ಲೇಖನ : ಅಕ್ಕ ಮಹಾದೇವಿ ತಾಯಿಯನ್ನು ಬೆತ್ತಲೆ ಮಾಡಿದ ಗಂಗಾ ಮಾತಾಜಿ

Must Read

ಅಕ್ಕ ಮಹಾದೇವಿ ಬೆತ್ತಲೆ – ಗಂಗಾ ಮಾತಾಜಿ ಬೇಜವಾಬ್ದಾರಿ ವಚನ ಟಿವಿ ಸಂದರ್ಶನ

ಬಸವ ಸಂಸ್ಕೃತಿಯ ಅಭಿಯಾನದಲ್ಲಿ ಕೆ ಎಲ್ ಈ ಸಂಸ್ಥೆಯ ಮೃತ್ಯುಂಜಯ ಕಾಲೇಜಿನ ಕಲಾ ವಾಣಿಜ್ಯ ಮಹಾವಿದ್ಯಾಲದಲ್ಲಿ ನಡೆದ ವಿದ್ಯಾರ್ಥಿಗಳ ಸಂವಾದದಲ್ಲಿ ಕಾಲೇಜಿನ ವಿದ್ಯಾರ್ಥಿಯ ಅಕ್ಕ ಮಹಾದೇವಿ ಬೆತ್ತಲೆ ಬಂದಿದ್ದರೆ ಎಂಬ ಪ್ರಶ್ನೆಗೆ ಭಾಲ್ಕಿಯ ಡಾ. ಬಸವಲಿಂಗ ಪಟ್ಟಾಧ್ಯಕ್ಷರು ಹೌದು ಅಕ್ಕ ಮಹಾದೇವಿ ಕಲ್ಯಾಣಕ್ಕೆ ದಿಟ್ಟವಾಗಿ ದಿಗಂಬರೆಯಾಗಿ ಬಂದಿದ್ದಳು ಎಂದು ಉತ್ತರಿಸಿದ್ದು ಬಸವ ಮೀಡಿಯಾ ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ ಬಂದಿವೆ. ಪೂಜ್ಯ ಡಾ ಬಸವಲಿಂಗ ಸ್ವಾಮಿಗಳು ಅತ್ಯಂತ ಅಪ್ರಬುದ್ಧ ರೀತಿಯಲ್ಲಿ ಉತ್ತರಿಸಿದ್ದು ಕೇವಲ ಅಕ್ಕ ಮಹಾದೇವಿಯ ಚರಿತ್ರೆಗೆ ಅಷ್ಟೇ ಅಲ್ಲ ಇದು ಶರಣೆಯರ ಸಂಕುಲಕ್ಕೆ ಅಪಮಾನ ಮಾಡಿದಂತಾಗಿದೆ. ಇದು ಖಂಡನೀಯ ನಿಮ್ಮಂತಹ ಬಸವ ಪ್ರಜ್ಞೆಯುಳ್ಳ ಸ್ವಾಮಿಗಳೇ ಹೀಗೆ ಬೇಜವಾಬ್ದಾರಿಯಾಗಿ ಉತ್ತರಿಸಿದರೆ, ಶರಣ ತತ್ವಗಳನ್ನು ವಿರೋಧಿಸಿದವರು ಇನ್ನೆಷ್ಟು ಹಗುರವಾಗಿ ಮಾತನಾಡಬಹುದು.?

ಇದು ನಡೆದು ಇನ್ನೂ ಒಂದು ತಿಂಗಳಾಗಿಲ್ಲ ಶಾಲೆಗೆ ಹೋಗದೆ ಜಗದ್ಗುರು ಎನಿಸಿದ ಗಂಗಾ ಮಾತಾಜಿ ಅವರು ಇವತ್ತು ವಚನ ಟಿವಿಯಲ್ಲಿ ಸಂದರ್ಶನ ಕೊಡುತ್ತಾ
ವಚನ ಟಿವಿಯಲ್ಲಿ ನಿರೂಪಕರ ಅನಗತ್ಯ ಪ್ರಶ್ನೆಗೆ
ಗಂಗಾ ಮಾತಾಜಿ ಕಥೆ ಕಟ್ಟಿ ಉಡುತಡಿಯಿಂದ ಅಕ್ಕ ಮಹಾದೇವಿ ಬೆತ್ತಲೆ ಬಂದು ಮುಂದೆ ತ್ರಿಪುರಾಂತಕ ಕೆರೆಗೆ ಹೋಗಿ ಸ್ನಾನ ಮಾಡಿ ಪೂಜೆಗೆ ಕುಳಿತಳು ಆಗ
ಒಂದೇ ಸೀರೆ ಇತ್ತು ಅದನ್ನು ಒಣಗಿಸಲು ಅಕ್ಕ ಮಹಾದೇವಿ ಗಿಡಕ್ಕೆ ಒಣಗಿಸಲು ಹಾಕಿ ಲಿಂಗ ಪೂಜೆ ಮಾಡ ಹತ್ತಿದರು ಆಗ ಒಂದು ಹೋರಿ ಬಂದು ಅಕ್ಕನ ಸೀರೆ ತಿಂದಿತು ಅದೇ ಸಮಯಕ್ಕೆ ಕಿನ್ನರಿ ಬೊಮ್ಮಯ್ಯ ಬಂದನು ಅವಳನ್ನು ಪ್ರಶ್ನಿಸಿದನು ನಂತರ ನೋಡಿದಲ್ಲಿ ಸೀರೆ ಇರಲಿಲ್ಲ ಇದು ಚೆನ್ನ ಮಲ್ಲಿಕಾರ್ಜುನ ದೇವರ ಇಚ್ಛೆಯಾಗಿರ ಬೇಕು ಎಂದು ಅನುಭವ ಮಂಟಪಕ್ಕೆ ಪೆದ್ದು ಪೆದ್ದಾಗಿ ಹೇಳಿದರು ಗಂಗಾ ಮಾತಾಜಿ

ಇಂತಹ ಕಪೋಲ ಕಲ್ಪಿತ ಕಥೆಗಳನ್ನು ಹೇಳುವಾಗ ಅದರ ಪರಿಣಾಮ ಏನಾಗುತ್ತದೆ ಎನ್ನುವ ಸಾಮಾನ್ಯ ಪ್ರಜ್ಞೆ ಈ ದಡ್ಡ ಕಾವಿಗಳಿಗಿಲ್ಲ ಅಕ್ಕ ಮಹಾದೇವಿ ಅವರನ್ನು ಬೆತ್ತಲೆ ಮಾಡಿ ತಾವು ಮಾತ್ರ ಅವರ ಹೆಸರಿನಲ್ಲಿ ಮರೆಯ ಬೇಕು ಎನ್ನುವ ಮೂರ್ಖತನ. ಅನ್ನ ತಿನ್ನುವವರು ಅಕ್ಕ ಮಹಾದೇವಿ ಅವರನ್ನುತಮ್ಮ ತಾಯಿ ಎಂದು ನಂಬಿದವರು ಅಕ್ಕ ಮಹಾದೇವಿ ಬೆತ್ತಲೆ ಬಂದಿದ್ದು ಎಂದು ಹೇಳಿದರೆ ತಮ್ಮ ತಾಯಿಯನ್ನು ಅಥವಾ ತಾವೇ ಒಮ್ಮೆ ಬೆತ್ತಲೆಯಾಗಿ ಅಡ್ಡಾಡಲಿ ನಾಗರಿಕ ಸಮಾಜದ ಸ್ವಾಸ್ಥ್ಯವನ್ನು ಕಲಕುವುದು ಇಂತಹ ಅರಿವಿಲ್ಲದ ಮಾತಾಜಿಗೆ ಹೊಸದೇನಲ್ಲ.

ನಿಮ್ಮ ಗಮನಕ್ಕೆ ನನ್ನ ಲೇಖನ ಕಳುಹಿಸುತ್ತಿದ್ದೇನೆ.

ಅಕ್ಕ ಮಹಾದೇವಿ ಕಲ್ಯಾಣಕ್ಕೆ ಬೆತ್ತಲೆಯಾಗಿ ಬಂದಳೇ ?

ಕಲ್ಯಾಣದ ಚಿತ್ಕಳೆ ಅಕ್ಕ ಮಹಾದೇವಿ ಕದಳಿ ಕರ್ಪುರ

ಹನ್ನೆರಡನೆಯ ಶತಮಾನವು ಭಾರತದ ಇತಿಹಾಸದಲ್ಲಿ ಸುವರ್ಣ ಯುಗವೆಂದೇ ಕರೆಯಬಹುದು. ವರ್ಗ ವರ್ಣ ಲಿಂಗ ಭೇದ ಆಶ್ರಮ ಭೇದ ಸಾಂಸ್ಥಿಕರಣವಲ್ಲದ ಜಗತ್ತಿನ ಏಕೈಕ ಮತ್ತು ಒಂದೇ ಧರ್ಮವೆಂದರೆ ಲಿಂಗಾಯತ ಧರ್ಮವಾಗಿದೆ. ಬಸವ ಚಳವಳಿಯಲ್ಲಿ ದೇಶದ ನಾನಾ ಭಾಗಗಳಿಂದ ಜನರು ಸಾಧಕರು ಬೀದರ ಜಿಲ್ಲೆಯ ಕಲ್ಯಾಣಕ್ಕೆ( ನಂತರ ಇದು ಬಸವ ಕಲ್ಯಾಣವೆಂದು ಕರೆಯಲ್ಪಟ್ಟಿತ್ತು ) ಆಗಮಿಸ ಹತ್ತಿದರು. ಅಕ್ಕ ಮಹಾದೇವಿ ಅಂತಃಶರಣ ಸಂಕುಲದಲ್ಲಿ ಅಗ್ರ ಗಣ್ಯಳು .

ಅಕ್ಕ ಹುಟ್ಟಿದ್ದು ಇಂದಿನ ಶಿವಮೊಗ್ಗೆ ಜಿಲ್ಲೆಯ ಉಡತಡಿ ಗ್ರಾಮದಲ್ಲಿ ವ್ಯಾಪಾರಸ್ಥ ಬಣಜಿಗ ಕುಟುಂಬದ ನಿರ್ಮಲಶೆಟ್ಟಿ ಹಾಗೂ ಸುಮತಿಯರ ಗರ್ಭದಲ್ಲಿ ಜನಿಸಿದಳು . ಬಾಲ್ಯದಿಂದಲೂ ವೈರಾಗ್ಯದ ಪ್ರೀತಿಯ ಖನಿಜವಾದ ಅಕ್ಕ ತಾನು ಆರಾಧಿಸುವ ಚೆನ್ನ ಮಲ್ಲಿಕಾರ್ಜುನ ದೇವನೆ ತನ್ನ ಪತಿ ಎಂದು ನಂಬಿದ್ದಳು. ಮುಂದೆ ಬಾಲ್ಯ ಕಳೆದು ಯೌವನಕ್ಕೆ ಕಾಲಿಟ್ಟ ಈ ರೂಪವತಿ ತಾನು ತನ್ನ ಅಧ್ಯಯನ ಅಧ್ಯಾತ್ಮದ ಹಸಿವು ಸಾಧನೆಗೆ ತೊಡಗಿಸಿಕೊಂಡಳು.ಉಡತಡಿ ಇದನ್ನು ಕೌಶಿಕನೆಂಬ ಜೈನ ಸಾಮಂತನು ಆಳುತ್ತಿದ್ದನು .
ಯಾವುದೋ ಸಂದರ್ಭದಲ್ಲಿ ಒಮ್ಮೆ ಅಕ್ಕ ಮಹಾದೇವಿಯನ್ನು ನೋಡಿದನು ,ಅವಳನ್ನೇ ಮದುವೆ ಆಗಲು ನಿರ್ಧರಿಸಿದನು.

ಅದೇ ರೀತಿ ಅಕ್ಕ ಮಹಾದೇವಿಯ ತಂದೆ ನಿರ್ಮಲ ಶೆಟ್ಟಿ ಮತ್ತು ತಾಯಿ ಸುಮತಿಯರಿಗೆ ಈ ವಿಷಯ ಹೇಳಿ ಕಳಿಸಿದನು. ಇಲ್ಲದಿದ್ದದರೆ ಇವರ ತಂದೆ ತಾಯಿಯವರಿಗೆ ಗಲ್ಲು ಶಿಕ್ಷೆ ವಿಧಿಸುವದಾಗಿ ದೊರೆ ಬೆದರಿಕೆ ಹಾಕಿದನು. ತಂದೆ ತಾಯಿಗಳ ಒತ್ತಾಯ, ಮಾತು ಸಂದರ್ಭದ ಒತ್ತಡಕ್ಕೆ ಸಿಲುಕಿದ ಅಕ್ಕ ತಾನು ೩ ಷರತ್ತು ರಾಜನಿಗೆ ವಿಧಿಸಿದಳು ಅವುಗಳಲ್ಲಿ ಯಾವುದೇ ಯಾವುದಾದರು ಷರತ್ತು ರಾಜನು ಮೀರಿದರೆ ತನು ರಾಜನನ್ನು ಒಪ್ಪುವದಿಲ್ಲ ಅಂತ ಹೇಳಿದಾಗ . ರಾಜ ಕೌಶಿಕ ಆಗಲಿ ಎಂದು ಹೇಳಿದನು, ಆದರೆ ಮದುವೆಯಾಗಲು ಅಕ್ಕ ಸಮಯ ಕೇಳಿದಳು.,ಮಹಾದೇವಿ ಮದುವೆ ಆಗಿದ್ದಳು ಎಂದು ಕೇವಲ ಮೂರು ಪ್ರಾಚಿನ ಗ್ರಂಥಗಳು ಹೇಳುತ್ತವೆ.

1)ಹರಿಹರ ದೇವನ ಉಡತಡಿ ಮಹಾದೇವಿಯಕ್ಕನ ರಗಳೆಗಳು
2) ಚೆನ್ನಬಸವಾ೦ಕನ ಮಹಾದೇವಿಯಕ್ಕನ ಪುರಾಣ
3 ) ಕೆಂಚ ವೀರನ್ನೊಡೆಯರ ಶೂನ್ಯ ಸಂಪಾದನೆ

ಅವಳು ವಿವಾಹವಾಗಿಲ್ಲ ಅಂತ ಹೇಳಲು ಅನೇಕ ಪ್ರಾಚಿನ ಮತ್ತು ಇತ್ತೀಚಿನ ಮಾತಾಜಿಯವರ ಹೆಪ್ಪಿಟ್ಟ ಹಾಲು , ತರಂಗಿಣಿ ಮುಂತಾದ ಕೃತಿಗಳಲ್ಲಿಯೂ ಕಂಡು ಬರುತ್ತದೆ .

ಅವುಗಳಲ್ಲಿ

1 ) ಚಾಮರಸನ ಪ್ರಭುಲಿಂಗಲೀಲೆ
2) ವಿರುಪಾಕ್ಷ ಪಂಡಿತ ಕೃತ ಚೆನ್ನಬಸವ ಪುರಾಣ
3) ಎಳ೦ದೂರು ಹರೀಶ್ವರ ಕೃತ ಪ್ರಭುದೇವರ ಪುರಾಣ
4 ) ಪಾಲ್ಗುರಿಕೆ ಸೋಮನಾಥ ಪುರಾಣ
5 )ಸಂಸ್ಕೃತ ಪ್ರಭುಲಿಂಗಲೀಲೆ
6 ) ತೆಲಗು ಮತ್ತು ತಮಿಳು ಪ್ರಭುಲಿಂಗಲೀಲೆ
7 ) ಹಲಗೆಯ ದೇವರ ಶೂನ್ಯ ಸಂಪಾದನೆ
8 ) ಗಣ ಭಾಷಿತ ರತ್ನ ಮಾಲೆ
9) ಗೂಳೂರು ಸಿದ್ದಣ್ಣ ವೀರಣ್ಣ ಒಡೆಯರ -ಶೂನ್ಯ ಸಂಪಾದನೆ.

ಅಲ್ಲದೆ ಅತ್ಯಂತ ಸುಂದರವಾಗಿ ರಚಿಸಿದ ಮಾತಾಜಿಯ ಹೆಪ್ಪಿಟ್ಟ ಹಾಲು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕೃತಿ . ಈ ಎಲ್ಲ ಕೃತಿಗಳು ಮಹಾದೇವಿ ಕೇವಲ ಮದುವೆಗೆ ಸಮ್ಮತಿಸಿ ತನ್ನ ಷರತ್ತನ್ನು ಇಟ್ಟಿದ್ದಳು ಎಂದು ಹೇಳುತ್ತವೆ.
ಹಾಗಿದ್ದರೆ ಆ ಷರತ್ತು ಯಾವವು

1 ) ಎನ್ನಿಚ್ಚೆಯೊಳು ಶಿವಲಿಂಗಲಿಂಗಪೂಜೆಯೊಳಿಪ್ಪೆ
2) ಎನ್ನಿಚ್ಚೆಯೊಳು ಮಾಹೇಶ್ವರ ಗೋಷ್ಟಿಯೊಳಿಪ್ಪೆ .
3 ) ಎನ್ನಿಚ್ಚೆಯೊಳು ಗುರು ಸೇವೆಯೊಳಿಪ್ಪೆ

ಒಮ್ಮೆ ಅಕ್ಕನು ಶಿವಲಿಂಗ ಪೂಜೆ ನಿರತಳಾದಾಗ ಕೌಶಿಕನು ಅಕ್ಕನನ್ನು ವರಿಸಲು ಬಂದಾಗ ,ಇಲ್ಲಿ ಅಪ್ಪುಗೆಯೂ ಇಲ್ಲ ಆಲಿಂಗನವೂ ಇಲ್ಲ.ಇದೊಂದು ಕಾಲ್ಪನಿಕ ಸೃಷ್ಟಿ ಅದಕ್ಕೆ ಮದುವೆಗೆ ಒಲ್ಲದ ಮನಸ್ಸಿನಿ೦ದ ಒಪ್ಪಿಗೆ ಸೂಚಿಸಿದ ಅಕ್ಕ ಇದನ್ನು ಒಪ್ಪದೇ ತಂದೆ ತಾಯಿಗೂ ನೋಯಿಸದೆ ಮನೆಯನ್ನು ಬಿಟ್ಟು ನಡೆದಳು .

ಅದನ್ನು ಅಕ್ಕ ಈ ರೀತಿ ಹೇಳಿದ್ದಾಳೆ.           ಎಮ್ಮೆಗೊಂದು ಚಿಂತೆ, ಸಮಗಾರಗೊಂದು ಚಿಂತೆ   ಧರ್ಮಿಗೊಂದು ಚಿಂತೆ ,ಕರ್ಮಿಗೊಂದು ಚಿಂತೆ        ಎನಗೆ ಎನ್ನ ಚಿಂತೆ ತನಗೆ ತನ್ನ ಕಾಮದ ಚಿಂತೆ             ಒಲ್ಲೆ ಹೋಗು ಸೆರಗು ಬಿಡು ಮರುಳೆ                       ಎನಗೆ ಚೆನ್ನ ಮಲ್ಲಿಕಾರ್ಜುನ ದೇವರು ಒಲಿವರು ಒಲಿಯರೋ ಎಂಬ ಚಿಂತೆ ?

ಪ್ರಾಪಂಚಿಕ ಬದುಕಿಗೆ ವಿದಾಯ ಹೇಳಿದ ಅಕ್ಕ ತನ್ನ ವೈರಾಗ್ಯದ ಸಾಧನೆಗೆ ಹೆಜ್ಜೆ ಹಾಕಿದಳು .

ಅಮೇಧ್ಯದ ಮಡಕೆ ಮೂತ್ರದ ಕುಡಿಕೆ
ಎಲುವಿನ ತಡಿಕೆ ಕೀವಿನ ಹದಿಕೆ
ಸುಡಲೀ ದೇಹವ ,ಒಡಲುವಿಡಿದು ಕೆಡದಿರು
ಚೆನ್ನಮಲ್ಲಿಕಾರ್ಜುನನರಿಯದ ಮರುಳೆ .

ತನ್ನ ಶರೀರ ಹೊಲಸು ತುಂಬಿದ ಮಡಕೆ ಮತ್ತು ತಾನು ವ್ಯಕ್ತಿಯಾಗಿ ಬರೀ ಎಲುವು ಮಾ೦ಸದ ತಡಿಕೆ ಇಂತಹ ಬಾಹ್ಯ ಶರೀರಕ್ಕೆ ಆಕರ್ಷಿತನಾಗದೆ ದೇವನನ್ನು ಅರಿಯುವ ಮಾರ್ಗ ಕಂಡು ಕೊಳ್ಳಲು ಮಹಾದೇವಿ ಸಲಹೆ ಸೂಚನೆ ನೀಡಿ ,ತನ್ನ ದೇಹದ ಮೋಹವ ಕಡಿದು ಕೊಂಡು ಮನ ಬೆತ್ತಲೆಯಾಗಿ ತನ್ನ ಚೆನ್ನಮಲ್ಲಿಕಾರ್ಜುನನನ್ನು ಅರಸುತ್ತ ಅಕ್ಕ ಕಲ್ಯಾಣದತ್ತ ಹೆಜ್ಜೆ ಹಾಕುವಳು .

ದಟ್ಟವಾದ ಅರಣ್ಯ ಯೌವನದ ಬಾಲೆ ತಂದೆ ತಾಯಿಯರಿಗೆ ಸಖಿಯರಿಗೆ ನೋವು ಇವರೆಲ್ಲರಿಗೂ ತಾನು ಚೆನ್ನಮಲ್ಲಿಕರ್ಜುನನ್ನು ಕಾಣುವೆನೆಂದು ಹೋಗುವಳು .

ಅಳಿಸಂಕುಲವೆ ಮಾಮರವೆ ಬೆಳುದಿಂಗಳೇ , ಕೋಗಿಲೆಯೇ ನಿಮ್ಮೆಲ್ಲರನೂ ಒಂದು ಬೇಡುವೆನು .
ಎನ್ನೊಡೆಯ ಚೆನ್ನಮಲ್ಲಿಕಾರ್ಜುನ ದೇವ ಕಂಡರೆ ಕರೆದು ತೋರಿರೆ.
ಅಳಿಲು ಕೋಗಿಲೆ ಮರ ಪಕ್ಷಿ ಬೆಳುದಿಂಗಳು ಎಲ್ಲ ಚರಾ ಚರ ಜೀವಗಳನ್ನು ಕೈ ಮುಗಿದು ಅಕ್ಕ ಚೆನ್ನ ಮಲ್ಲಿಕಾರ್ಜುನನ ಕಾಣುವ ತವಕದಿ೦ದ ನಡೆಯುತ್ತಾಳೆ.
ಅಲ್ಲದೆ ಇಂದೆನ್ನ ಮನೆಗೆ ಗಂಡ ಬಂದಹನೆಲೆಗವ್ವಾ
ನಿಮ ನಿಮಗೆಲ್ಲ ಶೃಂಗಾರ ಮಾಡಿಕೊಳ್ಳಿ
ಚೆನ್ನ ಮಲ್ಲಿಕಾರ್ಜುನನೀಗಳೇ ಬಂದಿಹನು
ಇದಿರುಗೊಳ್ಳಿ ಬನ್ನಿರವ್ವಗಳಿರಾ .

ಎಂತಹ ದೃಢ ನಿರ್ಧಾರ ಅಕ್ಕನದು.ಊರಿನ ಜನರೆಲ್ಲಾ ಅಕ್ಕ ಮಹಾದೇವಿಯನ್ನು ಬೀಳ್ಕೊಡುವಾಗ ಭೀತಿಯಿಂದ ಅವಳ ಮುಂದಿನ ನಡೆ ಹೇಗೆ ಎಂದು ಚಿಂತಿಸಿರುವಾಗ

ಹಸಿವಾದೊಡೆ ಭಿಕ್ಷಾನ್ನ ಉಂಟು
ತೃಷೆಯಾದೊಡೆ ಕೆರೆ ತೊರೆ ಭಾವಿಗಳು
ತೊಡಿಗೆಗೆ ಬಿಸುಟಿದ ಬಟ್ಟೆ ಉಂಟು
ಶಯನಕ್ಕೆ ಹಾಳು ದೇಗುಲ ಉಂಟು

ಎಂದೆನ್ನುತ್ತಾ ತನ್ನ ಸಂಗಾತಿ ಚೆನ್ನ ಮಲ್ಲಿಕಾರ್ಜುನ ಉಂಟು ಎಂದಿದ್ದಾಳೆ. ಹೀಗಿರುವಾಗ ಚರಿತ್ರೆಯಲ್ಲಿ ಅವಳನ್ನು ಬೆತ್ತಲೆಯಾಗಿ ಚಿತ್ರಿಸುವುದು ಹೆಣ್ಣು ಕುಲಕ್ಕೆ ಮಾಡುವ ಅಪಮಾನವಲ್ಲವೆ ? ಹಲಗೆಯಾರ್ಯನ ಸಂಪಾದನೆಯ ಶೂನ್ಯ ಸಂಪಾದನೆಯಲ್ಲಿ ಅಕ್ಕ ಮಹಾದೇವಿಯು ನಗ್ನಳಾಗಿ ಬಂದಿದ್ದು ದಾಖಲಾಗಿದೆ. ಇದಕ್ಕೆ ಡಾ ಎಂ ಎಂ ಕಲಬುರ್ಗಿ ಡಾ ವೀರಣ್ಣ ರಾಜೂರ ಅಂತವರು ಅಕ್ಕ ಮಹಾದೇವಿ ಬೆತ್ತಲೆ ಬಂದಿಲ್ಲ ಎಂದಿದ್ದಾರೆ.

ಅಕ್ಕ ತನ್ನ ಮದುವೆಯನ್ನು ಯಾವ ರೀತಿಯಲ್ಲಿ ಹೇಳಿದ್ದಾಳೆ ಎನ್ನುವದನ್ನು ಇಲ್ಲಿ ಸ್ವಲ್ಪ ನೋಡೋಣ

ಕಾಮನ ತಲೆಯ ಕೊರೆದು ,ಕಾಲನ ಕಣ್ಣ ಕಳೆದು
ಸೋಮ ಸೂರ್ಯರ ಹುರಿದು ಹುಡಿ ಮಾಡಿ
ನಾಮವನಿಡಬಲ್ಲವರಾರು ಹೇಳಿರೆ
ನೀ ಮದುವಲಿಗನಾಗೆ ನಾ ಮದುವಳಗಿತ್ತಿಯಾಗೆ
ಶ್ರೀ ಗಿರಿ ಚೆನ್ನಮಲ್ಲಿಕಾರ್ಜುನ

ಇಂತಹ ದಿಟ್ಟ ನಿರ್ಮಲ ಮನಸ್ಸಿನ ಅಕ್ಕನ ಬಗ್ಗೆ ಅರ್ಥವಿಲ್ಲದ ವಿಷಯಗಳನ್ನು ದಾಖಲಿಸಿ ಅವಳನ್ನು ಬೆತ್ತಲೆಗೊಳಿಸಿದ್ದು ಇತಿಹಾಸಕ್ಕೆ ಮಾಡಿದ ಅಪಚಾರ
ಅಕ್ಕ ದೇವನನ್ನು ಶೋಧಿಸುತ್ತ ಅರಸುತ್ತ ಕಲ್ಯಾಣಕ್ಕೆ ಬರುವಳು .ಅಲ್ಲಿಯೂ ಕಿನ್ನರಿ ಬೊಮ್ಮಣ್ಣ ಪರೀಕ್ಷೆ ಮಾಡುತ್ತಾನೆ .ಆದರೆ ಅದು ಕೇವಲ ಮೌಖಿಕ ಮತ್ತು ತಾತ್ವಿಕ ವಾಗ್ವಾದ ಚರ್ಚೆ . ಇದನ್ನು ಕೆಲ ಪಟ್ಟಭದ್ರ ಹಿತಾಸಕ್ತಿಗಳು ಏನೇನೋ ಕಲ್ಪಿಸಿ ಅಕ್ಕನ ಮಾನಹರಣಕ್ಕೆ ಮುಂದಾಗಿದ್ದಾರೆ. ಅಕ್ಕ ಮಹಾದೇವಿ ಕೇಶಾಂಬರ ತೊಟ್ಟು ಕಲ್ಯಾಣಕ್ಕೆ ಹೆಜ್ಜೆ ಹಾಕಿದಳು ಎಂಬುದಾಗಿ ಹರಿಹರ ಆದಿಯಾಗಿ ಅಕ್ಕನ ಬಗ್ಗೆ ಬರೆದಿರುವಾಗ. ಕೆಲ ವೈದಿಕ ಮನಸ್ಸು ಇಲ್ಲಿ ಅಕ್ಕಳನ್ನು ವಿವಸ್ತ್ರಗೊಳಿಸಿ ಚರಿತ್ರೆಗೆ ಮಸಿ ಬಳಿಯುವ ಯತ್ನವನ್ನು ಮಾಡಿದ್ದಾರೆ.

ಡಾ ಶಶಿಕಾಂತ ಪಟ್ಟಣ ರಾಮದುರ್ಗ -9552002338
———————————————————————–

LEAVE A REPLY

Please enter your comment!
Please enter your name here

Latest News

ಬೆಳಕಿನ ಹಬ್ಬ ದೀಪಾವಳಿ.

            'ಹಬ್ಬಗಳ ರಾಜ' ಎಂದು ಪ್ರಖ್ಯಾತಿ ಪಡೆದಿರುವ ಪ್ರಮುಖ ರಾಷ್ಟ್ರೀಯ ಹಬ್ಬ' ಬೆಳಕಿನ ಹಬ್ಬ  ದೀಪಾವಳಿ ಹಬ್ಬ'. ದೇಶದಾದ್ಯಂತ...

More Articles Like This

error: Content is protected !!
Join WhatsApp Group