ನಾವು – ನಮ್ಮವರು
ಬಸಮ್ಮ ಅವರು ಅಕ್ಕನ ಅರಿವಿನ ಹಿರಿಯ ಆಜೀವ ಸದಸ್ಯರು ಮತ್ತು ದತ್ತಿ ದಾಸೋಹಿಗಳು. ತಮ್ಮ ತಾಯಿಯವರಾದ ಸುಭದ್ರಾ ದೇವಿ ಉಪ್ಪಿನ ಅವರ ಹೆಸರಿನಲ್ಲಿ ಮತ್ತು ತಮ್ಮ ಮನೆಯವರಾದ ವೀರಣ್ಣ ಭರಮಶೆಟ್ಟಿ ಅವರ ಹೆಸರಿನಲ್ಲಿ ದತ್ತಿದಾಸೋಹವನ್ನು ಮಾಡಿದ್ದಾರೆ. ಅವರು ಈ ವಯಸ್ಸಿನಲ್ಲಿಯೂ ಒಬ್ಬ ಒಳ್ಳೆಯ ಕಲಿಕಾರ್ಥಿಯಾಗಿ ಎಲ್ಲರಿಂದ ಅತ್ಯಂತ ನಯ ವಿನಯವಾಗಿಯೇ ತಮಗೆ ಗೊತ್ತಾಗದೆ ಇರುವುದನ್ನು ಕಲಿತು ಕೊಳ್ಳುತ್ತಾ ಅದರ ಜೊತೆ ಜೊತೆಗೆ ಉತ್ತಮವಾದ ಅಧ್ಯಯನಶೀಲತೆ ಮೂಲಕ ತಮ್ಮನ್ನು ತಾವು ಬರವಣಿಗೆಯಲ್ಲಿ ತೊಡಗಿಸಿ ಕೊಂಡು ಯಾವತ್ತೂ ಹುರುಪಿನಿoದ ಬಸವತತ್ವವನ್ನು ಅರಿಯುವಲ್ಲಿ ಸತತವಾಗಿ ಪ್ರಯತ್ನ ಪಡುತ್ತಾರೆ. ಸ್ವಲ್ಪ ದಿನಗಳಲ್ಲಿಯೇ ನಮ್ಮ ವೇದಿಕೆಯಲ್ಲಿ ಎಲ್ಲರಿಗೂ ಚಿರ ಪರಿಚಿತರಾಗಿದ್ದಾರೆ.
ಬಸಮ್ಮ ಅವರು ಕಲ್ಬುರ್ಗಿ ಯಲ್ಲಿ 15- 12- 1956 ರಲ್ಲಿ ಜನಿಸಿದರು. ತಂದೆಯವರು ಚಂದ್ರಶೇಖರ ಉಪ್ಪಿನ ಮತ್ತು ತಾಯಿಯವರು ಸುಭದ್ರಾದೇವಿ ಉಪ್ಪಿನ. ಅವರು ಕಲ್ಬುರ್ಗಿಯ ಶಾಲೆಯಲ್ಲಿ ಓದುವಾಗಮೂರು ವರ್ಷ ಶ್ರೀ ಶರಬಯ್ಯಾ ಗಾದ ಪ್ರೌಢಕನ್ಯಾ ವಿದ್ಯಾಲಯದಲ್ಲಿ ಶ್ರೀಮತಿ ಗೀತಾ ನಾಗಭೂಷಣ ಅವರು ಮುಖ್ಯ ಉಪಾಧ್ಯಾಯರಾಗಿದ್ದಾಗ ಓದುವ ಅವಕಾಶ
ಸಿಕ್ಕಿತು. ಅವರು ತಮ್ಮಮೇಲೆ ಬಹಳ ಪ್ರಭಾವ ಬೀರಿದ ಗುರುಗಳು. ಅವರ ಶಿಸ್ತು, ಖಡಕ್ ಸ್ವಭಾವ, ವಿದ್ಯಾರ್ಥಿಗಳ ಬಗೆಗಿನ ಕಾಳಜಿ ಒಟ್ಟಾರೆ ಅವರು ನಡೆದುಕೊಳ್ಳುವ ರೀತಿಯೇ ಇಷ್ಟವಾಗುತಿತ್ತು ಎಂದು ನೆನೆಯುತ್ತಾರೆ.
ಬಸಮ್ಮ ಅವರು ನಂತರ ಗೋದೂತಾಯಿ ಕಾಲೇಜಿನಲ್ಲಿ
ಪಿ. ಯು. ಸಿವರೆಗೆ ಓದಿದ್ದಾರೆ. ಅದರ ಜೊತೆಗೆ ಟೈಪಿಂಗ ಸಹ ಕಲಿತಿದ್ದಾರೆ. ಮದುವೆಯಾದ ನಂತರ ಹದಿನೈದು ಜನರ ಕುಟುಂಬ ನಿರ್ವಹಣೆ ಜೊತೆಗೆ ಪತಿಯ ಸ್ಟೋನ್ ಕ್ರಷರ್ ಉದ್ಯೋಗದಲ್ಲಿ ಭಾಗಿಯಾಗಿ ಇಪ್ಪತೈದು ವರ್ಷ
ಕೆಲಸ ಮಾಡಿದ ಅನುಭವವನ್ನು ಪಡೆದಿದ್ದಾರೆ.
ಇವರ ಕೆಳಗೆ ಕೆಲಸ ಮಾಡಲು ಐವತ್ತು ಜನ ಎಲ್ಲಾ ಸಮುದಾಯದವರಿದ್ದು ಎಲ್ಲರನ್ನೂ ಸಮನಾಗಿ ಕಂಡು
ಅವರ ಜೀವನ ತಕ್ಕ ಮಟ್ಟಿಗೆ ಸುಧಾರಿಸಲು ಪ್ರಯತ್ನ ಮಾಡಿದ್ದಾರೆ.
ಪ್ರಕಟಿತ ಕೃತಿಗಳು
1..ಬಾಡದಿರಲಿ ಸ್ನೇಹ
2..ಆವಿಯಾಯಿತು ಭಾವ ( ಕವನಸಂಕಲನಗಳು )
3 ಬದುಕು ಬದಲಿಸಿದ ಮರದ
ಪೆಟ್ಟಿಗೆ ಮತ್ತು ಇತರ ಕಥೆಗಳು
( ಕಥಾ ಸಂಕಲನ)
ಬಸಮ್ಮ ಅವರು ಅಕ್ಕನ ಅರಿವು ವೇದಿಕೆಗೆ ಬಂದ ಮೇಲೆ ಆರು ಶರಣರ ಕುರಿತು ಲೇಖನಗಳು, ಮತ್ತು ತಾಯಿದ್ದರ ತವರೆಚ್ಚು ಪುಸ್ತಕದಲ್ಲಿ ತಮ್ಮ ತಾಯಿ ಬಗ್ಗೆ
ಲೇಖನ ಬರೆದಿದ್ದಾರೆ.
ಬಸಮ್ಮ ಅವರು ವಿಜಯಪುರದಲ್ಲಿ ಕಲ್ಬುರ್ಗಿ ಫೌಂಡೇಶನ ಅವರ ವಚನ ಸಿರಿ, ಸಾಹಿತ್ಯ ಸಿರಿ ಪ್ರಶಸ್ತಿ ಕಾರ್ಯಕ್ರಮದಲ್ಲಿ ಭಾಗಿ, ಬಸವ ಕಲ್ಯಾಣದ ಅನುಭವ ಮಂಟಪದಲ್ಲಿ ಅವರದೇ ಪುಸ್ತಕ ಬಿಡುಗಡೆ ಕಾರ್ಯಕ್ರಮ ಮತ್ತು ಬೆಂಗಳೂರಲ್ಲಿ ಅಕ್ಕನ ಮನೆ ಪ್ರತಿಷ್ಠಾನದ ಸಂಸ್ಕೃತಿ
ಸಂಭ್ರಮ ಸಮಾವೇಶದಲ್ಲಿ ಭಾಗಿಯಾಗಿದ್ದಾರೆ.
ಬಸಮ್ಮ ಅವರ ಪತಿ ದಿವಂಗತ ವೀರಣ್ಣ ಸೋಮಣ್ಣ ಭರಮಶೆಟ್ಟಿ ಉದ್ಯೋಗಸ್ತರು, ಸಿಂದಗಿ ತಾಲೂಕ. ಸಮಾಜವಾದಿ ಪಕ್ಷದ ಅಧ್ಯಕ್ಷರಾಗಿದ್ದರು.ಇವರಿಗೆ ಇಬ್ಬರು ಮಕ್ಕಳು.ಒಬ್ಬಳು ಮಗಳು ಮತ್ತು ಒಬ್ಬ ಮಗ. ಇಬ್ಬರೂ ಒಳ್ಳೆಯ ಹುದ್ದೆಯಲ್ಲಿದ್ದಾರೆ. ಇವರಿಗೆ ಇಬ್ಬರು ಮೊಮ್ಮಕ್ಕಳು.
ಬಸಮ್ಮ ಅವರಿಗೆ ಅಧ್ಯಾತ್ಮದ ಒಲವು ಚಿಕ್ಕಂದಿನಿಂದ ಅವರ ತಾಯಿಯಿಂದ ಬಂದಿದೆ ಅವರ
ತಾಯಿ ಬಸವ ಭಕ್ತೆ. ಅವರು ಪ್ರತಿದಿನ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಅನುಭಾವ ಕೇಳುತ್ತ ಒಂದು ನೂರಾಒಂದು ಸಲ “ಒಂ ನಮಃ ಶಿವಾಯ “ಅಂತ ಬರೆಯುತ್ತಾರೆ. ಶರಣರ ಬಗ್ಗೆ ಓದುವದು ಮತ್ತು
ತಿಳಿದುಕೊಳ್ಳುವ ಆಸಕ್ತಿಯಿದೆ. ಅದು ಅಕ್ಕನ ಅರಿವಿಗೆ ಬಂದ ಮೇಲೆ ಫಲಿಸಿದೆ.ಅವರ ತಂದೆ ಚಂದ್ರಶೇಖರ ಉಪ್ಪಿನ ಇವರು ಸ್ವಾತಂತ್ರ್ಯ ಹೋರಾಟಗಾರರು ಒಂದು ಸಲ ಗುಲ್ಬರ್ಗಜೈಲಿನಲ್ಲಿ ಒoಬತ್ತು ತಿಂಗಳು ಹಿಂಸೆ ಅನುಭವಿಸಿದವರು.ಅವರೊಬ್ಬ ಸಮಾಜ ಸೇವಕರು ಮನೆ ಕೆಲಸಕ್ಕಿಂತ ಮಂದಿ ಕೆಲಸ ಮಾಡಿದ್ದೇ ಹೆಚ್ಚು. ಭಜನೆ
ಪದಗಳು ಹಾಡುತ್ತಿದ್ದರೆ ಪರಿಜ್ಞಾನ ಇರುತ್ತಿರಲಿಲ್ಲ.ಒಂದು
ತಿಂಗಳು ಶರಣ ಬಸವೇಶ್ವರ ದೇವಸ್ಥಾನದಲ್ಲಿ ಶ್ರಾವಣ
ಮಾಸದಲ್ಲಿ ಭಜನೆ ಮಾಡಿದ್ದಕ್ಕೆ ಪೂಜ್ಯ ದೊಡ್ಡಪ್ಪ ಅಪ್ಪ ಅವರು ಬೆಳ್ಳಿ ನಾಣ್ಯಗಳು ಬಹುಮಾನವಾಗಿ ಕೊಟ್ಟಿದ್ದರು.
ಅವರ ತಾಯಿ ಸುಭದ್ರಾದೇವಿ ಶ್ರಮ ಜೀವಿ.ಲಿಂಗ ಪೂಜೆ ಬಿಟ್ಟು ಬೇರೆ ಪೂಜೆ ಮಾಡಿಲ್ಲ. ಓದಿಲ್ಲ,ಬರೆದಿಲ್ಲ,ಆದರೂ ಕೈ ಬಟ್ಟುಗಳ ಅಳತೆಯಿಂದ ಬಟ್ಟೆ ಹೊಲೆದು ಅವರನ್ನು ಬೆಳೆಸಿದ್ದಾರೆ.ಅವರಹೊಲೆಯುವ ಕಲೆ ನೋಡಿ ಅವರ ಅಮ್ಮನಿಗೆ ಪರಿಚಯದವರು ಸರಕಾರಿ ನೌಕರಿ ಕೊಡಿಸಿದರು. ಅಲ್ಲಿ ಮುಂದೆ ಬಸಮ್ಮ ಅವರಿಗೆ ಓದಲು ಅವಕಾಶ ಇರಲಿಲ್ಲ. ಹಾಗಾಗಿ ಅವರ ಓದಿನ ಸಲುವಾಗಿ ಅವರ ತಾಯಿ ಯವರು ಕಷ್ಟ ಪಟ್ಟು ಗಳಿಸಿದ ಸರಕಾರಿ ನೌಕರಿ ಬಿಟ್ಟು ಗುಲ್ಬರ್ಗಕ್ಕೆ ಬಂದು ನೆಲೆಸಿದರು.ಅವರ ತಂದೆ ವಿಧಿವಶರಾದ ಮೇಲೆ ಅವರ ತಾಯಿಗೆ ಕೆಲಸ ಬಿಡಿಸಿ ಮೂವತೈದು ವರ್ಷ ತಮ್ಮ ಜೊತೆ ಇರಿಸಿಕೊಂಡು ಚೆನ್ನಾಗಿ ನೋಡಿಕೊಂಡಿದ್ದೇನೆ ಎನ್ನುವ ತೃಪ್ತಿ ಅವರಿಗಿದೆ.ಅದಕ್ಕೆ ಅವರ ಯಜಮಾನರ ಸಹಕಾರವೂ ಸಹ ಇತ್ತು.
ಅತೀ ಕಷ್ಟದ ಸಮಯದಲ್ಲಿ ಮಗಳ ಓದು ನಿಲ್ಲುವ ಪ್ರಸಂಗ ಬಂದಿತ್ತು. ಕಿವಿಯೋಲೆ ಮಾರಿ ಒಂದು ವರ್ಷದ ಫೀಸು ಕಟ್ಟಲಾಯಿತು. ಕಷ್ಟಕ್ಕೆ ಹೆದರಿ ಓದು ನಿಲ್ಲಿಸಿದರೆ ಇಂದು ಅವಳ ಜೀವನ ಹೀಗಿರುತ್ತರಲಿಲ್ಲ.ಕಷ್ಟ ಅಂತ ಕೈ ಕಟ್ಟಿ ಕೂಡದೆ ಎಲ್ಲವನ್ನೂ ಧೈರ್ಯದಿಂದ ಎದುರಿಸುತ್ತ ಬಂದಿದ್ದಾರೆ. ಒಂದು ರೀತಿಹೋರಾಟದ ಬದುಕು ಅವರದು. ಅವರಿಗೆ ರಾಂಪುರದಲ್ಲಿ ಹೊಲ ಕೊಟ್ಟವರ ಮಗನಿಗೆಒಂಬತ್ತನೇ ಕ್ಲಾಸಿಂದ ಟಿ. ಸಿ. ಎಚ್ ವರೆಗೆ ಓದಿಸಿ ನೌಕರಿ ಹಚ್ಚಿದ್ದು, ಒಂದು ಹುಡುಗಿಗೆ ಇಂಜಿನಿಯರ್ ಓದಿಸಿದ್ದು ಮತ್ತು ಈಗ ಒಂದು ಹುಡುಗಿಗೆ ಓದಿಸುತ್ತಿರುವುದನ್ನು ಅತ್ಯಂತ ಹೆಮ್ಮೆಯಿಂದ ಅವರು ಹಂಚಿಕೊಳ್ಳುತ್ತಾರೆ. ಒಬ್ಬರಿಗೆ ಓದಿಸಿದರೆ ಅವರ ಸಂಸಾರವೇ ಸುಧಾರಿಸುತ್ತದೆ ಅಂತ ಅವರ ಭಾವನೆ.
ಬೆಂಗಳೂರು ಕ್ಯಾನ್ಸರ್ ಆಸ್ಪತ್ರೆ” ಕರುಣಾಶ್ರಯ ” ಆಸ್ಪತ್ರೆಗೆ ಹಾಸ್ಪೆಟಲ ಬೆಡ್ ಮತ್ತು ವೀಲ್ ಚೇರ್, ಮತ್ತು ಕೆಲವು ಸಾಮಗ್ರಿ ಕೊಟ್ಟಿದ್ದಾರೆ. ಶ್ರಾವಣಮಾಸದಲ್ಲಿ ಭಜನೆ ಮಾಡುತ್ತ ಪಾದಯಾತ್ರೆಯಲ್ಲಿ ಗುಲ್ಬರ್ಗಕ್ಕೆ ಹೋಗುವವರು ರಾಂಪುರ ಮಾರ್ಗವಾಗಿ ಹೋಗುವಾಗ ಅವರು ಎಷ್ಟೇ ಜನ ಇರಲಿ ಅವರಿಗೆ ಒಂದು ಹೊತ್ತಿನ ಊಟದ ವ್ಯವಸ್ಥೆ ಮಾಡುತ್ತಿದ್ದರು.
ಬಸಮ್ಮ ಅವರ ಮನೆಯವರು ವಿಧಿವಶರಾಗಿ ಹದಿನೈದು ವರ್ಷ ಆಯಿತು. ಆಗ ಎಲ್ಲವನ್ನೂ ಎದುರಿಸುತ್ತ ಬದುಕು ಕಟ್ಟಿಕೊಳ್ಳುವಲ್ಲಿ ಸೋತು ಬಸವಳಿದಿದ್ದರು. ಅಕ್ಕನ ಅರಿವು ವೇದಿಕೆ ಅವರಿಗೆ ಜೀವನದಲ್ಲಿಶಾಂತಿ ತಂದು ಕೊಟ್ಟಿದೆ.ಅವರು ಅತ್ಯಂತ ಕಠಿಣ ಸಮಯ ನೋಡಿದ್ದಾರೆ.
ಅತ್ಯಂತ ಒಳ್ಳೆಯ ಸಮಯವನ್ನೂ ಸಹ
ನೋಡಿದ್ದಾರೆ. ತಾವು ಕಷ್ಟದಲ್ಲಿದ್ದಾಗ ತಮಗೆ ಸಹಾಯ ಮಾಡಿದವರಿಗೆ ಕೃತಜ್ಞತೆ ಸಲ್ಲಿಸುವುದು ಮರೆಯುವುದಿಲ್ಲ. ಅವರು ಕಷ್ಟದಲ್ಲಿರುವವರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡಿದ್ದಾರೆ. ರಾಂಪುರ ಗ್ರಾಮದಲ್ಲಿ ಸುಮಾರು ಜನರಿಗೆ ಸಹಾಯಮಾಡಿದ್ದಾರೆ.ಮುಂದೆಯೂ ಮಾಡುವ ಆಸೆ ಇದೆ. ಬಿಟ್ಟು ಹೋಗುವ ಪ್ರಪಂಚಕ್ಕೆ ಏನಾದರೂ ಕೊಟ್ಟು ಹೋಗಬೇಕೆಂದಿರುವ ವಿಚಾರ ಇದೆ.
ತಾವೇನೂ ದೊಡ್ಡ ಸಾಧಕಿಯಲ್ಲ, ತಮಗೆ ತಿಳಿದದ್ದು ತಾವು ಮಾಡುತ್ತ ಬಂದಿದ್ದೇನೆ ಎನ್ನುವ ನಮ್ರತಾ ಭಾವ ಬಸಮ್ಮ ಅವರಲ್ಲಿದೆ. ದೇವರಲ್ಲಿ ಅವರು ಬೇಡಿಕೊಳ್ಳುವದು ಅವರಿಂದ ತಪ್ಪಾಗದಂತೆ ನೋಡಿಕೊಳ್ಳು, ಸರಿದಾರಿ ತೋರು ಎಂದು. ದೇಹ ದಾನ ಮಾಡುವ ಆಸೆ ಸಹ ಅವರಿಗಿದೆ.
ಈಗಲೂ ಅವರು ತಮ್ಮ ಮೊಮಕ್ಕಳ ಹುಟ್ಟಿದ ಹಬ್ಬ
ಮನೆಯಲ್ಲಿ ಮಾಡುವದಿಲ್ಲ ಅಂದಿನ ದಿನ ಬೆಂಗಳೂರಲ್ಲಿರುವ ಆಶ್ರಮಕ್ಕೆ ದುಡ್ಡು ಕೊಡುತ್ತಾರೆ. ಬಸಮ್ಮ ಅವರಿಗೆ ಅಕ್ಕನ ಅರಿವು ವೇದಿಕೆಗೆ ಬಂದ ಮೇಲೆ ಬರೆಯುವ ಆಸಕ್ತಿ ಹೆಚ್ಚಾಗಿದೆ, ನಾಲ್ಕು ಜನರ ಎದುರು ಮಾತನಾಡಲು, ಓದಲು, ಬರೆಯಲು ಆತ್ಮ ವಿಸ್ವಾಸ ತುಂಬಿದ ಡಾ. ಶಶಿಕಾಂತ ಪಟ್ಟಣ ಸರ್ ಅವರು ಅವರ ಬಹು ದಿನಗಳ ಕನಸು ನನಸು ಮಾಡಿದ್ದಾರೆ, ಈ ವೇದಿಕೆಯ ಎಲ್ಲಾ ಸದಸ್ಯರು ಅತ್ಯಂತ ಪ್ರತಿಭಾವಂತರು ಸಹಕಾರಿಗಳು
ಸಜ್ಜನರ ಸಂಗ ಹೆಜ್ಜೇನು ಸವಿದಂತೆ ಅನ್ನುವ ಹಾಗೆ ಅಕ್ಕನ ಅರಿವು ವೇದಿಕೆ ಅವರಿಗೆ ಖುಷಿ ಕೊಟ್ಟಿದೆ, ಬರವಣಿಗೆ ಮುಂದುವರೆಸುವ ಯೋಜನೆ ಇದೆ. ಈ ವೇದಿಕೆ
ಮುಖಾಂತರ ಏನೇ ಕಾರ್ಯಕ್ರಮಗಳಾದರೂ
ಭಾಗವಹಿಸುವ ಉದ್ದೇಶ ಇದೆ. ಅದೇ ಒಂದು ಸೌಭಾಗ್ಯ ಎಂದು ಅವರು ಹೇಳುತ್ತಾರೆ.
ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರ – ಪುಣೆ

