ಶ್ರೀ ಶಂಕರೇಗೌಡ ತುಂಬಕೆರೆಯವರ ಕೖಷ್ಣಸಾಗರ ಮತ್ತು ಇತರ ಕವನಗಳು ಎಂಬುದು ಇವರ ನಾಲ್ಕನೇ ಕೃತಿ. ಇದರಲ್ಲಿ ಶ್ರೀ ಸ್ವಾಮಿ ರಾಮಕೃಷ್ಣ ಪರಮಹಂಸರನ್ನು ವಿಧವಿಧವಾಗಿ ನಿವೇದಿಸಿಕೊಳ್ಳುವ ಕವಿತೆಗಳೇ ಹೆಚ್ಚಾಗಿವೆ. ಪ್ರಕೃತಿ ಕವಿತೆ, ತಾಯಿ ದೇವತೆ ಜ್ಞಾನ ದೇವತೆ ಮತ್ತು ಪರಮಾತ್ಮನಲ್ಲಿ ಒಳ್ಳೆಯ ದಾರಿ ತೋರಿಸುವಂತಹ ಬೇಡುವ ಸಲಹುವ ಪ್ರಾರ್ಥಿಸುವ ಪದ್ಯಗಳು ಇವೆ. ಇವಲ್ಲದೆ ಪ್ರೇಮ ಗೀತೆಗಳು, ಸ್ವಾಮಿ ವಿವೇಕಾನಂದರ ಕುರಿತು ಬರೆದಿರುವ ಕವನಗಳು ಇವೆ.
ಮಂಡ್ಯ ಜಿಲ್ಲೆಯ ಶಂಕರೇಗೌಡ ತುಂಬಕೆರೆಯವರು ಫೋನಿನ ಮಾತಿನಲ್ಲಿ ತಮ್ಮ ಪರಿಚಯ ಹೇಳಿಕೊಳ್ಳುತ್ತಾ ಇವರ ಮೂರು ಕೃತಿಗಳು ಈಗಾಗಲೇ ಪ್ರಕಟವಾಗಿರುವುದು ತಿಳಿಯಿತು. ಅವುಗಳ ವಿಚಾರದ ಮಾಹಿತಿ ವ್ಯಾಟ್ಸಪ್ ಮಾಡಿದರು. ಚಿಂತನ ಸೌರಭ ಇದು ಲೇಖಕರ ಚಿಂತನೆಗಳ ಬರಹ. ಒಂದು ವಿಷಯವನ್ನು ಈ ಆಧುನಿಕ ಸಂದರ್ಭದಲ್ಲಿ ವಾಸ್ತವ ದೃಷ್ಟಿಕೋನದಿಂದ ಹೇಗೆ ಅವಲೋಕಿಸಬಹುದು ಎಂಬುದನ್ನು ಗಮನವಿರಿಸಿ ಆದಷ್ಟು ಚಿಕ್ಕದಾಗಿ ಸರಳವಾಗಿ ಏನು ಹೇಳಬೇಕು ಅದನ್ನಷ್ಟೇ ಹೇಳಿ ಅರ್ಥೈಸಿದ್ದಾರೆ.
ಇವರ ಇನ್ನೊಂದು ಕೃತಿ ಹನಿಗವನ ಸೌರಭ. ಇದು ನನಗೆ ಇಷ್ಟವಾದ ಪ್ರಕಾರ. ಇದರಲ್ಲಿ 500 ಚುಟುಕುಗಳಿವೆ. ಹತ್ತು ಹಲವು ವಿಷಯಗಳನ್ನು ನಾಲ್ಕು ಸಾಲುಗಳ ಚುಟುಕುಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಇವರ ಮತ್ತೊಂದು ಸಂಕಲನ ಆಧುನಿಕ ವಚನ ಸೌರಭ. ಇದು 400 ವಚನಗಳನ್ನು ಒಳಗೊಂಡಿದೆ. ವರ್ತಮಾನದ ಸಮಾಜದಲ್ಲಿ ಘಟಿಸುವ ಘಟನೆಗಳಿಗೆ 5 ಸಾಲಿನ ವಚನ ಓದುಗರನ್ನು ಎಚ್ಚರಿಸುತ್ತದೆ.
ಗೀತಾಂಜಲಿಗೊಂದು ಭಾವಥಾ೯ಂಜಲಿ ಇದು ಡಾ. ಕೆ
ಗೌರಮ್ಮ ಮತ್ತು ಶಂಕರೇಗೌಡ ತುಂಬಕೆರೆ ಇವರು ಆರ್. ಎಲ್.ಜಿ ಅವರು ಇಂಗ್ಲಿಷ್ ನಿಂದ ಅನುವಾದಿಸಿರುವ ವರಕವಿ ರವೀಂದ್ರರ ಗೀತಾಂಜಲಿ ಕೃತಿಯಿಂದ ಪ್ರಭಾವಿತರಾಗಿ ಅದರ ಎಲ್ಲಾ 103 ಕವನಗಳನ್ನು ಅಮೂಲಾಗ್ರವಾಗಿ ಓದಿ ನಂತರ ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಭಾವಾರ್ಥವನ್ನು ಬರೆದಿದ್ದಾರೆ. ಮಂಡ್ಯದ ಅಭಿನವ ಭಾರತಿ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ನಂತರ ಅಲ್ಲಿನ ಪದವಿ ಪೂರ್ವ ವಿಜ್ಞಾನ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿ 2018 ರಲ್ಲಿ ನಿವೃತ್ತರಾಗಿ ಪ್ರಸ್ತುತ ಮಂಡ್ಯದಲ್ಲಿ ನೆಲೆಸಿದ್ದಾರೆ. ಇವರಿಗೆ 2012ರಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ 2016ರಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ದೊರಕಿದೆ. ಕಥಾ ವಿಮರ್ಶೆ ನಗೆ ಹನಿಗಳು ಚಿತ್ರ ಕವನಗಳು ಪದರಂಗ ಪದಬಂಧ ರಚನೆ ಮುಂತಾದವು ಇವರ ಹವ್ಯಾಸ. ಇವರ ಕಷ್ಟಸಾಗರ ಮತ್ತು ಇತರ ಕವನಗಳು ಸಂಕಲದಲ್ಲಿ 100 ವೈವಿಧ್ಯಪೂರ್ಣ ಕವಿತೆಗಳಿವೆ. ಪ್ರದಾನವಾಗಿ ಭಕ್ತಿ ಗೀತೆಗಳು ಮಾಧವನ ಕುರಿತ ಪದ್ಯಗಳು ಸರಳ ಬಾಷೆಯಲ್ಲಿ ರಾಗ ತಾಳ ಅನುಸಾರ ರೂಪುಗೊಂಡು ಗಾಯಕರು ವೇದಿಕೆಗಳಲ್ಲಿ ರಾಗ ಹಾಕಿ
ಹಾಡಬಹುದಾಗಿದೆ.
ಇನನೇನಮ್ಮ ನಮ್ಮ ಮಾಧವನು ಮನವನ್ನು ತಣಿಸುವ ಮೋಹನನು
ಸದ್ದುಗದ್ದಲವಿಲ್ಲದೆ ಇಲ್ಲಿ ಬಂದಿಹನೇನಮ್ಮ
ನಮ್ಮೊಡನಾಡಲು ಇಲ್ಲಿ
ಇರುವನೇನಮ್ಮ
ಶಿಶು ಕಾವ್ಯವಾಗಿಯು ಮನಸೆಳೆವ ಕೆಲವು ಗೀತೆಗಳು ಈ ಕೃತಿಯಲ್ಲಿ ಸಾಕಷ್ಟಿವೆ.
ಮಗುವೆ ಬಿರಿವ ತುಟಿಯ
ನಾನು ನಿನ್ನ ನೋಡಿದಾಗ
ಎನ್ನ ಮನವು ಹರ್ಷದಿ ಮುದಗೊಳ್ಳುವುದು ಆಗ
ಪ್ರಕೃತಿ ಕಾವ್ಯಗಳು ಪರಿಸರ ಕಾಳಜಿ ಪರಿಸರ ಪ್ರೇಮ ಈ ಕೆಳಗಿನ ಕವಿತೆಯಲ್ಲಿ ಅಭಿವ್ಯಕ್ತವಾಗಿದೆ.
ಆಹಾ ಏನು ಚೆಲುವು ಎಂಥ ಸೊಬಗು
ಯಾರು ಇದನು ಈ ಬುವಿಯಲಿ ಮಾಡಿದರು
ಸಗ್ಗದ ಸಿರಿಯನ್ನೆಲ್ಲ ಮೊಗೆಮೊಗೆದು ತಂದು ಅಂದ ಚೆಂದ ಮಾಡಿದನು
ಜೀವನದಿ ಕಾವೇರಿ ಅದರ ದಡದಲ್ಲಿ ನೆಲೆಸಿರುವ ಜನರ ಬದುಕಿನ
ಜೀವಸೆಲೆ ಎಂಬುದು ಇವರ ಈ ಕೆಳಗಿನ ಕವಿತೆಯಲ್ಲಿ ವ್ಯಕ್ತವಾಗಿದೆ.
ಕಾವೇರಿ ನೀ ಹರಿಯುತಾ
ಈ ಬುವಿಯ ತಣಿಸಿದೆ
ಬಹುಮಂದಿಗೆ ನೆಲೆ ನೀಡಿ
ಇಲ್ಲಿ ಪರಮ ಪಾವನೆ ಎನಿಸಿದೆ
ಭಗವಾನ್ ಶ್ರೀ ರಾಮಕೃಷ್ಣರು ಅಮೃತಪುತ್ರ ಶ್ರೀ ಸ್ವಾಮಿ ವಿವೇಕಾನಂದ ಈ ಮಹನೀಯರ ವ್ಯಕ್ತಿ ಚಿತ್ರಣ, ಅವರ ಜೀವನ ಗಾಥೆಯು ಈ ಕೆಳಗಿನ ಸರಳ ಪದ್ಯಗಳ ರಚನೆಯಲ್ಲಿ ಇಷ್ಟವಾಗುತ್ತದೆ.
ಭಾರತ ಜನನಿಯ ಅಮೃತ ಪುತ್ರ
ನೀನೇ ಈ ದೇಶದ ಉಜ್ವಲ ನೇತ್ರ
( ಸ್ವಾಮಿ ವಿವೇಕಾನಂದ)
ದಕ್ಷಿಣೇಶ್ವರ ತಟಾಕದಲ್ಲಿ ಸಿದ್ಧಿ ಪಡೆದು
ಧೀರ ಶಿಷ್ಯ ವಿವೇಕರ ಪರಿಚಯಿಸಿದೆ
(ರಾಮಕೃಷ್ಣ ರು)
ಇಲ್ಲಿನ ಕವಿತೆಗಳು ಪದ್ಯಗಳು
ಶ್ರೀಸಾಮಾನ್ಯರಿಗೂ ಅರ್ಥವಾಗುವುದರಿಂದ ಗೂಢಾರ್ಥ ಭಾವಾರ್ಥ ಯಾವುದನ್ನೂ ಯಾರಿಗೂ ಬಿಡಿಸಿ ಹೇಳುವುದು ಅವಶ್ಯವಿಲ್ಲ…
ಇದನ್ನು ಸ್ವತಃ ಕವಿಗಳೇ ದೂರವಾಣಿಯಲ್ಲಿ ತಿಳಿಸಿ ಪುಸ್ತಕವನ್ನು ಕಳಿಸಿದರು..ನನ್ನ ಕಾವ್ಯ ಪದ್ಯ ಸರಳ ಭಾಷೆಯಲ್ಲಿದ್ದು ಜನಸಾಮಾನ್ಯರಿಗೆ ತಲುಪಬೇಕೆಂಬುದೇ ತನ್ನ ಆಶಯವೆಂದರು.
ನಿನ್ನೊಳಗೆ ಹರಿಯುವ
ರಸದಾರಿಗೆ ರೂಪು ಕೊಡು
ಅದನೆಂದಿಗೂ ರಾಡಿ ಮಾಡದೆ ನಿರ್ಮಲವಾಗಿರಿಸಲು ಮನವ ಮಾಡು
ಕೃತಿಯ ಪ್ರಕಾಶಕರಾದ ಹನ್ಯಾಳು ಗೋವಿಂದಗೌಡರ ಮೂಲಕ ಪರಿಚಯವಾದ ಲೇಖಕರು ಮುನ್ನುಡಿ ಬಯಸಿ ಈ ಮೊದಲು ಹಸ್ತಪ್ರತಿ ಕಳಿಸಿದ್ದರು. ಈಗ ಕೃತಿ ಹೊರಬಂದಿದೆ. ಕೃತಿಯ ನೂರನೇ ಕವನ ವಂದನೆ. ಅದು ಹೀಗಿದೆ.
ದೇವಾಧಿದೇವ ನಿನ್ನಂತರಂಗದ
ಒಳಿತೆಲ್ಲವೂ ನಿನ್ನದೇ ಕೃಪೆ
ಈ ಕೃಪೆಗಾಗಿ ನಿನಗೆನ್ನ ವಂದನೆ
ಗೊರೂರು ಅನಂತರಾಜು, ಹಾಸನ.
9449462879
29ನೇ ವಾರ್ಡ್, 3ನೇ ಕ್ರಾಸ್,
ಶ್ರೀ ಶನಿಶ್ವರ ದೇವಸ್ಥಾನ ರಸ್ತೆ,
ಹಾಸನ.