spot_img
spot_img

ತಾಂಡಾಗಳ ಅಭಿವೃದ್ಧಿಗೆ ಸದಾ ಸಿದ್ದ: ಶಾಸಕ ಭೂಸನೂರ

Must Read

- Advertisement -

ಸಿಂದಗಿ: ಉಪಚುನಾವಣೆಯ ನಂತರ ಉಳಿದಿರುವ  ಸ್ವಲ್ಪ ಅವಧಿಯಲ್ಲೇ ಕ್ಷೇತ್ರದ ಜನತೆಯ ಋಣ ತೀರಿಸುವ ನಿಟ್ಟಿನಲ್ಲಿ ಸರ್ಕಾರದ ಜನಪರ ಯೋಜನೆಗಳನ್ನು ಮನೆಬಾಗಿಲಿಗೆ ಮುಟ್ಟಿಸುವ ಪ್ರಾಮಾಣಿಕ ಕೆಲಸವನ್ನು ಮಾಡಿದ್ದೇನೆ ಕ್ಷೇತ್ರದಲ್ಲಿರುವ ತಾಂಡಗಳ ಅಭಿವೃದ್ಧಿಗೆ ಸದಾ ಸಿದ್ದನಿದ್ದೇನೆ ಎಂದು ಶಾಸಕ ರಮೇಶ ಭೂಸನೂರ ಹೇಳಿದರು.

ತಾಲೂಕಿನ ಕಕ್ಕಳಮೆಲಿ ತಾಂಡಾ (ಎಲ್ಟಿ ) ದಲ್ಲಿ 2019-20ನೇ ಸಾಲಿನ ಪ್ರಧಾನ ಮಂತ್ರಿ ಆದರ್ಶಗ್ರಾಮ ಯೋಜನೆ ಅಡಿಯಲ್ಲಿ 40 ಲಕ್ಷ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿ, ಕ್ಷೇತ್ರದ ಮೂಲೆ ಮೂಲೆಗೆ ಸಂಚರಿಸಿ ಗ್ರಾಮದಲ್ಲಿನ ಮೂಲಭೂತ ಸೌಕರ್ಯಗಳ ಜೊತೆಗೆ ಕುಂದುಕೊರತೆಗಳನ್ನು ಆಲಿಸಿ, ಮತಕ್ಷೇತ್ರದ ಪ್ರತಿಯೊಂದು ತಾಂಡಾಗಳಿಗೆ ಹಲವಾರು ಯೋಜನೆಯಡಿಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದ್ದೇನೆ ಕಕ್ಕಳಮೆಲಿ ತಾಂಡಾದಲ್ಲಿಯೂ ಕೂಡ ರೂ.40 ಲಕ್ಷ ಅನುದಾನವನ್ನು ನೀಡಲಾಗಿದೆ ತಾಂಡಾದ ಕಾರಭಾರಿಗಳು ಹಾಲಿ ಮತ್ತು ಮಾಜಿ ಸದಸ್ಯರು ಅಧ್ಯಕ್ಷರು ಸಹಕಾರದಿಂದ  ಸುಸಜ್ಜಿತವಾದ ಸಿಸಿ ರಸ್ತೆ ನಿರ್ಮಿಸಿಕೊಳ್ಳಬೇಕಲ್ಲದೆ ತಾಂಡಾದ ಕೆಲವು ಪ್ರಮುಖರು ಉಳಿದಿರುವ ಕೆಲವು ಕಾಮಗಾರಿಗಳ ವರದಿ ಪಡೆದು ಸರಿ ಪಡಿಸುವುದಾಗಿ ಹೇಳಿದರು.

ಕಾರ್ಯಕ್ರಮದಲ್ಲಿ  ಕನ್ನೋಳ್ಳಿ ಮಾಜಿ ತಾಪಂ ಸದಸ್ಯ ಶಿವಯೋಗಿ ಮೂಡಗಿ, ಅಶೋಕ ಪಾಟೀಲ, ಅಪ್ಪು ರಾಮಕೋಟಿ ನಾಯಕ್, ಕರಾಬಾರಿ ದಿಲೀಪ್ ರಾಠೋಡ್,  ಗ್ರಾ ಪಂ ಅಧ್ಯಕ್ಷ ನಿಂಗನಗೌಡ ಓತಿಹಾಳ, ಗ್ರಾ. ಪಂ ಸದಸ್ಯರಾದ ರವಿ ಚೌವ್ಹಾಣ, ಅನೀಲ್ ಪವಾರ, ಮೋತಿಲಾಲ ಪವಾರ, ನಂದಿನಿ ನಾಮದೇವ ರಾಠೋಡ, ಶರಣಪ್ಪ ಹಳ್ಳೆಪ್ಪಗೋಳ, ಗಂಗಣ್ಣ ಸರಂಡಿ, ಸುರೇಶ ಕೆರಕಿ, ಕಲ್ಲಪ್ಪ ಕೊಳ್ಳುರ, ಈರಣ್ಣ ಗೌಂಡಿ, ಪರಸು ಚಾಂದಕವಟೆ ಸೇರಿದಂತೆ ಹಲವರು ಇದ್ದರು.

- Advertisement -
- Advertisement -

Latest News

ಮನೋಜ್ಞ ಅನುಭೂತಿಯ ವಿಶ್ವ ಧ್ಯಾನದ ದಿನಾಚರಣೆ 

      ಮೈಸೂರಿನ ಮಾನಸಗಂಗೋತ್ರಿಯು ಇಂದು ಮನಸ್ಸನ್ನು ಮುದಗೊಳಿಸುವ ಅಪರೂಪದ ಕಾರ್ಯಕ್ರಮವೊಂದಕ್ಕೆ ಸಾಕ್ಷಿಯಾಯಿತು. ವಿಶ್ವ ಸಂಸ್ಥೆಯು 21 ಡಿಸೆಂಬರ್ ವಿಶ್ವ ಧ್ಯಾನದ ದಿನವನ್ನಾಗಿ ಆಚರಿಸಲು...
- Advertisement -

More Articles Like This

- Advertisement -
close
error: Content is protected !!
Join WhatsApp Group