ಬೀದರ – ಮಹಿಳೆಯರ ಮೇಲೆ ಯಾರೇ ಅನ್ಯಾಯ ಮಾಡಿದರೂ, ತಪ್ಪು ಮಾಡಿದರೂ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುತ್ತದೆ. ಶಿಡ್ಲಘಟ್ಟ ಪ್ರಕರಣದಲ್ಲಿ ಈಗಾಗಲೇ ಎಫ್ಆಯ್ಆರ್ ಆಗಿದೆ ಎಷ್ಟೇ ದೊಡ್ಡ ವ್ಯಕ್ತಿಯಾದರೂ ಪೊಲೀಸರು ಬಂಧಿಸುತ್ತಾರೆ ಕ್ರಮ ಜರುಗಿಸುತ್ತಾರೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ ಹೇಳಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಯಾರನ್ನೂ ಸಮರ್ಥನೆ ಮಾಡುವುದಿಲ್ಲ ಯಾರೇ ತಪ್ಪುಮಾಡಿದರೂ ಅದು ತಪ್ಪೇ ಅವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ ಎಂದರು.
ರಾಜ್ಯದಲ್ಲಿ ಸಿಎಂ ಡಿಸಿಎಂ ಸಂಕ್ರಾಂತಿ ಕ್ರಾಂತಿಯ ಬಗ್ಗೆ ಚರ್ಚೆಯ ವಿಚಾರ ಮಾತನಾಡಿದ ಅವರು, ರಾಹುಲ್ ಗಾಂಧಿಯವರು ಇಬ್ಬರ ಜೊತೆ ಮಾತನಾಡಿದ್ದಾರೆ ಅಧಿವೇಶನ ಮುಗಿದ ಮೇಲೆ ಹೈಕಮಾಂಡ್ ಈ ವಿಷಯ ಚರ್ಚೆ ಮಾಡುತ್ತದೆ ಎಂದರು.
ವರದಿ : ನಂದಕುಮಾರ ಕರಂಜೆ, ಬೀದರ

