ಬೀದರ – ಪ. ಬಂಗಾಳದಲ್ಲಿ ಬಾಂಗ್ಲಾದೇಶಿಯರು ನುಸುಳಲು ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾರ್ಜಿ ಕಾರಣ ಎಂದು ಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್ ಮಮತಾ ಬ್ಯಾನರ್ಜಿಯವರು ವಿರುದ್ಧ ವಾಗ್ದಾಳಿ ನಡೆಸಿದರು.
ಬೀದರನಲ್ಲಿ ಪತ್ರಕರ್ತರೊಡನೆ ಅವರು ಮಾತನಾಡಿದರು.
ಇಡಿ ದೇಶದಲ್ಲೇ ನಾಲ್ಕು ರಾಜ್ಯದಲ್ಲಿ ಮಾತ್ರ ಕಾಂಗ್ರೆಸ್ ಸರ್ಕಾರದ ಅಧಿಕಾರ ಇದೆ. ಕಾಂಗ್ರೆಸ್ ಸರಕಾರ ಆಡಳಿತ ವಿರುವ ರಾಜ್ಯದಲ್ಲಿ ಮಾತ್ರ ಬಾಂಗ್ಲಾದೇಶದ ಪ್ರಜೆಗಳಿಗೆ ಆಸರೆಯಾಗಿ ನಿಂತಿದೆ ಎಂದರು.
ಪಶ್ಚಿಮ ಬಂಗಾಳ ಮುಖ್ಯ ಮಂತ್ರಿ ಮಮತಾ ಬ್ಯಾನರ್ಜಿಯವರು ಕೇಂದ್ರ ಸರ್ಕಾರಕ್ಕೆ ಜಾಗ ಕೊಡುತ್ತಿಲ್ಲ. ದೇಶದಲ್ಲಿ ಭದ್ರತೆ ಇರಬೇಕು ಅಂದರೆ ಪಶ್ಚಿಮ ಬಂಗಾಳ ಬಾರ್ಡರ್ ತಂತಿಯನ್ನು ಹಾಕಬೇಕು. ಬಾರ್ಡರ್ ಹಾಕಲು ಪಶ್ಚಿಮ ಬಂಗಾಳ ಸರಕಾರ ಸಹಕಾರ ಮಾಡುತ್ತಿಲ್ಲ. ಬಾಂಗ್ಲಾದೇಶದ ಪ್ರಜೆಗಳು ದೇಶದ ಒಳಗೆ ಬರಲು ಮಮತಾ ಬ್ಯಾನರ್ಜಿಯವರು ಸರ್ಕಾರ ಕಾರಣ ಎಂದು ಆರೋಪಿಸಿದರು.
ಇನ್ನು ಎಷ್ಟು ದಿನ ಇರುತ್ತೀನೋ ಎಂಬ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿಕೆ ಬಗ್ಗೆ ಮಾತನಾಡಿದ ರವಿಕುಮಾರ, ಅವರ ಅಧಿಕಾರದ ದಾಖಲೆ ಮಾಡುವ ಸಂದರ್ಭದಲ್ಲಿ ಭಾವನಾತ್ಮಕ ಹೇಳಿಕೆ ಕೊಟ್ಟಿದ್ದಾರೆ ಎಂದರು.
ಆದರೆ ಸಿದ್ಧರಾಮಯ್ಯ ಮಾಡಿದ್ದು ದಾಖಲೆ ಅಲ್ಲ ಎರಡು ತಿಂಗಳು ಗೃಹಲಕ್ಷ್ಮಿ ಹಣ ಹಾಕಿಲ್ಲ ಇದೊಂದು ದಾಖಲೆ, ೧೪ ಮುಡಾ ಸೈಟ್ ತೆಗೆದುಕೊಂಡು ವಾಪಸ್ ಕೊಟ್ಟಿದ್ದು, ೩೫೦ ವಸ್ತುಗಳ ಮೇಲೆ ಹೆಚ್ಚುವರಿ ಜಿಎಸ್ ಟಿ ಹಾಕಿದ್ದು, ಕಸದ ಮೇಲೂ ಟ್ಯಾಕ್ಸ್ ಹಾಕಿದರು, ಉತ್ತರ ಕರ್ನಾಟಕದ ಎಸ್ ಸಿ ಎಸ್ ಟಿ ಗಳಿಗೆ ಮನೆ ಕೊಡಲಿಲ್ಲ, ಕೋಗಿಲು ಲೇಔಟ್ ನಲ್ಲಿ ಬಾಂಗ್ಲಾ ದೇಶೀಯರಿಗೆ ಮನೆ ಕೊಟ್ಟರು…ಇವೇ ಸಿದ್ಧರಾಮಯ್ಯ ಅವರ ದಾಖಲೆಗಳು ಇಂಥ ಸಿಎಂ ಯಾರಾದರೂ ಇದ್ದಾರಾ ಎಂದು ವ್ಯಂಗ್ಯವಾಗಿ ಪ್ರಶ್ನೆ ಮಾಡಿದರು.
ಹುಬ್ಬಳ್ಳಿಯಲ್ಲಿ ಮಹಿಳೆಯ ಮೇಲೆ ಪೊಲೀಸ್ ದೌರ್ಜನ್ಯ ಖಂಡನೀಯ ಎಂದ ಅವರು ಬಳ್ಳಾರಿ ಘಟನೆಗೆ ಸಂಬಂಧಿಸಿದಂತೆ, ರಾಜ್ಯದಲ್ಲಿ ಗೂಂಡಾ ರೀತಿಯ ಸರ್ಕಾರದ ಚಟುವಟಿಕೆ ನಡೆಯುತ್ತಿದೆ ಎಂದು ಆರೋಪಿಸಿದರು.
ವರದಿ : ನಂದಕುಮಾರ ಕರಂಜೆ, ಬೀದರ

