ಆಸ್ಮಾತಾಜ ಪೂರ್ವ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ

Must Read

ಸವದತ್ತಿ: ಸವದತ್ತಿಯ ಆಸ್ಮಾತಾಜ ಶಿಕ್ಷಣ ಮತ್ತು ಮಹಿಳಾ ಅಭಿವೃದ್ಧಿ ಸಂಸ್ಥೆ ( ರಿ ) ಯ ಆಸ್ಮಾತಾಜ ಪೂರ್ವ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಸವದತ್ತಿಯ ಪುರಸಭೆಯ ಸದಸ್ಯರಾದ ಭುವನೇಶ್ವರಿ ಪ್ರವೀಣ ಪಟ್ಟಣಶೆಟ್ಟಿ ಮತ್ತು ದಾವಲಬಿ ಮಕ್ತು ಮಸಾಬ ಸನದಿಯವರನ್ನು ಸನ್ಮಾನಿಸಲಾಯಿತು.

ಸಂಸ್ಥೆಯ ಚೇರಮನ್ನರಾದ ಎಚ್.ಕೆ.ಯಡೊಳ್ಳಿಯವರು ಎಲ್ಲರನ್ನು ಸ್ವಾಗತಿಸಿ , ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿದರೆ , ಶಿಕ್ಷಣ ಸಂಸ್ಥೆಗಳು ಬಹುಬೇಗನೆ ಬೆಳೆಯುತ್ತವೆ. ಮಕ್ಕಳ ಬೆಳವಣಿಗೆಯಲ್ಲಿ ಶಿಕ್ಷಕರ ಮತ್ತು ಪಾಲಕರ ಪಾತ್ರ ಮಹತ್ವದಾಗಿದೆ. ಮಕ್ಕಳು ಆಟವಾಡುತ್ತಾ ಕಲಿಯುವ ವಾತಾವರಣ ನಮ್ಮ ಶಾಲೆಯಲ್ಲಿದೆ ಎಂದರು.

ದೀಪ ಬೆಳಗಿಸಿ ಮಾತನಾಡಿದ ಸ್ಥಳೀಯ ಖ್ಯಾತ ವಕೀಲರಾದ ಎಮ್.ಎಮ್.ಯಲಿಗಾರ, ಮಕ್ಕಳಿಗೆ ಪಾಲಕರ ಮತ್ತು ಶಿಕ್ಷಕರ ಭಯ ವಿದ್ದರೆ ಮಾತ್ರ ಕಲಿಯುತ್ತಾರೆ. ಎನ್ನುತ್ತಾ ತಮಗೆ ಕಲಿಸಿದ ಗುರುಗಳನ್ನು ನೆನೆದರು. ಇಂದು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದು ಪಾಲಕರ ಜವಾಬ್ದಾರಿಯಾಗಿದೆ . ಪಾಲಕರು ಶಾಲೆಯ ಬೆಳವಣಿಗೆಗೆ ಕೈಜೊಡಿಸಬೇಕು. ಹಿರಿಯರಾದಂತವರು ನಾವು ಮಕ್ಕಳೊಂದಿಗೆ ಸಮಯ ಕಳೆಯಬೇಕು. ಮಕ್ಕಳಿಗೆ ಒಳ್ಳೆಯ ಕಥೆಗಳನ್ನು ಹೇಳಿ ಸುಸಂಸ್ಕೃತರನ್ನಾಗಿ ಬೆಳೆಸಬೇಕು ಎಂದರು .

ಈ ಸಂದರ್ಭದಲ್ಲಿ ಷಹಜಾನ ಸಂಗೊಳ್ಳಿ , ಮಲ್ಲಿಕಾರ್ಜನ ಅಂಬಿಗೇರ, ಎಮ್.ಎಮ್.ಯಲಿಗಾರ ರವರನ್ನು ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಮಾರುತಿ ಧರೆನ್ನವರ , ನಿಲ್ಲೂಪರ ಪಟೇಲ, ಆತಾಜ ಮಾಂಜರಿ, ಉಪಸ್ಥಿತರಿದ್ದು, ಬಸವರಾಜ ಭಜಂತ್ರಿ ನಿರೂಪಿಸಿದರು. ಕಿರಣ ನಾಯ್ಕರ ವಂದಿಸಿದರು.

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group