ಯಾದಗಿರಿ – ಮಹಿಳೆಯೊಬ್ಬರನ್ನು ಬೆತ್ತಲೆ ಮಾಡಿ ಕಬ್ಬಿನ ಜಲ್ಲೆಯಿಂದ ಥಳಿಸಿ, ಅಂಗಾಂಗ ಮುಟ್ಟಿ ವಿಕೃತ ವರ್ತನೆ ತೋರುತ್ತ ನಾಲ್ವರು ಯುವಕರು ಹಿಂಸೆ ಮಾಡಿದ ಅಮಾನವೀಯ ಘಟನೆ ಯಾದಗಿರಿಯಲ್ಲಿ ನಡೆದಿದೆ.
ಯಾದಗಿರಿ-ಶಹಾಪುರ ರಾಜ್ಯ ಹೆದ್ದಾರಿ ಮದ್ಯೆ ರಾತ್ರಿ ಸಮಯದಲ್ಲಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದ್ದು ಐದಾರು ಮಂದಿ ಈ ಘಟನೆಯಲ್ಲಿರುವ ಶಂಕೆಯಿದೆ.
ಮಹಿಳೆಯನ್ನ ನಗ್ನ ಮಾಡಿ ಅಂಗಾಂಗಗಳನ್ನ ಮುಟ್ಟಿ ಚಿತ್ರಹಿಂಸೆ ಕೊಟ್ಟು ವಿಡಿಯೋ ರಿಕಾರ್ಡ್ ಮಾಡಲಾಗಿದೆ.
ಹನಿಟ್ರಾಪ್ ಪ್ರಕರಣದಲ್ಲಿ ಮಹಿಳೆ ಸಿಲುಕಿರುವ ಶಂಕೆಯಿದೆ. ಹೊಡೆಯುವಾಗ ಯುವಕನೋರ್ವ ನನ್ನಿಂದ 10-15 ಸಾವಿರ ಹಣ ಪಡೆದಿದ್ದಾಳೆ ಅಂತ ಸಿಟ್ಟಿನಿಂದ ಹೊಡೆಯುತ್ತಾನೆ ಲ. ಮಹಿಳೆ ಕೈಮುಗಿದು ಕಣ್ಣೀರು ಹಾಕಿದ್ರು ಬಿಡದೆ ನಗ್ನಗೊಳಿಸಿದ ಪಾಪಿಗಳು ಆಕೆಯನ್ನ ಹೊಡೆಯುವ ನೆಪದಲ್ಲಿ ಅಂಗಾಂಗಗಳನ್ನ ಮುಟ್ಟಿ ಚಿತ್ರಹಿಂಸೆ ನೀಡುವ ವಿಡಿಯೋ ಬಿಡುಗಡೆಯಾಗಿದೆ.
ವಾಹನ ಒಂದರ ಹೆಡ್ ಲೈಟ್ ಹಾಗೂ ಮೊಬೈಲ್ ಟಾರ್ಚ್ ಹಾಕಿ ಹಲ್ಲೆ ಕೂಡ ನಡೆಸಿ, ಕೂಗಿದ್ರೆ ಪೆಟ್ಟಿಗೆಯಲ್ಲಿ ಹಾಕಿ ಸುಡುವುದಾಗಿ ಬೆದರಿಕೆ ಹಾಕಿದ್ದಾರೆ.
ಘಟನೆಯ ಬಗ್ಗೆ ಜಿಲ್ಲೆಯ ಯಾವುದೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಲ್ಲ.