“ಸಂವಿಧಾನ ಶಿಲ್ಪಿಯಾಗಿ ಮಹಿಳಾ ಶಿಕ್ಷಣದ ರೂವಾರಿಗಳಾಗಿ ಕಾನೂನಗಳ ಸಂರಕ್ಷಕರಾಗಿ ಭಾರತದೇಶವನ್ನು ಸಮೃದ್ಧ ಭಾರತವನ್ನಾಗಿ ಮಾಡುವಲ್ಲಿ ಬಾಬಾಸಾಹೇಬ ಅಂಬೇಡ್ಕರ್ ರವರ ಪಾತ್ರ ಪ್ರಮುಖವಾಗಿದೆ” ಎಂದು ಪ್ರೊ. ಚೇತನರಾಜ್ ತಿಳಿಸಿದರು.
ಸ್ಥಳೀಯ ಶ್ರೀ ಶ್ರೀಪಾದಬೋಧ ಸ್ವಾಮೀಜಿ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಸಂವಿಧಾನಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ್ ರವರ 130 ನೇ ಜನ್ಮದಿನಾಚರಣೆ ಹಾಗೂ ಕಾರ್ಯಕ್ರಮದಲ್ಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ, ಅಂಬೇಡ್ಕರ್ ರನ್ನು ಕೇವಲ ಸಂವಿಧಾನಕ್ಕೆ ಸೀಮಿತಗೊಳಿಸದೇ ವಿವಿಧ ಆಯಾಮಗಳಲ್ಲಿ ಅವರು ನೀಡಿದ ಕೊಡುಗೆಯನ್ನು ಗಮನಿಸಿದಾಗ ‘ಮೊಗೆದಷ್ಟು ಬಗೆ’ಎನ್ನುವಂತೆ ಅವರ ಸಾಧನೆಗಳು ಮಾಡಿದ ಕಾರ್ಯಗಳು ಬೆಳಕಿಗೆ ಬರುತ್ತವೆ. ಅವರು ಜ್ಞಾನದ ಶಿಖರವಾಗಿದ್ದು ಅವರನ್ನು ಅರಿತುಕೊಳ್ಳಲು ವಿದ್ಯಾರ್ಥಿಗಳೆಲ್ಲರೂ ಮಾಡಬೇಕಾಗಿರುವ ಒಂದು ಕಾರ್ಯವೆಂದರೆ ಹೆಚ್ಚೆಚ್ಚು ಓದಬೇಕು. ಎಂದು ಕರೆ ನೀಡಿದರು.
ಪ್ರಾಂಶುಪಾಲರಾದ ಶಾನೂರಕುಮಾರ ಗಾಣಿಗೇರ ಅವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, “ಅಂಬೇಡ್ಕರ್ ಎನ್ನುವದು ವ್ಯಕ್ತಿಯಲ್ಲ ಶಕ್ತಿ; ಅವರ ಜೀವನವೇ ನಮಗೆಲ್ಲಾ ಮಾರ್ಗದರ್ಶಿ ಅವರ ಹಾದಿಯಲ್ಲಿ ನಾವು ನೀವೆಲ್ಲ ನಡೆಯೋಣ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಆಯ್.ಕ್ಯೂ.ಎ.ಸಿ. ಸಂಯೋಜಕರಾದ ಶ್ರೀಮತಿ ಅಶ್ವಿನಿ ಎಸ್. ಸಹಾಯಕ ಸಾಂಸ್ಕೃತಿಕ ಸಂಯೋಜಕರಾದ ಶ್ರೀಮತಿ ಶಿವಲೀಲಾ, ಪ್ರಾಧ್ಯಾಪಕರುಗಳಾದ ಚೇತನರಾಜ್ ಬಿ, ಡಾ. ರವಿ ಗಡದನ್ನವರ, ಶ್ರೀ ಆರ್.ಆಯ್. ಆಸಂಗಿ, ಶ್ರೀಮತಿ ಗಾಯತ್ರಿ ಸಾಳೋಖೆ, ಶ್ರೀಮತಿ ಶೀತಲ ತಳವಾರ ಶ್ರೀ ಸಂಜೀವ ಮದರಖಂಡಿ, ಶ್ರೀ ಹನುಮಂತ ಕಾಂಬಳೆ ಶ್ರೀ ಮುಂತಾದವರು ಭಾಗವಹಿಸಿದ್ದರು.
ಬಸವರಾಜ ಸಿಂಧೂರ ಸ್ವಾಗತಿಸಿದರು. ಶ್ರೀ ಶಿವಕುಮಾರ ನಿರೂಪಿಸಿದರು. ಪ್ರಶಾಂತ ಯರಗುದ್ರಿ ವಂದಿಸಿದರು.