Homeಸುದ್ದಿಗಳುಸ್ವ-ಸಹಾಯ ಸಂಘಗಳ ಸದಸ್ಯರಿಗೆ ಎರಡು ದಿನಗಳ ತರಬೇತಿ ಸಮಾರೋಪ ಸಮಾರಂಭ

ಸ್ವ-ಸಹಾಯ ಸಂಘಗಳ ಸದಸ್ಯರಿಗೆ ಎರಡು ದಿನಗಳ ತರಬೇತಿ ಸಮಾರೋಪ ಸಮಾರಂಭ

ಮುನವಳ್ಳಿ : ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ದೀನದಯಾಳ ಅಂತ್ಯೋದಯ ಯೋಜನೆ ಹಾಗೂ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಅಡಿಯಲ್ಲಿ ಸ್ವ-ಸಹಾಯ ಸಂಘಗಳ ಸದಸ್ಯರಿಗೆ ಎರಡು ದಿನಗಳ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭ ಜರುಗಿತು.

ಶಿಕ್ಷಕರಾದ ವೀರಣ್ಣ ಕೊಳಕಿ, ಶಿಕ್ಷಕ ಗುರುನಾಥ ಪತ್ತಾರ, ಬಾಳು ಹೊಸಮನಿ, ಪುರಸಭೆ ಸಮುದಾಯ ಸಂಘಟನಾಧಿಕಾರಿ ವಿ.ಜಿ.ಅಂಗಡಿ, ಧಾರವಾಡದ ಪ್ರಮೀಳಾ ಕೌಶಲ್ಯಾ ಅಭಿವೃದ್ಧಿ ಸಂಸ್ಥೆಯ ವ್ಯವಸ್ಥಾಪಕಿ ಪ್ರಿಯಾ ಖೋದಾನಪುರ, ಚೇತನಾ ಡಿ. ಲಿಂಗದಾಳ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮುಖ್ಯಾಧಿಕಾರಿ ಪ್ರಕಾಶ ಚನ್ನಪ್ಪನವರ, ಕಂದಾಯ ಅಧಿಕಾರಿ ಅನಿಲ ಗಿಡ್ನಂದಿ, ಮನೋಹರ ಅಜಮನಿ, ಯಲ್ಲಪ್ಪ ಭಜಂತ್ರಿ, ಮುತ್ತಪ್ಪ ಪಾಗಾದ, ಅಡಿವೆಪ್ಪ ಬೀರಸಿದ್ದಿ, ಸುರೇಶ ಮಾನೆ ಹಾಗೂ ಪುರಸಭೆ ಸಿಬ್ಬಂದಿ ಸೇರಿದಂತೆ ಸ್ವಸಹಾಯ ಸಂಘಗಳ ಪದಾಧಿಕಾರಿಗಳು ಸದಸ್ಯರು ಇದ್ದರು.

RELATED ARTICLES

Most Popular

error: Content is protected !!
Join WhatsApp Group