ಡಾ.ನೀಗೂ ರಮೇಶ ರವರ “ಗಾಂಧೀಮರ”-ಕಾವ್ಯಾವಲೋಕನ

Must Read

ಮೈಸೂರಿನ ಶ್ರೀ ಬಸವೇಶ್ವರ ಸಾಮಾಜಿಕ ಪರಿಷ್ಕರಣೆ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಹಾಗೂ ಲಗೋರಿ ಸಾಂಸ್ಕೃತಿಕ ಬಳಗ ಇವರ ಸಂಯುಕ್ತಾಶ್ರಯದಲ್ಲಿ ಡಾ.ನೀಗೂ ರಮೇಶ ರವರ “ಗಾಂಧೀಮರ” : ಕಾವ್ಯಾವಲೋಕನ ಕಾರ್ಯಕ್ರಮವನ್ನು ಮಾನಸ ಗಂಗೋತ್ರಿಯ ಬಸವಪೀಠ ಸಭಾಂಗಣದಲ್ಲಿ ದಿನಾಂಕ:೧೪-೦೬-೨೦೨೫ ರ ಶನಿವಾರ ಬೆಳಿಗ್ಗೆ ೧೦:೩೦ ಗಂಟೆಗೆ ಏರ್ಪಡಿಸಲಾಗಿದೆ.

ಉದ್ಘಾಟನಾ ಸಮಾರಂಭದಲ್ಲಿ ಬಸವಪೀಠದ ಸಂದರ್ಶಕ ಪ್ರಾಧ್ಯಾಪಕರಾದ ಪ್ರೊ.ಅರವಿಂದ ಮಾಲಗತ್ತಿ ರವರು ಭಾಗವಹಿಸಲಿದ್ದಾರೆ.

ಅಧ್ಯಕ್ಷತೆಯನ್ನು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾದ ಪ್ರೊ.ಎನ್.ಕೆ.ಲೋಲಾಕ್ಷಿ ವಹಿಸಲಿದ್ದಾರೆ. ವೇದಿಕೆ ಕಾರ್ಯಕ್ರಮದ ನಂತರ “ಗಾಂಧೀಮರ ಕಾವ್ಯಾವಲೋಕನ” ವಿಚಾರಗೋಷ್ಠಿಯನ್ನು ಏರ್ಪಡಿಸಲಾಗಿದೆ. ಭಾರತೀಯ ಭಾಷಾ ಸಂಸ್ಥಾನದ ಯೋಜನಾ ನಿರ್ದೇಶಕರಾದ ಡಾ.ನೀಲಗಿರಿ ತಳವಾರ ಅಧ್ಯಕ್ಷತೆ ವಹಿಸಲಿದ್ದಾರೆ.

ಡಾ.ವಿನೋದಾ-ಗಾಂಧೀಮರ ಪರಿಸರ ಪ್ರಜ್ಞೆ, ಡಾ.ಶಿವಕುಮಾರ ಕಾರೇಪುರ -ಗಾಂಧೀ ಚಿಂತನೆಗಳು, ಡಾ.ಮಾಲಿನಿ ಅಭ್ಯಂಕರ್-ಗ್ರಾಮೀಣ ಪ್ರಜ್ಞೆ, ಮಾರುತಿ ಪ್ರಸನ್ನ -ಮಾನವೀಯ ಮೌಲ್ಯಗಳು, ಪರಮೇಶ್.ಕೆ ಉತ್ತನಹಳ್ಳಿ-ಸಾಮಾಜಿಕ ಪ್ರಜ್ಞೆ, ಕೀರ್ತಿ ಎಸ್ ಬೈಂದೂರ್-ಮಹಿಳಾ ಸಂವೇದನೆ, ಕುಮಾರಿ ಅನಿತಾ ಹೆಚ್.ಬಿ-ಗಾಂಧೀಮರದಲ್ಲಿನ ವ್ಯಕ್ತಿ ಚಿತ್ರಗಳ ಕುರಿತು ವಿಚಾರವನ್ನು ಮಂಡಿಸಲಿದ್ದಾರೆ.

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group