸರ್ಗದಲ್ಲಿ ಕಂಗೊಳಿಸುತ್ತಿರುವ ಬೀರದೇವರ ದರ್ಶನ. ಮಾಯಮ್ಮದೇವಿ ದೇವಾಲಯದ ದರ್ಶನ ಪಡೆದು ಕೊಂಡು ಬೆಟ್ಟದ ವೀಕ್ಷಿಸಲು ಸಾಲಾಗಿ ತೆರಳಲಾಯಿತು. ಸ್ವಾಮಿ ವಿವೇಕಾನಂದರ ಪ್ರತಿಕೃತಿ, ಸಂತ ಶಿಶುನಾಳ ಷರೀಫ್, ಗುರು ಗೋವಿಂದ ಭಟ್ಟರು. ಕನಕದಾಸರು. ಹೀಗೆ ಮಹನೀಯರು ಶಿಲ್ಪ ಕಲೆಯನ್ನು ವೀಕ್ಷಿಸುತ್ತಾ ನಿಸರ್ಗ ಮಡಿಲಲ್ಲಿ ಬೆಳೆದು ನಿಂತ ಗಿಡಮರಗಳು ಅಕ್ಕಪಕ್ಕದ ಕೃಷಿ ಜಮೀನಿನಲ್ಲಿ ಬೆಳೆದ ಬೆಳೆಗಳ ಕುರಿತು ಮಾಹಿತಿಯನ್ನು ಪಡೆಯಲಾಯಿತು. ಇದೊಂದು ನಿಸರ್ಗ ಧಾಮ.

ಸಮಾರೋಪ ಸಮಾರಂಭ
ಸಾಯಂಕಾಲದ ಸಮಯದಲ್ಲಿ ಬಹುಮಾನ ವಿತರಣೆ ಹಾಗೂ ಗೌರವ ಧನ ವಿತರಣಾ ಸಮಾರಂಭ ಜರುಗಿಸಲಾಯಿತು. ರಮೇಶ ಹುಣಸೀಕಟ್ಟಿ ಕಾರ್ಯಕ್ರಮ ನಿರೂಪಿಸಿದರು. ವೈ ಬಿ ಕಡಕೋಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್ ಬಿ ಬೆಟ್ಟದ ವಂದಿಸಿದರು.

RELATED ARTICLES

Most Popular

error: Content is protected !!
Join WhatsApp Group