ಸಿಂದಗಿ; ಧರ್ಮಸ್ಥಳದ ಪರಮಪೂಜ್ಯ ಡಾ. ಡಿ ವೀರೇಂದ್ರ ಹೆಗಡೆಯವರ ಮತ್ತು ಮಾತೋಶ್ರೀ ಹೇಮಾವತಿ ಹೆಗಡೆ ಅವರ ಕೃಪಾಶೀರ್ವಾದಗಳೊಂದಿಗೆ ಹಮ್ಮಿಕೊಂಡಿರುವ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ನೀವು ಪುಣ್ಯವಂತರು ಎಂಟು ದಿನದ ಈ ಶಿಬಿರದಲ್ಲಿ ಭಾಗವಹಿಸಿದ್ದೀರಿ, ಮಾಹಿತಿಯನ್ನು ಪಡೆದುಕೊಂಡ ಪ್ರಕಾರ ಬದಲಾವಣೆಯಾಗಿ ಉತ್ತಮ ಜೀವನ ನಡೆಸಿ ಎಂದು ಶಾಸಕ ಅಶೋಕ ಎಂ ಮನಗೂಳಿ ಅವರು ಶುಭ ಹಾರೈಸಿದರು
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಸಿಂದಗಿ ತಾಲೂಕಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ವಿಜಯಪುರ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನ ಮುಕ್ತಿ ಮತ್ತು ಸಂಶೋಧನಾ ಕೇಂದ್ರ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು ಇವರ ಸಹಯೋಗದಲ್ಲಿ ನಡೆದ ಸಿಂದಗಿಯ ಶ್ರೀ ಹೆಗ್ಗೇರಿ ದೇವಸ್ಥಾನದಲ್ಲಿ ೨೦೨೨ ನೆಯ ಮದ್ಯ ವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ನಾನು ಕ್ರೀಡೆ ಮತ್ತು ವ್ಯಸನ ಮುಕ್ತಗಳ ಅಭಿಯಾನ ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತೇನೆ ಹಾಗೂ ಶಾಲೆಯ ವಾತಾವರಣ ಗ್ರಂಥಾಲಯ ಸಾರ್ವಜನಿಕ ಪ್ರದೇಶಗಳಲ್ಲಿ ಅನಧಿಕೃತವಾಗಿ ಮಾರಾಟ ಮಾಡುವುದನ್ನು ನಾನು ಖಂಡಿಸುತ್ತೇನೆ ತಮ್ಮ ಜೀವನ ಉಜ್ವಲವಾಗಲಿ ತಾವು ಮತ್ತೆ ಸಮಾಜದ ಮುಖ್ಯ ವಾಹಿನಿಯಲ್ಲಿ ಸೇರಿಕೊಂಡು ತಲೆಯೆತ್ತಿ ತಮ್ಮ ಜೀವನವನ್ನು ಸಾಗಿಸಿ ಎಂದರು.
ದಿವ್ಯ ಸಾನ್ನಿಧ್ಯ ವಹಿಸಿದ ಬೋರಗಿ ಪುರದಾಳ ವಿಶ್ವರಾಧ್ಯ ಮಠದ ಶ್ರೀ ತಪೋರತ್ನ ಮಹಾಲಿಂಗೇಶ್ವರ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಮುಂದಿನ ನಿಮ್ಮ ಕುಟುಂಬ ಜೀವನ ಅತ್ಯುತ್ತಮವಾಗಿರಬೇಕು ಇನ್ನು ಮುಂದೆ ಯಾವುದೇ ದುಶ್ಚಟಕ್ಕೆ ಬಲಿಯಾಗದೆ ಹಾಗೆ ನಿಮ್ಮ ಜೀವನ ನಡೆಸಿ ಬೆಳೆಯುತ್ತಿರುವ ನಿಮ್ಮ ಮಕ್ಕಳ ಮೇಲೆ ನಿಮ್ಮ ಚಟುವಟಿಕೆಗಳ ಪರಿಣಾಮ ಬೀರದಂತೆ ಮಕ್ಕಳ ಭವಿಷ್ಯತ್ತಿಗಾದರೂ ತಾವು ಈ ದುಶ್ಚಟಗಳಿಂದ ಹೊರಬಂದು ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡಬೇಕು ಎಂದು ಕಿವಿಮಾತು ಹೇಳಿದರು.
ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷ ಶರಣಪ್ಪ ಸಲಾದಪೂರ ಮಾತನಾಡಿ, ತಮ್ಮ ಮಂಡಳಿಯ ವತಿಯಿಂದ ಜನ ಜಾಗೃತಿ ಮೂಡಿಸಿ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಮದ್ಯ ವ್ಯಸನದಿಂದ ದೂರವಾಗಿ ಇಂದಿನ ಕಲುಷಿತ ವಾತಾವರಣದಲ್ಲಿ ನಮ್ಮ ಉಜ್ವಲ ಭವಿಷ್ಯ ನಿರ್ಮಾಣವಾಗಬೇಕಾದರೆ ಒಳ್ಳೆಯ ಸ್ನೇಹಿತನ ಆಯ್ಕೆ ಮುಖ್ಯ ಒಳ್ಳೆಯವರ ಸಹವಾಸ ನಮ್ಮದಾಗಲಿ ಪರಮಪೂಜ್ಯ ಶ್ರೀ ವೀರೇಂದ್ರ ಹೆಗಡೆ ಅವರು ನಡೆಸಿಕೊಂಡು ಬಂದಿರುವ ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಜನರ ಬದಲಾವಣೆ ಆಗುತ್ತಿರುವುದು ನೋಡಿ ನನಗೆ ತುಂಬಾ ಸಂತೋಷವಾಗಿದ್ದು ಇಂದಿನಿಂದ ಆರಂಭವಾಗಿರುವ ನಿಮ್ಮ ನವ ಜೀವನ ಉತ್ತಮವಾಗಲಿ ಎಂದು ಶುಭ ಹಾರೈಸಿದರು
ಪ್ರಾದೇಶಿಕ ನಿರ್ದೇಶಕ ದಿನೇಶ ಪೂಜಾರಿ ಮಾತನಾಡಿ, ಧರ್ಮಸ್ಥಳ ಶ್ರೀ ಕ್ಷೇತ್ರದಿಂದ ನಡೆದಿರುವಂತಹ ಮದ್ಯ ವರ್ಜನ ಶಿಬಿರದ ಮಹತ್ವ ಹಾಗೂ ರಾಜ್ಯಾದ್ಯಂತ ನಡೆದಿರುವ ೨೦೨೨ನೇ ಶಿಬಿರದ ಅವಶ್ಯಕತೆ ತಿಳಿಸಿ ವ್ಯಸನ ಮುಕ್ತ ಸಮಾಜ ನಿರ್ಮಾಣ ದಿಂದ ಈ ಕಾರ್ಯಕ್ರಮವು ಬೆಳತಂಗಡಿ ತಾಲೂಕಿನಲ್ಲಿ ಆರಂಭಗೊಂಡು ಇಡೀ ರಾಜ್ಯ ವ್ಯಾಪಿಯಾಗಿ ಅನುಷ್ಠಾನಗೊಂಡು ಇಂತಹ ಶಿಬಿರಕ್ಕ ೧.೪೦.೦೦೦ ಜನ ಮದ್ಯ ವ್ಯಸನ ಮುಕ್ತ ಜೀವನ ನಡೆಸುತ್ತಿದ್ದಾರೆ ಎಂದು ತಿಳಿಸಿದರು
ಅಧ್ಯಕ್ಷತೆ ವಹಿಸಿದ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅಶೋಕ ಎಸ್ ಅಲ್ಲಾಪುರ ಮಾತನಾಡಿ, ಎಂಟು ದಿನಗಳವರೆಗೆ ನಡೆದಿರುವ ಈ ಶಿಬಿರವು ನನ್ನ ಜೀವನದಲ್ಲಿ ಹೊಸ ಅನುಭವಗಳನ್ನು ಸೃಷ್ಟಿಸಿತು ಶಿಬಿರದ ಪ್ರಾರಂಭ ಅವರ ವರ್ತನೆ ಅವರ ಸ್ಥಿತಿ ನೋಡಿದಾಗ ವ್ಯಸನಿಗಳ ಪರಿವರ್ತನೆ ಈ ಸಮಾಜದಲ್ಲಿ ಅತ್ಯಂತ ಅವಶ್ಯಕ ಶಿಬಿರಾರ್ಥಿಗಳು ಇಂದು ಹಸನ್ಮುಖಿ ನವಜೀವನಕ್ಕೆ ಕಾಲಿಟ್ಟಿರುವಂಥದ್ದು ನನ್ನ ಮನಸ್ಸಿಗೆ ಸಂತೋಷವನ್ನುಂಟು ಮಾಡಿದೆ ಎಂದರು.
ಸಮಿತಿಯ ಗೌರವ ಅಧ್ಯಕ್ಷ ಶ್ರೀಶೈಲಗೌಡ ಬಿರಾದಾರ. ತಾಲೂಕ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೈ ಸಿ ಮಯೂರವರು ಮಾತನಾಡಿದರು
ಮದರಸ ಸಂಸ್ಥೆಯ ಉಪನ್ಯಾಸಕ ದಾವುದ ನದ್ವಿ ದೇವಸ್ಥಾನ ಕಮಿಟಿ ಅಧ್ಯಕ್ಷ ಕರಿಯಪ್ಪ ಪೂಜಾರಿ ಹಾಗೂ ಜಿಲ್ಲಾ ಜನಜಾಗ್ರತಿ ವೇದಿಕೆ ನಿರ್ದೇಶಕ ಕೃಷ್ಣರಾವ್ ಪಾಟೀಲ ಆಕ್ಸ್ಫರ್ಡ್ ಶಾಲೆಯ ಅಧ್ಯಕ್ಷ ಪ್ರಕಾಶ ಚೌದ್ರಿ ಸಮಿತಿಯ ಸದಸ್ಯ ಸುರೇಶ್ ಪೂಜಾರಿ ಕೆ ಡಿ ಪಿ ಸದಸ್ಯ ನೂರ ಅಹಮದ ಅತ್ತಾರ ಜನಜಾಗೃತಿ ಯೋಜನಾಧಿಕಾರಿ ರಾಜೇಶ ಸಿಂದಗಿ ತಾಲೂಕ ಯೋಜನಾಧಿಕಾರಿ ವಿನಯ ಸಿಬಿ ಶಿಬಿರಾಧಿಕಾರಿ ದಿನೇಶ ಮರಾಠಿ ಹಾಗೂ ಸಮಿತಿಯ ಸರ್ವ ಸದಸ್ಯರು ಒಕ್ಕೂಟದ ಅಧ್ಯಕ್ಷರು ಸ್ವಸಹಾಯ ಸಂಘದ ಸದಸ್ಯರು ವಲಯ ಮೇಲ್ವಿಚಾರಕರು ಸೇವಾ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

