ಉನ್ನತ ಶಿಕ್ಷಣಕ್ಕಾಗಿ ಹೆಚ್ಚುವರಿ ಕಟ್ಟಡ ನಿರ್ಮಾಣ – ಶಾಸಕ ಮನಗೂಳಿ

Must Read

ಸಿಂದಗಿ – ಕಾಲೇಜಿನಲ್ಲಿ ಕಟ್ಟಡಗಳ ಕೊರತೆಯಿಂದ ಗ್ರಾಮೀಣ ಮಕ್ಕಳು ಉನ್ನತ ಶಿಕ್ಷಣ ವಂಚಿತವಾಗಬಾರದು ಎಂದು ಇನ್ನೂ ಹೆಚ್ಚುವರಿ ಕಟ್ಟಡ ಕಾಮಗಾರಿಗೆ ಅನುದಾನ ತರಲಾಗಿದೆ ಕಾರಣ ಸರಕಾರಿ ಕಾಲೇಜಿನಲ್ಲಿ ಓದುವ ಪ್ರತಿಯೊಂದು ವಿದ್ಯಾರ್ಥಿ ಜ್ಞಾನಾರ್ಜನೆ ಪಡೆದುಕೊಂಡು ಉತ್ತಮ ಸಾಧನೆ ಮಾಡಬೇಕು ಎಂದು ಶಾಸಕ ಅಶೋಕ ಮನಗೂಳಿ ಕರೆ ನೀಡಿದರು.

ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ಎಸ್‌ಡಿ ಪಿ ಯೋಜನೆಯಡಿ ರೂ ೧ ಕೋಟಿ ಅನುದಾನದಲ್ಲಿ ಕರ್ನಾಟಕ ಗೃಹ ಮಂಡಳಿಯವರು ಹೆಚ್ಚುವರಿ ಕೊಠಡಿಗಳ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಕಾಲೇಜಿನ ಸುತ್ತಲು ಕಂಪೌಂಡ ನಿರ್ಮಿಸುವುದು ಅವಶ್ಯಕವಿದ್ದು ಶೀಘ್ರದಲ್ಲಿಯೇ ಅನುದಾನ ಬಿಡುಗಡೆಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಇಲಾಖೆಯಿಂದ ಬಿಡುಗಡೆಗೊಳಿಸುವುದಾಗಿ ಭರವಸೆ ನಿಡಿದರು.

ಈ ಸಂದರ್ಭದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಸಿದ್ದನಗೌಡ ಪಾಟೀಲ, ನಿವೃತ್ತ ಉಪಪ್ರಾಚಾರ್ಯ ಪ್ರಭುಲಿಂಗ ಲೋಣೀ, ಪ್ರತಿಭಾ ಚಳ್ಳಗಿ, ಪ್ರಕಾಶ ನಿಗಡಿ, ಬಸವರಾಜ ಅಂಬಲಗಿ, ಶಿವಾನಂದ ಗಣಿಹಾರ, ಕೆಡಿಪಿ ಸದಸ್ಯರಾದ ನೂರಹ್ಮದ ಅತ್ತಾರ, ಕೆಎಚ್ಬಿ ಅಭಿಯಂತ ಶಾಧಿಕ್, ಗುತ್ತಿಗೆದಾರ ವೆಂಕಟೇಶ, ಕಾಲೇಜಿನ ಪ್ರಾಚಾರ್ಯ ಎಸ್ ಎಸ್ ಹಳೇಮನಿ, ಸಿಬ್ಬಂದಿವರ್ಗ ಹಾಜರಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group