- Advertisement -
ಬೆಳಗಾವಿ: ನಗರದ ಕೇಂದ್ರ ಗ್ರಂಥಾಲಯದಲ್ಲಿ ಜೂನ್ 12 ರಂದು ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನ ಆಚರಿಸಿ, ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕರಿಂದ ದುಡಿಮೆಯನ್ನು ಬಯಸುವುದಿಲ್ಲ ಎಂಬ ಪ್ರಮಾಣ ಮಾಡಲಾಯಿತು.
ಉಪನಿರ್ದೇಶಕರಾದ ರಾಮಯ್ಯ ಅವರು ಬಾಲಕಾರ್ಮಿಕ ವಿರೋಧಿ ದಿನದ ಉದ್ದೇಶ ಕುರಿತು ಮಾತನಾಡಿ, ಸುತ್ತಮುತ್ತ ಇಂತಹ ಯಾವುದಾದರೂ ಪದ್ಧತಿ ಕಂಡುಬಂದಲ್ಲಿ ಪೋಷಕರಿಗೆ ತಿಳಿವಳಿಕೆ ಹೇಳಿ, ಸಹಾಯ ಮಾಡಬೇಕು,ಮತ್ತು ಈ ಪದ್ಧತಿ ಹೋಗಲಾಡಿಸಲು ನಮ್ಮದೇ ಆದ ಜವಾಬ್ದಾರಿ ನಿಭಾಯಿಸಬೇಕು ಎಂದು ಹೇಳಿದರು.
ಪ್ರಕಾಶ ಇಚಲಕರಂಜಿ ಅವರು ಪ್ರಮಾಣ ವಚನ ಹೇಳಿದರು. ಈ ಸಂದರ್ಭದಲ್ಲಿ ಅಧೀಕ್ಷಕರಾದ ಎ ಎ ಕಾಂಬಳೆ, ಸುಮಿತ್, ಅಂಬೇಕರ್, ಆನಂದ ಎಂ,ಲತಾ ಎಂ, ಐಹೊಳೆ ,ಈರಣ್ಣ ಜೊಂಡ್, ಲಕ್ಮಿ, ಸಂಗೀತಾ ಮತ್ತು ನಗರ/ಜಿಲ್ಲಾ ಕೇಂದ್ರ ಗ್ರಂಥಾಲಯದ ಎಲ್ಲ ಸಿಬ್ಬಂದಿ,ಓದುಗರು ಹಾಜರಿದ್ದು, ಪ್ರಮಾಣ ವಚನ ಸ್ವೀಕರಿಸಿದರು.