- Advertisement -
ಬೀದರ – ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ದಾಡಗಿ ಗ್ರಾಮದ ಹತ್ತಿರದ ಕಾರಂಜಾ ನದಿಗೆ ಅಡ್ಡಲಾಗಿ ಮೀನು ಹಿಡಿಯಲು ಹೋದ ಯುವಕನೋರ್ವ ನೀರಿನ ಸುಳಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ವರದಿಯಾಗಿದೆ.
ಪಟ್ಟಣದ ಹೊರ ವಲಯದ ಬಸವನಗರ ನಿವಾಸಿ ಸಂತೋಷ ಧರ್ಮರಾಜ ಕಟ್ಟಿಮನಿ (30) ಮೃತ ಯುವಕ.
ತನ್ನ ಸಹೋದರರರೊಂದಿಗೆ ರವಿವಾರ ಮೀನಿನ ಬಲೆಯೊಂದಿಗೆ ನೀರಿಗೆ ಇಳಿದಾಗ ಕಾಲು ಜಾರಿ ಬಿದ್ದು ನೀರಿನ ಸುಳಿಗೆ ಸಿಲುಕಿದ್ದಾನೆ. ಈಜು ಬಾರದಿರುವುದರಿಂದ ತುಂಬಾ ಹೊತ್ತು ನೀರಿನ ಸುಳಿಯಲ್ಲಿ ಸಿಕ್ಕು ಮೃತ ಪಟ್ಟಿದ್ದಾನೆ. ಈ ಕುರಿತು ಖಟಕ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -
ಈ ಮುಂಚೆ ನೀರಿನಲ್ಲಿ ಮುಳುಗಿದ್ದ ಯುವಕನ ದೇಹವನ್ನು ಹೊತ್ತು ತಂದ ಯುವಕರಿಬ್ಬರು ಕೃತಕ ಉಸಿರಾಟ ನೀಡಿ ಆತನನ್ನು ಬದುಕಿಸಲು ನಡೆಸಿದ ಯತ್ನ ವಿಫಲವಾಯಿತು.