spot_img
spot_img

ಭ್ರಷ್ಟರ ಮೆರವಣಿಗಗೆ ಒಂದು ವರ್ಷ; ನನ್ನ ಹೋರಾಟ ಮುಂದುವರೆಯುತ್ತದೆ

Must Read

spot_img
- Advertisement -

ಇಂದಿಗೆ ಸರಿಯಾಗಿ ಒಂದು ವರ್ಷವಾಯಿತು. ಭ್ರಷ್ಟನೊಬ್ಬ ಶಾಲೆಯ ನೆಪದಲ್ಲಿ ನಮ್ಮ ಕೋಳಿ ಫಾರ್ಮ ಬಂದ್ ಮಾಡಿಸಿ ತಮ್ಮ ನೆಂಟರಿಷ್ಟರ ಫಾರ್ಮಗಳು ಚೆನ್ನಾಗಿ ನಡೆಯುವಂತೆ ನೋಡಿಕೊಂಡು ಹೊರಟಿದ್ದಾನೆ.

ತಾನು ಮಾತ್ರ ತಲೆಯಿಂದ ಪಾದದವರೆಗೂ ಭ್ರಷ್ಟನಾಗಿ ಸಂಸ್ಥೆಯೊಂದರ ಹೆಸರಿನಲ್ಲಿ ಅಪಾರ ಹಣ ಗುಳುಂ ಮಾಡಿದ್ದಲ್ಲದೆ, ಶಾಲೆಯೆಂಬ ಪವಿತ್ರ ದೇಗುಲವನ್ನೂ ಕೂಡ ಭ್ರಷ್ಟಾಚಾರದ, ರಾಜಕಾರಣದ ಅಡ್ಡಾ ಮಾಡಿಕೊಂಡು ಹೊರಟಿದ್ದಾನೆ. ವಿಪರ್ಯಾಸವೆಂದರೆ ಈತನ ಈ ಕರ್ಮಕಾಂಡಗಳಿಗೆ ಮೂಡಲಗಿ ಶಿಕ್ಷಣ ವಲಯದ ಬಿಇಓ ಹಾಗೂ ಚಿಕ್ಕೋಡಿಯ ಡಿಡಿಪಿಐ ಕೂಡ ಇನ್ ಡೈರೆಕ್ಟಾಗಿ ಬೆಂಬಲ ನೀಡುತ್ತಿರುವುದು.

ಈ ಭ್ರಷ್ಟ ಅಧ್ಯಕ್ಷನಾಗಿರುವ ಅನಿತಾ ಗ್ರಾಮೀಣಾಭಿವೃದ್ಧಿ ಸಂಸ್ಥೆಯಲ್ಲಿ ಸೋ ಕಾಲ್ಡ್ ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಭೀಮಪ್ಪ ಗಡಾದ ಅವರ ಪತ್ನಿ ಸದಸ್ಯೆಯಾಗಿದ್ದಾರೆ ! ಅಂದರೆ ಗಡಾದ ಅವರು ತಾನೊಬ್ಬ ಸಮಾಜ ಸುಧಾರಕ, ಪ್ರಾಮಾಣಿಕತೆಯ ತುಂಡು ಎಂದು ಬೊಂಬಡಾ ಬಜಾಯಿಸುತ್ತಾ ಈ ಭ್ರಷ್ಟನ ಮೂಲಕ, ತಮ್ಮ ಪತ್ನಿಯ ಮೂಲಕ ಸಾರ್ವಜನಿಕರ ದುಡ್ಡು ಕೊಳ್ಳೆ ಹೊಡೆಯುತ್ತಿದ್ದಾರೆಯೇ ಎಂಬ ಪ್ರಶ್ನೆಗೆ ಅವರೇ ಉತ್ತರ ಹೇಳಬೇಕಾಗಿದೆ. ಇನ್ನು ಈ ಸಂಸ್ಥೆಯಲ್ಲಿ ಅನೇಕ ಸದಸ್ಯರಿದ್ದು ಅವರೆಲ್ಲ ಹಣಕಾಸಿನ ಈ ದುರುಪಯೋಗಕ್ಕೆ ಮೌನ ಸಮ್ಮತಿ ನೀಡಿದ್ದಾರೆಯೇ ಎಂಬುದೂ ಕೂಡ ಒಂದು ಪ್ರಶ್ನೆಯೇ….

- Advertisement -

ಈ ದುರಹಂಕಾರಿ ನಡೆಸುತ್ತಿರುವ ಸಮರ್ಥ ಎಂಬ ಶಾಲೆಯೇ ನಿಯಮಗಳ ಪಾಲನೆಯಿಲ್ಲದೆ ನಡೆದಿದೆ. ಒಂದೇ ಒಂದು ನಿಯಮ ಪಾಲಿಸದೇ ಇರುವ ಬಡ ಶಾಲೆಗಳಿಗೆ ನೋಟೀಸು ನೀಡಿ ಪರಾಕ್ರಮ ಮೆರೆಯುವ ಬಿಇಓ ಮನ್ನಿಕೇರಿಯವರು ಈ ಶಾಲೆಯ ವಿಷಯ ಬಂದಾಗ ಮೆತ್ತಗಾಗುತ್ತಾರೆ ಯಾಕೆಂದರೆ ಈ ಶಾಲೆಯಲ್ಲಿ ಗಡಾದ ಅವರ ಹೆಸರು ಮುಂಚೂಣಿಗೆ ಬರುತ್ತದೆ. ಗಡಾದ ಅವರ ಹೆಸರು ಕೇಳಿದರೆ ಭ್ರಷ್ಟ ಅಧುಕಾರಿಗಳು ನಡುಗುತ್ತಾರಂತೆ ! ಹಾಗಂತ ಅವರ ಚೇಲಾ ಬಡಾಯಿ ಕೊಚ್ಚುತ್ತಾನೆ.    ಗಡಾದ ಅವರೂ ಕೂಡ ಊರ ಶಾಲೆಗಳು, ಸರ್ಕಾರಿ ಕಚೇರಿಗಳು ಅಷ್ಟೇ ಯಾಕೆ ಸುವರ್ಣ ಸೌಧಕ್ಕೆ ಆಗಿರುವ ಖರ್ಚಿನ ಬಗ್ಗೆಯೂ ಪ್ರಶ್ನೆ ಕೇಳುತ್ತಾರೆ ಆದರೆ ತಮ್ಮ ಚೇಲಾನ ವಿಷಯದಲ್ಲಿ ಬಾಲ ಮುದುರಿಕೊಳ್ಳುತ್ತಾರೆ ! ಏನು ಗುಟ್ಟೋ ಏನೋ…..! 

ಅದೆಲ್ಲ ಇರಲಿ, ತನ್ನ ಬುಡಕ್ಕೇ ಇಷ್ಟೊಂದು ಕೊಳಕು ಇಟ್ಟುಕೊಂಡು ಮೆರೆಯುತ್ತಿರುವ ಈ ಪಟಾಲಂ ನಿಂದಾಗಿ ನನ್ನ ಕೋಳಿ ಫಾರ್ಮ ಬಂದ್ ಆಗಿ ವರ್ಷವಾಯಿತು. ಸಮಾಜ ಸುಧಾರಕರೆಂಬ ಈ ಗುಂಪು, ಈ ಗುಂಪಿನ ಭ್ರಷ್ಟಾಚಾರಕ್ಕೆ ಸಾಥ್ ಕೊಡುತ್ತಿರುವ ಬಿಇಓ ಹಾಗೂ ಡಿಡಿಪಿಐ ಎಂಬ ಶಿಕ್ಷಣ ಅಧಿಕಾರಿಗಳು ಇವರೆಲ್ಲರ ಮಧ್ಯೆ ಸಿಲುಕಿಕೊಂಡು ರೈತನ ಉಪಕಸುಬು ಕೋಳಿ ಫಾರಂ ಮಾಡಿಕೊಂಡಿರುವ ನನ್ನ ಹಾನಿ ಯಾರು ತುಂಬಿ ಕೊಡಬೇಕು ? 

- Advertisement -

ನಾನು ಈಗ ಹೋರಾಡುತ್ತಿದ್ದೇನೆ. ನಿಯಮ ಉಲ್ಲಂಘಿಸಿ ನಡೆಯುತ್ತಿರುವ ಸಮರ್ಥ ಶಾಲೆ, ಸಮಾಜ ಸುಧಾರಣೆಯ ಹೆಸರಿನಲ್ಲಿ ಮಾಹಿತಿ ಹಕ್ಕು ಹೋರಾಟಗಾರನ ಲೂಟಿ, ಇವರ ಅಕ್ರಮ ಆಸ್ತಿ ಗಳಿಕೆ, ಬಿಇಓ ಹಾಗೂ ಡಿಡಿಪಿಐ ಅವರ ಅನೈತಿಕ ಬೆಂಬಲದ ವಿರುದ್ಧ ಹೋರಾಟ ಆರಂಭಿಸಿದ್ದೇನೆ. ಒಬ್ಬ ರೈತನಾದ ನನ್ನ ಹೊಲಕ್ಕೇ ಹೋಗಲು ದಾರಿ ಬಂದ್ ಮಾಡಿರುವ ಗಡಾದ ಹಾಗೂ ಆತನ ಚೇಲಾನ ಅಹಂಕಾರದ ವಿರುದ್ಧ ಹೋರಾಡುತ್ತೇನೆ. ಇವರ ಬಂಡವಾಳ ಬಯಲಾಗಲಿದೆ. 

ಇವರ ಮೆರವಣಿಗೆಗೆ ಒಂದು ವರ್ಷವಾಯಿತು. ಅದಕ್ಕೇ ಈ ಒಂದು ಬರವಣಿಗೆಯ ಮೂಲಕ ಹೇಳಿಕೊಳ್ಳಬೇಕೆನಿಸಿತು.


ಉಮೇಶ ಬೆಳಕೂಡ, ಮೂಡಲಗಿ

- Advertisement -
- Advertisement -

Latest News

ಶಿವಮೊಗ್ಗದಲ್ಲಿ ರಾಷ್ಟ್ರಮಟ್ಟದ ಕನ್ನಡ ನುಡಿ ವೈಭವ ಕಾರ್ಯಕ್ರಮ

ಕರ್ನಾಟಕ ರಾಜ್ಯ ಬರಹಗಾರರ ಸಂಘ(ರಿ) ಹೂವಿನ ಹಡಗಲಿ, ಈ ಸಂಘವು ರಾಜ್ಯದ ೩೦ ಜಿಲ್ಲೆಗಳಲ್ಲಿ ಜಿಲ್ಲಾ ಘಟಕ ಸ್ಥಾಪನೆ ಮಾಡಿದ್ದು ಜಿಲ್ಲಾ ಅಧ್ಯಕ್ಷರ ನೇಮಕ ಮಾಡಲಾಗಿದೆ....
- Advertisement -

More Articles Like This

- Advertisement -
close
error: Content is protected !!
Join WhatsApp Group