ಸಿಂದಗಿ; ತಾಲೂಕಿನ ಬನ್ನೆಟ್ಟಿ ಗ್ರಾಮದಲ್ಲಿ ಮೇ ೩೧ ರಂದು ಮಹಾದೇವಪ್ಪ ಪೂಜಾರಿ( ಹರಿಜನ) ಕೊಲೆ ಪ್ರಕಣರದ ಆರೋಪಿಗಳನ್ನು ಬಂಧಿಸದ ಇಲಾಖೆ ದುರಾಡಳಿತ ನೀತಿಯನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ಇದೇ ೧೯ ರಂದು ಬೆಳಿಗ್ಗೆ ೧೦ ಗಂಟೆಗೆ ಬನ್ನೆಟ್ಟಿ ಗ್ರಾಮದಿಂದ ಕಾಲ್ನಡಿಗೆ ಜಾಥಾ ಹೊರಟು ಸಾಯಂಕಾಲ ಬ್ಯಾಕೋಡ ಹತ್ತಿರದ ಜಲಧಾರೆ ಕಾಮಗಾರಿ ಸ್ಥಳದಲ್ಲಿ ವಾಸ್ಥವ್ಯ ಮಾಡಿ ಸಿಂದಗಿಗೆ ೧೧ ಗಂಟೆಗೆ ಆಗಮಿಸಿ ಡಾ. ಅಂಬೇಡ್ಕರ ವೃತ್ತದಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುತ್ತಿದೆ ಎಂದು ದಲಿತ ಮುಖಂಡ ಪುರಸಭೆ ಮಾಜಿ ಸದಸ್ಯ ರಾಜಶೇಖರ ಕೂಚಬಾಳ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪೊಲೀಸ ಇಲಾಖೆ ಬಂಡವಾಳ ಶಾಹಿಗಳ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ ಎನ್ನುವುದನ್ನು ನೋಡಿದರೆ ಪ್ರಜಾಪ್ರಭುತ್ವದ ಕಲ್ಪನೆ ಬಿಟ್ಟು ಹೋಗುತ್ತಿದೆ ಎಂಬುದು ಎದ್ದು ಕಾಣುತ್ತಿದೆ ಎಂದು ಹೇಳಿದ ಅವರು, ಕೊಲೆಯಾಗಿ ಸುಮಾರು ತಿಂಗಳುಗಳೇ ಗತಿಸಿದರು ಆರೋಪಿಗಳನ್ನು ಪತ್ತೆ ಹಚ್ಚದೇ ಕೈ ಕಟ್ಟಿ ಕುಳಿತಿರುವ ಪೊಲೀಸ ಇಲಾಖೆಯ ಮನಸ್ಥಿತಿ ಸಾಮಾನ್ಯ ಜನರಿಗೆ ಭಯ ಹುಟ್ಟಿಸಿದೆ ಏಕೆಂದರೆ ಇಂತಹ ಕಂಪ್ಯೂಟರ ಯುಗದಲ್ಲಿ ಕೊಲೆ ಮಾಡಿದ ಆರೋಪಿಯನ್ನು ಗುರುತಿಸುವುದು ಅಸಾಧ್ಯವಾದ ಕೆಲಸವೇನಲ್ಲ. ಇಂತಹ ಅನೇಕ ಪ್ರಕರಣಗಳು ೨೪ ಗಂಟೆಗಳಲ್ಲಿ ಪತ್ತೆ ಹಚ್ಚಿದ ಕೀರ್ತಿ ಈ ಇಲಾಖೆಗಿದೆ ಆದರೆ ಬನ್ನೆಟ್ಟಿ ಗ್ರಾಮದ ದಲಿತ ವ್ಯಕ್ತಿಯ ಕೋಲೆಯ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ ಎನ್ನುವುದು ಕಂಡು ಬರುತ್ತಿದೆ ಆಕ್ರೋಶ ಹೊರಹಾಕಿದರು
ದಸಂಸ ಜಿಲ್ಲಾ ಸಂಚಾಲಕ ಚಂದ್ರಕಾಂತ ಸಿಂಗೆ ಮಾತನಾಡಿ, ಬನ್ನೆಟ್ಟಿ ಗ್ರಾಮದ ದಲಿತ ವ್ಯಕ್ತಿಯ ಕೊಲೆ ನಡೆದು ಕನಿಷ್ಠ ಮೂರು ತಿಂಗಳು ಗತಿಸಿದರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ ಇಲಾಖೆ ಜಾಣ ಕುರುಡತನ ಪ್ರದರ್ಶಿಸುತ್ತಿದೆ. ಈ ಪ್ರಕರಣ ಕುರಿತು ಸಾಕಷ್ಟು ಬಾರಿ ಪೊಲೀಸ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಾಗ್ಯೂ ಯಾವುದೇ ಪ್ರಯೋಜನೆ ಕಂಡಿಲ್ಲ ಕಾರಣ ದಲಿತ ಸಂಘರ್ಷ ಸಮಿತಿ ವತಿಯಿಂದ ಇದೆ ೧೯ ರಂದು ಆ ಗ್ರಾಮದಿಂದ ಕಾಲ್ನಡಿಗೆ ಜಾಥಾ ಹಮ್ಮಿಕೊಂಡು ನ್ಯಾಯ ದೊರಕುವವರೆಗೆ ಹಿಂದೆ ಸರಿಯೋದಿಲ್ಲ ಅಷ್ಟರೊಳಗೆ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿದರು.
ಶರಣು ಸಿಂಧೆ, ದೇವರ ಹಿಪ್ಪರಗಿ ಪ.ಪಂ ಮಾಜಿ ಸದಸ್ಯ ಪ್ರಕಾಶ ಗುಡಿಮನಿ, ಶ್ರೀನಿವಾಸ ಓಲೆಕಾರ, ಪರಸು ದಿಂಡವಾರ ಮಾತನಾಡಿ, ಮೇ ೩೧ ರಂದು ಮಹಾದೇವಪ್ಪ ಅವರು ಮುಂಜಾನೆ ಹೊಲಕ್ಕೆ ಹೋಗಿ ಬರುತ್ತೇನೆ ಎಂದು ಹೋದವನು ಜೂನ ೩ ರಂದು ಇದೇ ಗ್ರಾಮದ ಪಕ್ಕದಲ್ಲಿರುವ ಮಾಡಬಾಳ ಗ್ರಾಮದ ಮಲ್ಲಮ್ಮ ಗಂಡ ಸಿದ್ಧನಗೌಡ ಗಂಗರೆಡ್ಡಿ, ಇವರ ಮಗಳಾದ ಗುರುಬಾಯಿ ಇವರ ಹೆಸರಿನಲ್ಲಿರುವ ಸ ನಂ: ೧೭೬/೬ ಈ ಜಮೀನದಲ್ಲಿ ಮೃತ ದೇಹ ದೊರೆತ್ತಿದ್ದರು ಸಹ ಅಪರಾಧಿಗಳ ತನಖೆ ನಡೆಸುತ್ತಿದ್ದೇವೆ ಎಂದು ಜೂ. ೧೨ ರಂದು ತಡವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಇದರ ಹಿಂದೆ ದೊಡ್ಡ ಕೈಗಳು ಕೆಲಸ ಮಾಡುತ್ತಿವೆ ನ್ಯಾಯ ಸಿಗುವುದು ಕಷ್ಠ ಸಾಧ್ಯ ಎನಿಸುತ್ತಿದೆ ಕಾರಣ ಎಲ್ಲ ದಲಿತ ಸಂಘಟನೆಯ ಸಹಕಾರದೊಂದಿಗೆ ನ್ಯಾಯ ಸಿಗುವವರೆಗೂ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಗ್ರಾಮಸ್ಥ ಲಕ್ಷ್ಮಣ ಬನ್ನೇಟ್ಟಿ ಸಂಗಪ್ಪ ಹರಿಜನ, ಶಿವುಕುಮಾರ ಬನ್ನೇಟ್ಟಿ, ಲಕ್ಷ್ಮಣ ಚಲುವಾದಿ, ಮರೆಪ್ಪ ಬನ್ನೇಟ್ಟಿ, ನಿಜಲಿಂಗಪ್ಪ ಬನ್ನೇಟ್ಟಿ, ಮುತ್ತಪ್ಪ ಪೂಜಾರಿ, ರವಿ ತಳಕೇರಿ, ರವಿ ಆಲಹಳ್ಳಿ, ಸಂಜು ಯಂಟಮಾನ ಸೇರಿದಂತೆ ಬನ್ನೇಟ್ಟಿ ಗ್ರಾಮಸ್ಥರು ಇದ್ದರು.

