ಮುನವಳ್ಳಿ: “ಶಾಲಾ ಆರಂಭಿಕ ಮೊದಲ ಮೂರು ತಿಂಗಳು ಆರಂಭಿಕ ಶಿಕ್ಷಣ ಹಂತ ವಿದ್ಯಾ ಪ್ರವೇಶ,ಇಲ್ಲಿ ಮಕ್ಕಳಿಗೆ ಸಂತಸದ ಕಲಿಕೆ ಆಗಬೇಕು. ೭೨ ದಿನಗಳ ಈ ಅವಧಿಯಲ್ಲಿ ಚಟುವಟಿಕೆ ಆಧಾರಿತ ಕಲಿಕೆ ಜರುಗುವ ಮೂಲಕ ಕಲಿಕಾ ಚೇತರಿಕೆ ನಲಿಕಲಿ ೧.೨.೩. ತರಗತಿಗಳ ಸಮ್ಮಿಳಿತದ ಬಹುವರ್ಗ ಬೋಧನೆ ಭಾಷಾವಾರು ಮಕ್ಕಳಿಗೆ ಜರಗುತ್ತದೆ. ಇದು ನಿಜಕ್ಕೂ ಉತ್ತಮ ಯೋಜನೆ, ಚಟುವಟಿಕೆ ಆಧಾರಿತ ಜರುಗುವ ನಲಿಕಲಿ ತರಗತಿ ಬಹುವರ್ಗ ಬೋಧನೆಯ ಜೊತೆಗೆ ಸಂತಸದ ಕಲಿಕೆ ಒಳಗೊಂಡಿದೆ” ಎಂದು ದಾರವಾಡ ಆಪರ ಆಯುಕ್ತರ ಕಾರ್ಯಾಲಯದ ಸಹನಿರ್ದೇಶಕರಾದ ಶ್ರೀ ಗಜಾನನ ಮನ್ನೀಕೇರಿ ತಿಳಿಸಿದರು.
ಅವರು ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಎರಡು ದಿನಗಳ ನಲಿಕಲಿ ಕಲಿಕಾ ಚೇತರಿಕೆ ತರಬೇತಿ ಕಾರ್ಯಾಗಾರಕ್ಕೆ ಭೇಟಿ ನೀಡಿ ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಎಂ.ಬಿ.ಬಳಿಗಾರ.ತರಬೇತಿಯಲ್ಲಿ ರಾಜ್ಯ ಸಂಪನ್ಮೂಲ ವ್ಯಕ್ತಿಗಳಾದ ಮನೋಹರ ಚೀಲದ. ಎಫ್.ಜಿ.ನವಲಗುಂದ ಶಿಕ್ಷಣ ಸಂಯೋಜಕರಾದ ಗುರುನಾಥ ಕರಾಳೆ. ಸಿಂದೋಗಿ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಎನ್.ಎ.ಹೊನ್ನಳ್ಳಿ ಮುನವಳ್ಳಿ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಮೀನಾಕ್ಷಿ ಮುರನಾಳ, ಹೂಲಿ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ತಿಮ್ಮಯ್ಯ. ಶಿಕ್ಷಕರ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಪಿ.ಎಸ್.ಶಿಂಧೆ. ಸುಲೇಮಾನ್ ಗೋರಿನಾಯ್ಕ ಉಪಸ್ಥಿತರಿದ್ದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಮನೋಹರ ಚೀಲದ ಸ್ವಾಗತಿಸಿದರು. ಎಫ್.ಜಿ.ನವಲಗುಂದ ವಂದಿಸಿದರು.