- Advertisement -
ಬೀದರ: ಆಕಸ್ಮಿಕವಾಗಿ ಮನೆಗೆ ಬೆಂಕಿ ತಗುಲಿ ಮನೆಯಲ್ಲಿದ್ದ ಅಪಾರ ಪ್ರಮಾಣದ ಗೃಹ ಉಪಯೋಗಿ ವಸ್ತುಗಳು ಸುಟ್ಟು ಕರಕಲಾದ ಘಟನೆ ಬೀದರ್ ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ತಾಳಮಡಗಿ ಗ್ರಾಮದಲ್ಲಿ ನಡೆದಿದೆ.
ಬಸವರಾಜ್ ತಂದೆ ಅರ್ಜುನ ನಂದಗಾವ ಅವರ ಮನೆಗೆ ಬೆಂಕಿ ತಗುಲಿ ಮನೆಯಲಿದ್ದ, ಜೋಳ, ಬಟ್ಟೆ,ಅಲಮಾರಿ ಒಳಗೆ ಇದ್ದ ಹಣ ಮತ್ತು ಬಂಗಾರ ಬೆಳ್ಳಿ ಸುಟ್ಟು ಕರಕಲಾಗಿವೆ.
ಮನೆಯ ಮಾಲೀಕರು ಸಂಕಷ್ಟದಲ್ಲಿದ್ದು, ನಾವು ಕಡು ಬಡವರು ನಮಗೆ ನಾಳೆ ಊಟ ಮಾಡಲು ಗತಿಯಿಲ್ಲ, ದಯವಿಟ್ಟು ನಮಗೆ ಸಹಾಯ ಮಾಡಿ,ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದೇವೆ,ಮನೆಯಲ್ಲಿ ಇದ್ದ ಎಲ್ಲವೂ ಸುಟ್ಟು ಹೋಗಿವೆ ನಮಗೆ ಸಹಾಯ ಮಾಡಿ ಎಂದು ಮನವಿ ಮಾಡುತ್ತಿದ್ದಾರೆ.
- Advertisement -
ವರದಿ: ನಂದಕುಮಾರ ಕರಂಜೆ, ಬೀದರ