ಮುಧೋಳ – 79ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿ ಮಹಾ ಜ್ಞಾನಿ ಬುದ್ಧ, ತ್ಯಾಗಮಯಿ ಮಹಾವೀರ, ಸಮಾನತೆಯ ಹರಿಕಾರ ಕ್ರಾಂತಿ ಪುರುಷ ಅಣ್ಣ ಬಸವಣ್ಣನವರನ್ನು ಸ್ಮರಿಸಿ. ಇವರ ಕೊಡುಗೆ ಈ ಲೋಕಕ್ಕೆ ಅಪಾರ ಎಂದು ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಶರಣಬಸವ ಶಾಸ್ತ್ರಿಗಳು ಅಭಿಪ್ರಾಯಪಟ್ಟರು
ಅವರು ತಾಲೂಕಿನ ಮುಗಳಖೋಡ ಗ್ರಾಮ ಪಂಚಾಯತಿಯ ಕಾರ್ಯಾಲಯದಲ್ಲಿ ಆಚರಿಸಿದ 79ನೇ ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆಯಲ್ಲಿ ಮಾತನಾಡುತ್ತಾ, 1947ರ ಪೂರ್ವದಲ್ಲಿ ಸ್ವಾತಂತ್ರ್ಯವನ್ನು ಪಡೆಯಲು ಆಯೋಜಿಸಿದ ಅಧಿವೇಶನದ ಅಧ್ಯಕ್ಷತೆಯನ್ನು ಜಗದ್ಗುರು ಸಿದ್ಧಾರೂಢರು ವಹಿಸಿದ್ದರು. ಮಹಾತ್ಮ ಗಾಂಧೀಜಿಯವರು. ಬಾಲಗಂಗಾಧರ ತಿಲಕ, ಸುಭಾಷ್ ಚಂದ್ರ ಬೋಸ್, ಸ್ವಾಮಿ ವಿವೇಕಾನಂದರು. ಮೊದಲಾದವರು ಸಿದ್ಧಾರೂಡರ ಪ್ರಭಾವಕ್ಕೆ ಒಳಗಾಗಿದ್ದರು. ಸರ್ವಮಹಾತ್ಮರ ಪ್ರತಿರೂಪವೇ ಮಹಾತ್ಮ ಗಾಂಧೀಜಿವರು. ಮಹಾತ್ಮ ಗಾಂಧೀಜಿಯವರು ಯಾವತ್ತೂ ಸ್ಮರಣೀಯರು ಎಂದರು.
ಗ್ರಾಮದ ಹಿರಿಯರಾದ ಆರ್ ಎಸ್ ಸುಣಗಾರ ಮಾತನಾಡಿ, ಇಂದಿನ ಮಕ್ಕಳಿಗೆ ಸಂಸ್ಕಾರವನ್ನು ಕಲಿಸುವ ಕಾರ್ಯ ಆಗಬೇಕು. ವ್ಯಸನಮುಕ್ತ ಸಮಾಜ ನಿರ್ಮಾಣ ಆಗಬೇಕು. ಸಂಸ್ಕಾರ ಇಲ್ಲದ ಬದುಕು ಅದು ನಿರರ್ಥಕ ಎಂದರು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಮಹಾದೇವಿ ಮರೇಗುದ್ದಿ ಧ್ವಜಾರೋಹಣ ನೆರವೇರಿಸಿದರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು.ಸವ೯ ಸದಸ್ಯರು ಪಾಲ್ಗೊಂಡಿದ್ದರು.ಅಭಿವೃದ್ಧಿ ಅಧಿಕಾರಿ ರೋಹಿತ್ ಇಟಕನ್ನವರ ಸ್ವಾಗತಿಸಿ ವಂದಿಸಿದರು