Homeಸುದ್ದಿಗಳುಬೆಳಗಾವಿ ನಗರ ಕೇಂದ್ರ ಗ್ರಂಥಾಲಯದಲ್ಲಿ "ಭಯೋತ್ಪಾದನಾ ವಿರೋಧಿ ದಿನ" ಆಚರಣೆ

ಬೆಳಗಾವಿ ನಗರ ಕೇಂದ್ರ ಗ್ರಂಥಾಲಯದಲ್ಲಿ “ಭಯೋತ್ಪಾದನಾ ವಿರೋಧಿ ದಿನ” ಆಚರಣೆ

ಬೆಳಗಾವಿ: ನಗರದ ಕೇಂದ್ರ ಗ್ರಂಥಾಲಯದಲ್ಲಿ “ಭಯೋತ್ಪಾದನಾ ವಿರೋಧಿ ದಿನ” ಆಚರಣೆ ಮಾಡಲಾಯಿತು.

ಪ್ರತಿ ವರ್ಷ ಮೇ 21 ರಂದು ಈ ದಿನವನ್ನು ಆಚರಿಸಲಾಗುತ್ತದೆ. ಉಪನಿರ್ದೇಶಕರಾದ ರಾಮಯ್ಯ ಅವರು ಈ ದಿನದ ಮಹತ್ವದ ಬಗ್ಗೆ ಮಾತನಾಡುತ್ತ, ನಾವೆಲ್ಲರೂ ಒಂದಾಗಿ ದೇಶ ವಿಭಜಕ ಮತ್ತು ವಿಚ್ಛಿದ್ರಕಾರಿ ಶಕ್ತಿಗಳ ವಿರುದ್ಧ ಹೋರಾಡೋಣ ಮತ್ತು ಭಯೋತ್ಪಾದನೆಯ ಬಗ್ಗೆ ಜಾಗೃತಿ ಮೂಡಿಸುವುದು, ಶಾಂತಿಯನ್ನು ಉತ್ತೇಜಿಸುವುದು ಮತ್ತು ಭಯೋತ್ಪಾದನೆಯ ಬಲಿಪಶುಗಳನ್ನು ಗೌರವಿಸುವುದು ಈ ದಿನದ ಉದ್ದೇಶ ಎಂದು ಹೇಳಿದರು.

ಈ ಸಂದರ್ಭದಲ್ಲಿ ನಗರ ಮತ್ತು ಜಿಲ್ಲಾ ಕೇಂದ್ರ ಗ್ರಂಥಾಲಯದ ಎಲ್ಲ ಸಿಬ್ಬಂದಿ, ಓದುಗರು, ವಿಧ್ಯಾರ್ಥಿಗಳು ಈ ಭಯೋತ್ಪಾದನಾ ವಿರೋಧಿ ದಿನದ ಪ್ರಮಾಣ ವಚನ ಸ್ವೀಕರಿಸಿದರು ಮತ್ತು ವಿಚ್ಛಿದ್ರಕಾರಿ ಶಕ್ತಿಗಳ ವಿರುದ್ಧ ಹೋರಾಡಲು ಪಣ ತೊಟ್ಟರು.

RELATED ARTICLES

Most Popular

error: Content is protected !!
Join WhatsApp Group