spot_img
spot_img

ಅಜ್ಞಾತ ದಾನಿಯೊಬ್ಬನ ಕುರಿತು….

Must Read

- Advertisement -

ಕೊಲ್ಲಾಪುರದಲ್ಲಿ ಒಬ್ಬ ಮಹಾನುಭಾವ ಇದ್ದಾನೆ. (ನಾನು ಇಲ್ಲಿ ಅವನನ್ನು ಏಕವಚನದಲ್ಲಿ ಉಲ್ಲೇಖಿಸುತ್ತಿರುವೆ. ಏಕೆಂದರೆ ಭಗವಂತನನ್ನು ನಾವುಗಳು ಎಂದಾದರೂ ಬಹುವಚನದಿಂದ ಕರೆಯುತ್ತೇವೆಯೇ ? ) ಆತನ ಹೆಸರು ಶ್ರೀ ರಜತಕುಮಾರ್ ಓಸ್ವಾಲ್!

ಅವನು ಈಗ ಹಿಂದಿನ ನಾಲ್ಕೈದು ದಿನಗಳ ಮುಂಚೆ ಫೇಸ್ಬುಕ್ ನಲ್ಲಿ ಒಂದು ಸಂದೇಶ ಕಳಿಸಿದ್ದನು. ಅದರಲ್ಲಿ ಆತ ಮಹಾರಾಷ್ಟ್ರ ರಾಜ್ಯದ ಕೊಲ್ಹಾಪುರ ಶಹರ ಹಾಗೂ ಅಕ್ಕಪಕ್ಕದ ಪ್ರದೇಶಗಳ ಬಡಜನರಿಗೆ ಉದ್ದೇಶಿಸಿ ಹೇಳಿದ್ದ.

ಅದೆಂದರೆ ಇಂದಿನ ಕೊರೊನಾ ಸಂಕಷ್ಟದ ದಿನಗಳಲ್ಲಿ ಎಲ್ಲಾ ಉದ್ಯೋಗ , ದುಡಿಮೆ ಬಂದ್ ಆಗಿದ್ದು , ಎಲ್ಲರೂ ಮನೆಯಲ್ಲಿಯೇ ಇರುವ ದುರ್ಧರ ಪರಿಸ್ಥಿತಿ ಬಂದೊದಗಿದ್ದು, ಬಹಳಷ್ಟು ಜನರು ಅತ್ಯಂತ ಕಷ್ಟದಲ್ಲಿ ಜೀವನ ನೂಕುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಮಧ್ಯಮ ವರ್ಗದ ಜನರು ಅತ್ತ ಸಂಕಟ ಹೇಳಲಾಗದೇ ಇತ್ತ ಯಾರ ಹತ್ತಿರವೂ ಸಹಾಯ ಕೇಳಲಾಗದೇ ವಿಲಿವಿಲಿ ಒದ್ದಾಡುತ್ತಿದ್ದಾರೆ.

- Advertisement -

ಆದ್ದರಿಂದ ಯಾರೂ ತಾವು ಹಾಗೂ ತಮ್ಮ ಸಣ್ಣ ಸಣ್ಣ ಮಕ್ಕಳನ್ನು ಉಪವಾಸ ಮಲಗಲು ಬಿಡಬಾರದು. ನನ್ನ ಮೊಬೈಲ್ ಗೆ ಒಂದು ಕರೆ ಮಾಡಿರಿ. ನನಗೆ ನಿಮ್ಮ ಮನೆಯ ವಿಳಾಸ ಕೊಡಿರಿ. ನಾನು ನಿಮ್ಮ ಮನೆಯ ಬಾಗಿಲಿನ ಹೊರಗೆ ನನ್ನ ಕೈಲಾದ ಸೇವೆಯ ಕಿಟ್ಟನ್ನು ಇಟ್ಟು ಹೋಗುತ್ತೇನೆ. ನಾನು ನಿಮಗೆ ನನ್ನ ಮುಖ ತೋರಿಸುವುದಿಲ್ಲ.

ನಿಮ್ಮ ಮುಖ ನಾನು ನೋಡುವುದಿಲ್ಲ. ಇಂದಿನ ಸಂಕಷ್ಟದ ಸ್ಥಿತಿಯನ್ನು ಪರಿಹರಿಸಿಕೊಳ್ಳೋಣ. ಮುಂದೆ ಇಂಥ ಸಂಕಷ್ಟ ಬೇರೆ ಯಾರಿಗಾದರೂ ಬಂದಾಗ , ನೀವು ಇಂದು ನನ್ನಿಂದ ಪಡೆದಿರುವುದನ್ನು ಅವರಿಗೆ ಮರಳಿಸಲು ಅವಕಾಶ ಇದೆ. ಯಾವುದೇ ಮುಜುಗರವಿಲ್ಲದೇ ನನಗೆ ಕರೆ ಮಾಡಿ ಎಂದು ಅದರಲ್ಲಿ ಆತ ತಿಳಿಸಿದ್ದ.

ನಾನು ಸಹಜವಾಗಿಯೇ ಅವನಿಗೆ ಒಂದು ಕರೆ ಮಾಡಿ , ಕೊಲ್ಲಾಪುರದಲ್ಲಿ ರಂಕಾಳಾ ಭಾಗದಲ್ಲಿ ಇಂಥವರು ತೊಂದರೆಯಲ್ಲಿದ್ದಾರೆ. ನಿಮಗೆ ಸಹಾಯ ಮಾಡಲು ಅನುಕೂಲವಿದ್ದರೆ ಮಾಡಿ ಎಂದೆ.

- Advertisement -

ನಾನು ಕರೆ ಮಾಡಿದ ಒಂದು ಗಂಟೆಯಲ್ಲಿಯೆ ನಾನು ತಿಳಿಸಿದ ವಿಳಾಸಕ್ಕೆ ಅವನಿಂದ ಒಂದು ತಿಂಗಳಿಗಾಗುವಷ್ಟು ಆಹಾರದ ಕಿಟ್ಟು ತಲುಪಿಯಾಗಿತ್ತು.

ಇದರ ಕುರಿತು ಅವರಿಂದ ಯಾವುದೇ ಫೋಟೋ ಇಲ್ಲ ! ನೋ ಕವ್ಹರೇಜ್ ನೋ ಪಾಲಿಟಿಕ್ಸ್ ಧಾನ್ಯ ನೀಡಿದ ಬಗ್ಗೆ ಫೇಸ್ ಬುಕ್ ನಲ್ಲಿ ನೋ ಫೋಟೋ…

ಇಂದು ಇಂತಹ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಮಹಾದಾನಿಗಳ ಅವಶ್ಯಕತೆ ಇರುತ್ತದೆ. ರಜತ್ ಕುಮಾರ್ ಓಸ್ವಾಲ್ ಇಲ್ಲಿಯವರೆಗೆ ಸುಮಾರು 450 ಕ್ಕೂ ಹೆಚ್ಚು ಕುಟುಂಬಕ್ಕೆ ಸಹಾಯ ಮಾಡಿದ್ದಾರೆ.

ಅವರ ಒಪ್ಪಿಗೆ ಇಲ್ಲದೆಯೇ ನಾನು ಇಲ್ಲಿ ಎಲ್ಲರಿಗೂ ತಿಳಿಸುತ್ತಿದ್ದೇನೆ. ದಯವಿಟ್ಟು ರಜತ್ ಓಸ್ವಾಲ್ ರವರು ನನ್ನನ್ನು ಕ್ಷಮಿಸಬೇಕು. ಶ್ರೀ ರಜತ್ ಓಸ್ವಾಲ್ ಅವರ ಮೊಬೈಲ್ 9766152661 ಇರುತ್ತದೆ.

– ನೀಲಕಂಠ ದಾತಾರ.

- Advertisement -
- Advertisement -

Latest News

ಹಾಸನ ವಿದ್ಯಾನಗರ ಕುವೆಂಪು ಯುವಕರ ಸಂಘದಿಂದ ಅದ್ಧೂರಿ ಕನ್ನಡ ರಾಜ್ಯೋತ್ಸವ

ಹಾಸನ ವಿದ್ಯಾನಗರ ಕುವೆಂಪು ರಸ್ತೆ. ಇಲ್ಲಿಯ ಕುವೆಂಪು ಯುವಕರ ಸಂಘದಿಂದ ದಿ 24 - 11 - 2024ರ ಭಾನುವಾರ ಕುವೆಂಪು ಸರ್ಕಲ್ ನಲ್ಲಿ ಅದ್ದೂರಿ...
- Advertisement -

More Articles Like This

- Advertisement -
close
error: Content is protected !!
Join WhatsApp Group