ಮುಧೋಳ – ಲೋಕದ ಕಲ್ಯಾಣಕ್ಕಾಗಿ ಅವತರಿಸಿದ ಮಹಾಪುರುಷ ಚಕ್ರವರ್ತಿ, ತ್ರಿವಿಧ ದಾಸೋಹಿ, ಬಂಡಿಗಣಿಪುರವಾಸಿ ಅನ್ನದಾನೇಶ್ವರರ ಲೀಲೆಗಳನ್ನು ಯಾರಿಂದಲೂ ವಣಿ೯ಸಲಾಗದು ಎಂದು ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಪ.ಪೂ.ಶರಣಬಸವ ಶಾಸ್ತ್ರಿಗಳು ಅಭಿಪ್ರಾಯ ಪಟ್ಟರು.
ಅವರು ಮುಧೋಳ ತಾಲೂಕಿನ ಸುಕ್ಷೇತ್ರ ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದಲ್ಲಿ ಕೃಷ್ಣಾವತಾರಿ ಅನ್ನದಾನೇಶ್ವರರ 75 ನೇ ಹುಟ್ಟು ಹಬ್ಬದ ಸಂಭ್ರಮ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ಭಕ್ತರ ಸಂಚಿತ ಕರ್ಮವನ್ನು ಕಳೆದು ವಾಂಚಿತವನ್ನು ಪೂಣ೯ಗೊಳಿಸುವ ಸಮಥ೯ ಸದ್ಗುರು ದಾನೇಶ್ವರರು ಭಕ್ತೋದ್ಧಾರಕ್ಕಾಗಿಯೇ ಅವತಾರವೆತ್ತಿದ ಭಗವಂತ ಎಂದರು.
ಇದೆ ಸಂದರ್ಭದಲ್ಲಿ ಸಮಾಜ ಸೇವಾಧುರೀಣ ಶಂಕರಗೌಡ ಪಾಟೀಲ ಅವರನ್ನು ಗೌರವಿಸಲಾಯಿತು. ಸೇರಿದ ಭಕ್ತಸ್ತೋಮಕ್ಕೆ ಸಿಹಿ ಹಂಚಲಾಯಿತು.ಕಂದಾಯ ಅಧಿಕಾರಿ ಶ್ರೀಶೈಲ ಪಾಟೀಲ ಉಪಸ್ಥಿತರಿದ್ದರು.
ಮಹಾಲಿಂಗಯ್ಯ ಸ್ವಾಮೀಜಿ ಹಿರೇಮಠ ಅವರ ಸನ್ನಿಧಾನದಲ್ಲಿ ಸಿದ್ದಯ್ಯ ಸ್ವಾಮಿಗಳು ಹಿರೇಮಠ ಅವರ ನೇತೃತ್ವದಲ್ಲಿ ಮಹಾಳಿಂಗೇಶ್ವರ ದೇವರ ಪೂಜಾರಿಗಳಾದ ಕುಮಾರ ಗುರುಪ್ರಸಾದ ಸ್ವಾಮೀಜಿ ಅವರ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಿತು.ಲೋಕನಾಯಕಿ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಎಲ್ ಶ್ಯಾಮಲಾ ಅವರು ವಂದಿಸಿದರು

