ಕಾಂಗ್ರೆಸ್ ರ್ಯಾಲಿಯಲ್ಲಿ ಆ್ಯಂಬುಲೆನ್ಸ್ ಪರದಾಟ

Must Read

ಬೀದರ: ಬಡವರ ಮನೆ ವಿಷಯವಾಗಿ ಈಶ್ವರ ಖಂಡ್ರೆ ನೇತೃತ್ವದಲ್ಲಿ ಕಾಂಗ್ರೆಸ್ ನಡೆಸುತ್ತಿದ್ದ ರ್ಯಾಲಿಯಲ್ಲಿ ಆ್ಯಂಬುಲೆನ್ಸ್ ಗೆ ದಾರಿ ಸಿಗದೆ ವಾಪಸ್ ಹೊರಟು ಹೋದ ಘಟನೆ ನಡೆಯಿತು.

ಬಹುತೇಕ ರಸ್ತೆಗಳಲ್ಲಿ ಜನರು ಹಾಗೂ ಗಾಡಿಗಳು ತುಂಬಿದ್ದ ಕಾರಣ ರಸ್ತೆ ಸಿಗದೆ ಆಂಬುಲೆನ್ಸ್ ಪರದಾಡಬೇಕಾಯಿತು.

ಕೆಲ ನಿಮಿಷಗಳ‌ ಕಾಲ ರಸ್ತೆ ಸಿಗದೆ ಆಂಬುಲೇನ್ಸ್  ಬಂದ ರಸ್ತೆಯಲ್ಲೆ ವಾಪಸ್ ಹೊರಟು ಹೋಯಿತು.

ಬೀದರ್ ಜಿಲ್ಲೆಯ ಭಾಲ್ಕಿಯ ಅಂಬೇಡ್ಕರ್ ವೃತದಲ್ಲಿ ಮಂಜೂರಾದ ವಸತಿ ನಿಲಯಗಳ ಕಂತಿನ ಹಣ ಬಿಡುಗಡೆ ಮಾಡಿಲ್ಲ ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ಹಾಗೂ ಫಲಾನುಭವಿಗಳಿಂದ ಪ್ರತಿಭಟನೆಯು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ನೇತೃತ್ವದಲ್ಲಿ ನಡೆದಿತ್ತು ಇದೇ ಸಂದರ್ಭದಲ್ಲಿ ಅಲ್ಲಿ ಬಂದ ಆ್ಯಂಬುಲೆನ್ಸ್ ದಾರಿ ಸಿಗದೆ ವಾಪಸ್ ಹೋಗಬೇಕಾಯಿತು.


ವರದಿ: ನಂದಕುಮಾರ ಕರಂಜೆ, ಬೀದರ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group