ಬೀದರ – ರಾಶಿ ಯಂತ್ರಕ್ಕೆ ಸಿಲುಕಿ ರುಂಡ ಮುಂಡ ಬೇರ್ಪಟ್ಟು ದಾರುಣವಾಗಿ ಮಹಿಳೆಯೊಬ್ಬಳು ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೆ ಗಡಿ ಜಿಲ್ಲೆಯಲ್ಲಿ ಮತ್ತೊಂದು ದುರಂತ ನಡೆದಿದ್ದು ರಾಶಿ ಯಂತ್ರಕ್ಕೆ ಮತ್ತೊಬ್ಬ ಮಹಿಳೆ ಬಲಿಯಾಗಿದ್ದಾಳೆ
ಒಂದೇ ವಾರದಲ್ಲಿ ಇಬ್ಬರು ಮಹಿಳಾ ರೈತರ ಸಾವು ಸಂಭವಿಸಿದ್ದು ರೈತರ ಪರಿಸ್ಥಿತಿಯ ಬಗ್ಗೆ ಗಂಭೀರವಾಗಿ ಚಿಂತಿಸುವಂತೆ ಮಾಡಿದೆ.
ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಘೋಟಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. 46 ವರ್ಷದ ಈರಮ್ಮ ವೀರಯ್ಯ ಸ್ವಾಮಿ ಎಂಬ ಮಹಿಳೆ ಜೋಳದ ರಾಶಿ ನಡೆಯುವಾಗ ರಾಶಿ ಯಂತ್ರದ ಬಳಿ ನಿಂತಿದ್ದ ಮಹಿಳೆಯ ಸ್ಕಾಫ್೯ ಹಾಗೂ ಕೂದಲು ಸಿಲುಕುತ್ತಿದಂತೆ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ… ಜಮೀನು ಮಾಲೀಕ ಮಲ್ಲಿನಾಥ್ ನಿರ್ಲಕ್ಷ್ಯವೇ ಮಹಿಳೆಯ ಸಾವಿಗೆ ಕಾರಣ ಎಂದು ಆರೋಪಿಸಲಾಗಿದ್ದು ಸ್ಥಳಕ್ಕೆ ಬಸವಕಲ್ಯಾಣ ಗ್ರಾಮೀಣ ಪೊಲೀಸರು ಭೇಟಿ ನೀಡಿ, ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೂರು ದಿನಗಳ ಕೆಳಗೆ 27 ವರ್ಷದ ಸುವರ್ಣ ಎಂಬ ಮಹಿಳೆ ಕೂಡಾ ರಾಶಿ ಯಂತ್ರಕ್ಕೆ ಸಿಲುಕಿ ರುಂಡ – ಮುಂಡ ಬೇರ್ಪಟ್ಟು ದುರಂತ ಸಾವನ್ನಪ್ಪಿದ್ದಳು. ಅದು ಮಾಸುವ ಮುನ್ನವೆ ಇನ್ನೊಂದು ಘಟನೆ ನಡೆದಿದ್ದು ವಿಪರ್ಯಾಸ.
ವರದಿ: ನಂದಕುಮಾರ ಕರಂಜೆ, ಬೀದರ