ಬೆಳಗಾವಿ: ಆಜೂರ ಪ್ರತಿಷ್ಠಾನದಿಂದ ಪ್ರತಿ ವರ್ಷ ನೀಡುವ ಬೆಳಗಾವಿ ಜಿಲ್ಲಾಮಟ್ಟದ 2025ನೇ ಸಾಲಿನ ಆಜೂರ ಪ್ರಶಸ್ತಿಗೆ ಬೆಳಗಾವಿಯ ಸಾಹಿತಿ ಹಿರಿಯ ಭಾಷಾ ಶಿಕ್ಷಕರಾದ ಡಾ. ಸುನೀಲ ಪರೀಟ ಅವರ ‘ಮಕ್ಕಳ ನೈತಿಕ ವಚನಗಳು’ ಕೃತಿ ಆಯ್ಕೆಯಾಗಿದೆ.
ಜ.15ರಂದು ಹಾರೂಗೇರಿ ಪಟ್ಟಣದ ಆಜೂರ ತೋಟದ ಮಹಾಮನೆಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಪ್ರತಿಷ್ಠಾನದವರು ತಿಳಿಸಿದ್ದಾರೆ.
ಡಾ. ಸುನೀಲ ಪರೀಟ ಅವರಿಂದ ಇದುವರೆಗೆ 9 ಕೃತಿಗಳು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿತವಾಗಿವೆ. ಅದರಲ್ಲಿ ನಾಲ್ಕು ಸ್ವಂತ ಹಾಗೂ ಐದು ಸಂಪಾದಕ ಕೃತಿಗಳಾಗಿವೆ.
ಸಾಹಿತ್ಯ ವಲಯದಲ್ಲಿ ಅತ್ಯಂತ ಕ್ರಿಯಾಶೀಲರಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಪರೀಟ ಅವರಿಗೆ ಈಗಾಗಲೇ ಕರ್ನಾಟಕ ಸರ್ಕಾರದಿಂದ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ, ಡಾ. ಡಿ.ಎಸ್. ಕರ್ಕಿ ಕಾವ್ಯ ಪ್ರಶಸ್ತಿ, ಶಿಕ್ಷಾಶಿಲ್ಪಿ ಪ್ರಶಸ್ತಿ, ಭಾರತ ಗೌರವ ಪ್ರಶಸ್ತಿ, ಡಾ. ಅಂಬೇಡ್ಕರ್ ಫಿಲೋಶಿಪ್ ಪ್ರಶಸ್ತಿ ಸೇರಿದಂತೆ ರಾಜ್ಯ ಹಾಗೂ ರಾಷ್ಟ ಮಟ್ಟದಲ್ಲಿ ಹಲವು ಪ್ರಶಸ್ತಿಗಳು ಲಭಿಸಿವೆ.

