ಬೆಳಗಾವಿಯ ಸಾಹಿತಿ, ಕವಯತ್ರಿ ಶ್ರೀಮತಿ ಇಂದಿರಾ ಮೋಟೆಬೆನ್ನೂರ ಅವರ ‘ಬಸವಣ್ಣ ಬರುವಾಗ ಬಿಸಿಲು ಬೆಳುದಿಂಗಳು’ ಕೃತಿಗೆ ಆಜೂರ ಪ್ರತಿಷ್ಠಾನದಿಂದ ನೀಡುವ ಬೆಳಗಾವಿ ಜಿಲ್ಲಾ ಮಟ್ಟದ 2025 ನೇ ಸಾಲಿನ ಆಜೂರ ಪ್ರಶಸ್ತಿ ಲಭಿಸಿದೆ..
ಪ್ರಶಸ್ತಿ ಪ್ರದಾನ ಸಮಾರಂಭವು ಜನವರಿ 15 ರಂದು ಹಾರೂಗೇರಿ ಪಟ್ಟಣದ ಆಜೂರ ತೋಟದ ಮಹಾಮನೆಯಲ್ಲಿ ಜರುಗುವುದೆಂದು ಪ್ರತಿಷ್ಠಾನ ತಿಳಿಸಿದೆ.
ಕವಿಯತ್ರಿ, ಲೇಖಕಿ ಇಂದಿರಾ ಮೋಟೆಬೆನ್ನೂರ ಅವರಿಂದ ಮೂರು ಕೃತಿಗಳು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿತವಾಗಿವೆ…ಇನ್ನೂ ಮೂರು ಕೃತಿಗಳು ಪ್ರಕಟಣೆಯ ಹಂತದಲ್ಲಿವೆ…
ಹಲವು ಗೌರವ ಪುರಸ್ಕಾರಗಳು, ಪುಸ್ತಕ ಪ್ರಶಸ್ತಿಗಳಿಗೆ ಇವರ ಕೃತಿಗಳು ಭಾಜನವಾಗಿವೆ…
೧) ಡಾ. ಡಿ. ಎಸ್. ಕರ್ಕಿ ಕಾವ್ಯ ಪ್ರಶಸ್ತಿ
೨) ರಾಷ್ಟ್ರಕೂಟ ಸಾಹಿತ್ಯ ಪ್ರಶಸ್ತಿ
೩) ಕನ್ನಡ ಸಾಹಿತ್ಯ ಪರಿಷತ್ ದತ್ತಿ ಪ್ರಶಸ್ತಿ
೪) ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ದತ್ತಿ ಪ್ರಶಸ್ತಿ…
ಮೋಟೆಬೆನ್ನೂರ ಅವರು ಸಾಹಿತ್ಯ ವಲಯದಲ್ಲಿ ಅತ್ಯಂತ ಕ್ರಿಯಾಶೀಲರಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

