ಕೋವಿಡ್ ಮೃತ ಶಿಕ್ಷಕರ ಸ್ಮರಣಾರ್ಥ ವನಮಹೋತ್ಸವ

Must Read

ಸಿಂದಗಿ: ನೆಟ್ಟ ಗಿಡಮರಗಳನ್ನು ನೋಡಲು ವಿಶೇಷ ಕಾಳಜಿಯ ಅವಶ್ಯಕತೆ ಏನಿಲ್ಲ. ಊಟ ಮಾಡಿದಾಗೊಮ್ಮೆ ಗಿಡದ ಬುಡದಲ್ಲಿ ಕೈ ತೊಳೆದರೆ ಅಷ್ಟು ನೀರು ಆ ಮರಕ್ಕೆ ಸಾಕಾಗುತ್ತದೆ ಅದರ ಜೊತೆಗೆ ತ್ಯಾಜ ಮುಕ್ತ ಹಾಗೂ ಪಾಸ್ಟಿಕ್ ಮುಕ್ತ ಪರಿಸರವನ್ನು ನಿರ್ಮಾಣ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕೆ.ಹೊಂಗಯ್ಯ ಹೇಳಿದರು.

ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಆವರಣದಲ್ಲಿ ಕೋವಿಡ್-19ರ ಎರಡೇ ಅಲೆಯ ಸಂದರ್ಭದಲ್ಲಿ ಮೃತರಾದ ಶಿಕ್ಷಕರ ಸ್ಮರಣಾರ್ಥ ವಿಶ್ವಬಂಧು ಪರಿಸರ ಬಳಗದಿಂದ ಹಮ್ಮಿಕೊಂಡ ಸಸಿ ನೆಡುವ ಕಾರ್ಯಕ್ರಮ ಹಾಗೂ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ವಿಠ್ಠಲ ದೇವಣಗಾಂವ ಮಾತನಾಡಿ, ಆರೋಗ್ಯವಂತ ಪ್ರಜೆಗಳೇ ನಿಜವಾದ ದೇಶದ ಸಂಪತ್ತು. ಈ ಸಂಪತ್ತು ನಿರಂತರವಾಗಿರಬೇಕಾದರೆ ಶುದ್ಧ ಪರಿಸರ, ಸ್ವಚ್ಛ ವಾತಾವರಣ, ಪೌಷ್ಠಿಕ ಆಹಾರ ಅಗತ್ಯ. ಈ ಅಗತ್ಯತೆ ಪೂರೈಕೆಯಾಗುವುದು ಸಸ್ಯಜನ್ಯ ವಸ್ತುಗಳಿಂದ ಕಾರಣ ನಾವು ಸಸ್ಯರಾಶಿಗಳನ್ನು ಬೆಳೆಸಲು ನಿತ್ಯನಿರಂತರ ಕಾಳಜಿ ವಹಿಸಬೇಕು. ಪ್ರತಿ ಸಸಿಯೂ ಒಬ್ಬೊಬ್ಬ ಶಿಕ್ಷಕರ ನೆನಪನ್ನು ಸದಾ ಹಸಿರಾಗಿಸುತ್ತದೆ. ಇದೊಂದು ಅಮೋಘ ಕಾರ್ಯ ಎಂದು ಶ್ಲಾಘಿಸಿದರು.

ವಿಶ್ವಬಂಧು ಪರಿಸರ ಬಳಗದ ಸಂಚಾಲಕ ಸಿದ್ಧಲಿಂಗ ಚೌಧರಿ ಪ್ರಾಸ್ತಾವಿಕವಾಗಿ ಮಾತನಾಡಿ, ಪರಿಸರ ಇದು ದೇವರ ಕೊಡುಗೆ ಅದನ್ನು ಸದ್ಬಳಕೆ ಮಾಡಿಕೊಂಡರೆ ನಮ್ಮ ಉನ್ನತಿ ದುರ್ಬಳಕೆ ಅದು ನಮ್ಮ ಅವನತಿ ಈ ಸತ್ಯವನ್ನು ಈಗಲಾದರು ನಾವು ಅರಿತುಕೊಂಡು ಬಾಳಬೇಕು ಎಂದರು.

ಗ್ರೇಡ್ 2 ತಹಶೀಲ್ದಾರ ಪ್ರಕಾಶ ಸಿಂದಗಿ ಮಾತನಾಡಿದರು.

ಕ್ಷೇತ್ರ ಸಮನ್ವಯಾಧಿಕಾರಿ ಸಂತೋಷಕುಮರ ಬೀಳಗಿ, ದೈಹಿಕ ಶಿಕ್ಷಣಾಧಿಕಾರಿ ಎ.ಎಂ.ಬಿರಾದಾರ, ಶಿಕ್ಷಕರ ಸಂಘದ ಅಧ್ಯಕ್ಷ ಆನಂದ ಭೂಸನೂರ, ಮಾಧ್ಯಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಎಚ್.ಬಿರಾದಾರ, ದೈ.ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಎಂ.ಕೆಂಬಾವಿ, ಸಾವಿತ್ರಿಬಾಯಿ ಪುಲೆ ಶಿಕ್ಷಕರ ಸಂಘದ ಅಧ್ಯಕ್ಷೆ ಎಸ್.ಎಂ.ಮಸಳಿ, ಇಂಡಿ ದೈಹಿಕ ಶಿಕ್ಷಣಾಧಿಕಾರಿ ಸಂಗನಗೌಡ ಹಚಡದ, ಶಿಕ್ಷಕಿ ಎಸ್.ಎಂ.ಚಿಗರಿ, ಶಾರದಾ ಅಂಗಡಿ, ಎಂ.ಕೆ.ಬಿರಾದಾರ, ರಾಯಪ್ಪ ಇವಣಗಿ, ಅಕ್ಷ್ಮಣ ಸೊನ್ನ, ಡಿ.ಎಂ.ಮಾವೂರ, ಬಸವರಾಜ ಸೊಂಪೂರ, ಸುಜಾತಾ ಬಡಿಗೇರಿ, ಮಹಾಂತೇಶ ಬಾಗೇವಾಡಿ, ಎಸ್.ಆರ್.ಪಾಟೀಲ, ಎನ್.ಎಂ.ಬಿರಾದಾರ, ಆರ್.ಎಸ್.ಬಿರಾದಾರ, ಆರ್.ಆರ್.ರಾಠೋಡ, ಅರ್.ಎಲ್.ನಾಯ್ಕೋಡಿ, ರಾಜು ಭೂಸನೂರ, ಮಾಳು ಹೊಸೂರ, ಬಸವರಾಜ ಅಗಸರ, ಎಸ್.ಎಸ್.ಪಾಟೀಲ, ಸಿ.ಎಸ್.ಯಾತನೂರ, ಆನಂದ ಮಾಡಗಿ,ಸುಧೀರ ಕಮತಗಿ, ಸಿದ್ಧಾರೂಡ ಕಟ್ಟಿಮನಿ, ಬಿ.ಎಸ್.ಟಕ್ಕಳಕಿ ಸೇರಿದಂತೆ ಇತರರಿದ್ದರು.

ಶಿರಸ್ತೆದಾರ ಜಿ.ಎಸ್.ರೂಡಗಿ ಸ್ವಾಗತಿಸಿದರು. ಎಂ.ಬಿ.ಯಡ್ರಾಮಿ ವಂದಿಸಿದರು.

Latest News

ಕವನ : ಬೆಳಕಿನ ದೀಪಾವಳಿ

ಬೆಳಕಿನ ದೀಪಾವಳಿ ಬೆಳಕು ಸರಿದು ನೇಸರನ ಅಸ್ತದೊಡನೆ ಜಗಕೆ ಜಗಮಗಿಸುವ ದೀಪಗಳ ದರ್ಶನ ಬಾನಂಚಿನಲಿ ಶಬ್ದಗಳ ನಡುವೆ ಬೆಳಕಿನ ಚಿತ್ತಾರ ಮೂಡಿಸುವ ಹಬ್ಬ ಬೆಳಕಿನ ದೀಪಾವಳಿತಮವ ಕಳೆದು ಜ್ಯೋತಿ ಬೆಳಗುವ ನಾಡಿನಪವಿತ್ರ ಹಬ್ಬ ತಳಿರು ತೋರಣ ಕಟ್ಟಿ ಮನೆಯನು ಸಿಂಗರಿಸಿ ಹಬ್ಬದಡುಗೆಯ ಸವಿಯುಣ್ಣುವ ಮನದ ಖುಷಿಯ...

More Articles Like This

error: Content is protected !!
Join WhatsApp Group