ಸಿಂದಗಿ; ೨೦೧೩ ರಿಂದ ೧೪ರ ವರೆಗೆ ಸಿದ್ದರಾಮಯ್ಯನವರು ಸಿಎಂ ಇರುವಾಗ ರಾಜ್ಯದ ರೈತರಿಗಾಗಿ ಅನುಕೂಲವಾಗಲೆಂದು ಹೊಸ ಹೊಸ ಯೋಜನೆಗಳನ್ನು ಜಾರಿಗೆ ತಂದು ಹೊಸ ಸಂಚಲನ ಮೂಡಿಸಿದ್ದರು ಅದನ್ನು ಮುಂದುವರೆಸಲು ಹೊಸ ಪರಿಕರಗಳನ್ನು ನೀಡುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ಕೃಷಿ ಇಲಾಖೆ ಪ್ರಾಂಗಣದಲ್ಲಿ ಜಿ. ಪಂ, ಕೃಷಿ ಇಲಾಖೆ ವಿಜಯಪುರ, ಕೃಷಿ ಇಲಾಖೆ ಸಿಂದಗಿ, ಕೃಷಿ ವಿಜ್ಞಾನ ಕೇಂದ್ರ ಇಂಡಿ ಮತ್ತು ಕೃಷಿಕ ಸಮಾಜ ಸಿಂದಗಿ ಹಾಗೂ ಅಲಮೇಲ ಇವುಗಳ ಸಹಯೋಗದಲ್ಲಿ ೨೦೨೫-೨೬ನೇ ಸಾಲಿನ ಕೃಷಿ ಯಂತ್ರೋಪಕರಣಗಳ ವಿತರಣೆ ಹಾಗೂ ಮುಂಗಾರು ಹಂಗಾಮಿನ ತಾಂತ್ರಿಕ ಮಾಹಿತಿ ಕಾರ್ಯಕ್ರಮಕ್ಕೆ ಶಾಸಕ ಅಶೋಕ ಮನಗೂಳಿ ಚಾಲನೆ ನೀಡಿ ಮಾತನಾಡಿ, ದೇವರ ಹಿಪ್ಪರಗಿ, ಆಲಮೇಲ, ಸಿಂದಗಿ ಅಖಂಡ ತಾಲೂಕು ಪರಿಪೂರ್ಣ ನೀರಾವರಿ ಕ್ಷೇತ್ರವಾಗಿರುವುದರಿಂದ ತಾಂತ್ರಿಕವಾಗಿ ಬಹಳಷ್ಟು ಮುಂದುವರೆಯಬೇಕಾಗಿದೆ ಅಲ್ಲದೆ ಬೆಳೆಗಳಿಗೆ ಅನೇಕ ರೋಗ ರುಜಿನಗಳು ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ರೈತರು ಅವುಗಳ ನಿಯಂತ್ರಣಕ್ಕೆ ಕೃಷಿ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿರಬೇಕು ಎಂದು ಹೇಳಿದ ಅವರು, ಹಿಂದಿನ ಸರಕಾರದಲ್ಲಿ ರಾತ್ರಿ ಹೊತ್ತಿನಲ್ಲಿ ಮಾತ್ರ ೩ ಗಂಟೆ ವಿದ್ಯುತ್ ವಿತರಣೆಯಾಗುತ್ತಿತ್ತು ನಮ್ಮ ಸರಕಾರದಲ್ಲಿ ಹಗಲು ಹೊತ್ತಿನಲ್ಲೇ ೭ ಗಂಟೆಗಳ ಕಾಲ ವಿದ್ಯುತ್ ನೀಡಲಾಗುತ್ತಿದೆ. ಹೈನುಗಾರಿಕೆ ಹೆಚ್ಚಿಸಬೇಕೆನ್ನುವ ನಿಟ್ಟಿನಲ್ಲಿ ಕ್ಷೇತ್ರದ ಪ್ರತಿಯೊಂದು ಹಳ್ಳಿಗಳಲ್ಲಿ ಹಸುವಿನ ಯೋಜನೆ ಜಾರಿಗೆ ತರಲಾಗಿದೆ ಆದರೆ ಯಾವ ರೈತರು ಹಸುಗಳನ್ನು ಖರೀದಿ ಮಾಡಿಲ್ಲ ಅದಕ್ಕೆ ಪ್ರತಿಯೊಬ್ಬರು ಹಸುಗಳನ್ನು ಖರೀದಿಸಬೇಕು ಎಂದು ಕರೆ ನಿಡಿದರು.
ಲಿಂಬೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪುರ ಮಾತನಾಡಿ, ಅನೇಕ ರಸಗೊಬ್ಬರಗಳನ್ನು ಭೂಮಿಯಲ್ಲಿ ಹಾಕಿ ಬೆಳೆಗಳನ್ನು ಬೆಳೆದು ವಿಷಮುಕ್ತ ಆಹಾರ ತಯಾರಾಗುವುದನ್ನು ತಪ್ಪಿಸಲು ರೈತರು ಸಾವಯವ ಪದ್ದತಿಯನ್ನು ಅಳವಡಿಸಿಕೊಳ್ಳಬೇಕು ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಸಿಗುವಂತಾಗಬೇಕು. ಜೋಡೆತ್ತುಗಳ ಕಟ್ಟುವುದನ್ನು ಮರೆತಿದ್ದಾರೆ ಇದರಿಂದ ಮಸೀನರಿ ಪದ್ದತಿಯಲ್ಲಿ ಬೆಳೆದ ಬೆಳೆಗಳಿಂದ ಅನೇಕ ರೋಗಗಳೀಗೆ ತುತ್ತಾಗುತ್ತಿದ್ದಾರೆ ಇದರಿಂದ ಹೊರ ಬರಲು ಸಾವಯವ ಪದ್ದತಿಯನ್ನು ಅಳವಡಿಸಿಕೊಳ್ಳಿ ಎಂದರು.
ಜಂಟಿ ನಿರ್ದೆಶಕ ಶಿವನಗೌಡ ಪಾಟೀಲ ಮಾತನಾಡಿದರು.
ಕೃಷಿಕ ಸಮಾಜದ ಅದ್ಯಕ್ಷ ಶಿವಪ್ಪಗೌಡ ಬಿರಾದಾರ, ಆಲಮೇಲ ಅಧ್ಯಕ್ಷ ನಿಂಗನಗೌಡ ಪಾಟೀಲ, ಸದಸ್ಯರಾದ ಬಸಯ್ಯ ಹಿರೇಮಠ, ಬಿ.ಜಿ.ನೆಲ್ಲಗಿ ವಕೀಲರು, ರಮೇಶ ಪೂಜಾರಿ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುರೇಶ ಪೂಜಾರಿ, ಕೆಡಿಪಿ ಸದಸ್ಯರಾದ ನೂರಹ್ಮದ ಅತ್ತಾರ, ಖಾದರ ಬಂಕಲಗಿ, ಪಸು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಶಿವಶರಣ ಯಲಗೋಡ, ಗ್ಯಾರೆಂಟಿ ಯೋಜನಾ ಸಮಿತಿ ಅದ್ಯಕ್ಷ ಅಶೋಕ ಕೊಳಾರಿ, ಬಾಗಪ್ಪಗೌಡ ಪಾಟೀಲ, ಶೈಲಜಾ ಸ್ಥಾವರಮಠ, ಗಂಗಾಧರ ಚಿಂಚೋಳಿ, ಸೇರಿದಂತೆ ಹಲವರು ವೇದಿಕೆ ಮೇಲಿದ್ದರು.
ಕೃಷಿ ಇಲಾಖೆ ಸಹಾಯಕ ನಿರ್ದೆಶಕ ಡಾ. ಎಚ್.ವೈ.ಸಿಂಗೆಗೋಳ ಸ್ವಾಗತಿಸಿದರು. ಇಂಡಿ ಉಪನಿರ್ದೇಶಕ ಚಂದ್ರಕಾAತ ಪವಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಾಯಕ ಅದಿಕಾರಿ ಶಿವಾನಂದ ಹೂನಳ್ಳಿ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.