spot_img
spot_img

ಸಾಧಕರ ಬದುಕು ಎನ್.ಎಸ್.ಎಸ್ ಶಿಬಿರಾರ್ಥಿಗಳಿಗೆ ಆದರ್ಶವಾಗಲಿ

Must Read

spot_img
- Advertisement -

ಬೇವೂರು : ಗಾಂಧೀಜಿ, ಅಬ್ರಾಹಿಂ ಲಿಂಕನ್, ಅಲೆಕ್ಸಾಂಡರ್ ಮುಂತಾದ ಮಹನೀಯರ ಬದುಕಿನ ಸಾಹಸಗಾಥೆಗಳು ಯುವ ಸಮುದಾಯಕ್ಕೆ ಆದರ್ಶಪ್ರಾಯವಾಗಬೇಕು ಅನೇಕ ಪೆಟ್ಟುಗಳನ್ನು ಏರಿಳಿತಗಳನ್ನು ಕಂಡು ಜೀವನದಲ್ಲಿ ಸಾಧನೆ ತೋರಿದ ಸಾಧಕರ ಬದುಕು ಚಿರಸ್ಮರಣೆಯಾಗಿದೆ ಎಂದು ಡಾ. ಎಸ್ ಎಸ್ ಹಂಗರಗಿ ಪ್ರಾಧ್ಯಾಪಕರು ಹೇಳಿದರು.

ಪಿ. ಎಸ್ .ಎಸ್ ಕಾಲೇಜಿನ ವತಿಯಿಂದ ಸಮೀಪದ ಚಿಟಗಿನಕೊಪ್ಪ ಗ್ರಾಮದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಿಶೇಷ ವಾರ್ಷಿಕ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೃಷ್ಣಾ ಬಲದಂಡೆ ಸೀತಿಮನಿಯ ಶ್ರೀ ವಶಿಷ್ಠ ಮಹಾಮನಿಗಳು ಶ್ರದ್ದಾನಂದ ಮಠ ಪೂಜ್ಯರು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನುಡಿಗಳನ್ನಾಡಿ ವಿದ್ಯಾರ್ಥಿಗಳು ವಿಜ್ಞಾನದ ಜ್ಞಾನಕ್ಕಿಂತ ಸಂಸ್ಕಾರದ ಬದುಕಿಗೆ ಹೆಚ್ಚಿನ ಬೆಲೆ ಕೊಡಬೇಕೆಂದು ಹೇಳಿದರು.

- Advertisement -

ಆದರ್ಶ ವಿದ್ಯಾ ವರ್ಧಕ ಸಂಘದ ಸದಸ್ಯರಾದ ಡಿ.ಜಿ ಶಿರೂರ ಅಧ್ಯಕ್ಷತೆ ವಹಿಸಿದ್ದರು. ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಜ.ಗು. ಬೈರಮಟ್ಟಿ, ಹಿರಿಯ ಉಪನ್ಯಾಸಕರಾದ ಬಿ.ಬಿ ಬೇವೂರ ಉಪನ್ಯಾಸಕರಾದ ಎನ್. ಬಿ ಬೆನ್ನೂರ ಸೇರಿದಂತೆ ಕಾರ್ಯಕ್ರಮದಲ್ಲಿ ವೈ. ಎಚ್ ಬೆನಕನವಾರಿ ಎನ್. ಬಿ. ಪಾಟೀಲ್, ಜಿ.ಸಿ ಕಡೂರು ಶ್ರೀಮತಿ ಎಸ್. ಎಂ ಚಲವಾದಿ ಹಾಗೂ ಎಸ್.ಡಿ.ಎಂ.ಸಿಯ ಸರ್ವ ಸದಸ್ಯರು ಪ್ರಭಾರಿ ಮುಖ್ಯ ಗುರುಗಳಾದ ಸುನಿಲ ಪಾಟೀಲ ಗ್ರಾಮದ ಗುರುಹಿರಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಉಪನ್ಯಾಸಕರಾದ ಎಸ್ ಎಸ್ ಆದಾಪುರ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು ಡಾ. ಸಂಗಮೇಶ.ಬಿ.ಹಂಚಿನಾಳ ಅತಿಥಿಗಳನ್ನ ಪರಿಚಯಿಸಿದರು.ಡಿ.ವಾಯ್.ಬುಡ್ಡಿಯವರ ಮಾಲಾರ್ಪಣೆ ಕಾರ್ಯಕ್ರಮ ನೆರವೇರಿಸಿ ಕೊಟ್ಟರು. ಡಾ.ಎ.ಎಮ್.ಗೊರಚಿಕ್ಕನವರ ನಿರೂಪಿಸಿದರು ಎನ್.ಎಸ್.ಎಸ್ ಯೋಜನಾಧಿಕಾರಿ ಜಿ.ಎಸ್ ಗೌಡರ ವಂದಿಸಿದರು ಈ ಉದ್ಘಾಟನಾ ಸಮಾರಂಭದಲ್ಲಿ ಪರಪ್ಪ ಸಂಗಪ್ಪ ಸಜ್ಜನ ಕಾಲೇಜಿನ 50 ಶಿಬಿರಾಥಿ೯ ಸ್ವಯಂಸೇವಕರು ಭಾಗಿಯಾಗಿದ್ದರು.

- Advertisement -
- Advertisement -

Latest News

ಕವನ : ದ್ರೌಪದಿಯ ಸ್ವಗತ

ದ್ರೌಪದಿಯ ಸ್ವಗತ ನಾನು ಅರಸುಮನೆತನದ ಹೆಣ್ಣು, ಅರ್ಧಜಗದ ಮಣೆ ಹಿಡಿದ ಹೆಣ್ಣು. ಆದರೂ ನನ್ನ ಬದುಕು ಒಂದು ಕತ್ತಲು ಗವಿಯಂತೆ, ನೂರು ಚೂಪಿನ ಕತ್ತಿಗಳ ಮಧ್ಯೆ ಹೆಜ್ಜೆ ಹಾಕಿದಂತಿತ್ತು. ನಾನು ಕದನದ ಕಿಡಿಯಾದೆ ಅವಮಾನಗಳ ನೆರಳಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group