ಹಳ್ಳೂರ- ಸಮೀಪದ ಸೈದಾಪೂರ ಸಮೀರವಾಡಿ ಸೋಮೈಯ್ಯ ಶುಗರ ವರ್ಕ್ ಎಂಪ್ಲಾಯೀಸ್ ಕೋ ಆಪ್ ಕ್ರೆಡಿಟ್ ಸೊಸೈಯಿಟಿ ಲಿಮಿಟೆಡ್ ಸಮೀರವಾಡಿಯ ಸನ್ 2024/25 ನೇ ಸಾಲಿನ ವಾರ್ಷಿಕ ಸರ್ವ ಸಾಧಾರಣ ಸಭೆಯನ್ನು ಇಂದು ಸಾಯಂಕಾಲ 6 ಗಂಟೆಗೆ ಸಂಘದ ಕಾರ್ಯಾಲಯದಲ್ಲಿ (ಗಾಂದಿ ಚಪುತ್ರ) ದಲ್ಲಿ ಕರೆಯಲಾಗಿದೆ.
ಸಂಘದ ಅಧ್ಯಕ್ಷ ಮನೋಹರ ಎನ್ ಬಡಿವಾಳ ಅಧ್ಯಕ್ಷತೆ ವಹಿಸುವರು. ಸರ್ವ ಸದಸ್ಯರು ಸಭೆಗೆ ಹಾಜರಾಗಿ ಚರ್ಚೆ ನಡೆಸಿ ಸಂಘದ ಅಭಿವೃದ್ಧಿಗಾಗಿ ಸಲಹೆ ಸೂಚನೆಗಳನ್ನು ನೀಡಬೇಕೆಂದು ಸಂಘದ ಗೌರವ ಮುಖ್ಯ ಕಾರ್ಯ ನಿರ್ವಾಹಕ ರವಿರಾಜ ಕಂಬಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

