ಬೀದರ: ಭ್ರಷ್ಟ ಅಧಿಕಾರಿ ಕಚೇರಿ ಮೇಲೆ ಎಸಿಬಿ ದಾಳಿ

Must Read

ಬೀದರ – ಜಿಲ್ಲಾ ಪಂಚಾಯತ ಬೀದರ್ ನ ಗ್ರಾಮೀಣ ಕುಡಿಯುವ ನೀರು ಯೋಜನೆ ಕಚೇರಿಯ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿದ್ದು ಒಬ್ಬ ಅಧಿಕಾರಿಯನ್ನು ಬಲೆಗೆ ಕೆಡವಿದ್ದಾರೆ.

ಜಿಲ್ಲಾ ಪಂಚಾಯತಿಯ ಅಸಿಸ್ಟೆಂಟ್ ಇಂಜಿನೀಯರ್ ನಾಗನಾಥ್ ಬಿರಾದಾರ ಎಂಬುವವರು ಜಲ ಜೀವನ್ ಮಿಷನ್ ಅಡಿಯಲ್ಲಿ ಫೈಲ್ ಮೂವ್ ಮೆಂಟ್ ಮಾಡಲು ರೂ. 30 ಸಾವಿರ ಹಣ ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಗುತ್ತಿಗೆದಾರ ಮಚ್ಚೆಂದ್ರರಡ್ಡಿ ಅವರಿಂದ ಲಂಚ ಪಡೆಯುವಾಗ ಜಿ ಪಂ ಎಇಇ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಎಸಿಬಿ ಎಸ್ಪಿ ಅಮರನಾಥ್ ರಡ್ಡಿ ಮಾರ್ಗದರ್ಶನದಲ್ಲಿ ಡಿಎಸ್ಪಿ ಹಣಮಂತರಾಯ, ಪಿಐ ಶರಣಬಸಪ್ಪಾ ಕೋಡಲಾ, ವೆಂಕೆಟೇಶ್ ಎಡಹಳ್ಳಿ, ಹಾಗೂ ಸಿಬ್ಬಂದಿಗಳಾದ ಶ್ರೀಕಾಂತ್,ಕುಶಾಲ್, ಅನಿಲ್,ಕಿಶೋರ್ ಸೇರಿದಂತೆ ಹಲವು‌ ಸಿಬ್ಬಂದಿಗಳು ದಾಳಿಯಲ್ಲಿ ಭಾಗಿಯಾಗಿದ್ದರು.

ಸದರಿ ಅಧಿಕಾರಿಯ ಮೇಲೆ ಅಕ್ರಮ ಹಣ ಗಳಿಕೆ ದೂರುಗಳ ಹಿನ್ನಲೆ ಈ ದಾಳಿ ನಡೆದಿದ್ದು ಪ್ರಕರಣ ದಾಖಲಾಗಿದೆ.

ವರದಿ: ನಂದಕುಮಾರ ಕರಂಜೆ, ಬೀದರ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group