ಸಿಂದಗಿ; ವಿಶ್ವರತ್ನ ಡಾ. ಬಾಬಾಸಾಹೇಬ ಅಂಬೇಡ್ಕರ್ ಸ್ಮಾರಕಕ್ಕಾಗಿ 10ಎಕರೆ ಭೂಮಿ ಮಂಜೂರು ಮಾಡಿ ರೂ. 10 ಕೋಟಿ ಸ್ಮಾರಕ ನಿರ್ಮಾಣಕ್ಕಾಗಿ ಕೂಡಲೇ ಮಂಜೂರು ಮಾಡಿ ಆದೇಶ ಹೊರಡಿಸುವಂತೆ ಆಗ್ರಹಿಸಿ ತಾಲೂಕು ಅಡಳಿತದ ಶಿರಸ್ತೇದಾರ ಎಸ್.ಎಸ್.ಮ್ಯಾಗೇರಿ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಡಾ||ಬಿ.ಆರ್.ಅಂಬೇಡ್ಕರ್ ಸ್ಮಾರಕ ವಸ್ತು ಸಂಗ್ರಹಾಲಯ, ಸಂಶೋಧನ ಕೇಂದ್ರಗಳ ನಿರ್ಮಾಣ ಹೋರಾಟ ಸಮಿತಿ ರಾಜ್ಯ ಉಪಾಧ್ಯಕ್ಷ ರಾಜಶೇಖರ ಎಂ. ಚೌರ ಮಾತನಾಡಿ, ವಿಶ್ವರತ್ನ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಭೇಟಿ ನೀಡಿದ ಸ್ಥಳಗಳನ್ನು ಸ್ಮಾರಕ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘೋಷಣೆ ಮಾಡಿದ್ದು ಅದರಂತೆ ಡಾ.ಬಾಬಾಸಾಹೇಬರು ಗುಮ್ಮಟ ನಗರಿ ವಿಜಯಪುರ ಜಿಲ್ಲೆ ನ್ಯಾಯಾಲಯಕ್ಕೆ ಭೇಟಿ ನೀಡಿದ್ದ ಇತಿಹಾಸವಿದೆ. ಆ ಕಾರಣಕ್ಕೆ ಬಜೆಟ್‍ನಲ್ಲಿ ಸ್ಮಾರಕಕ್ಕಾಗಿ 10ಎಕರೆ ಭೂಮಿ ಮಂಜೂರು ಮಾಡಿ ರೂ. 10 ಕೋಟಿ ಸ್ಮಾರಕ ನಿರ್ಮಾಣಕ್ಕಾಗಿ ಕೂಡಲೇ ಮಂಜೂರು ಮಾಡಿ ಆದೇಶ ಹೊರಡಿಸಿ ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿ.ವಾಯ್.ಭಾಣಿ, ಪಿ.ಎಮ್.ಕಂಬಾರ, ರವಿ ಹಾಲಹಳ್ಳಿ, ಆರ್.ಎಸ್.ಹೊಸಮನಿ, ಅಕ್ಷಯ ದಂಗಾಪೂರ, ಸಾಯಬಣ್ಣ ದೊಡಮನಿ ಇದ್ದರು.