ಸಿಂದಗಿ :- ಸಿಂದಗಿ ನಗರದ ಸಂಗಮ ಹೋಟೆಲನಲ್ಲಿ ಜಾಂಭವ ಯುವ ಸೇನೆಯ ಸಿಂದಗಿ ತಾಲೂಕಿನ ನೂತನ ಅಧ್ಯಕ್ಷರನ್ನಾಗಿ ಬಸವರಾಜ ಯಲ್ಲಪ್ಪ ಕಟ್ಟಿಮನಿ ಅವರನ್ನು ಆಯ್ಕೆ ಮಾಡಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡ ವಿಜಯಪುರ ಜಿಲ್ಲಾ ಅಧ್ಯಕ್ಷರಾದ ಬಸಲಿಂಗಪ್ಪ ನಂದಿ ಮಾತನಾಡಿ ಸಂಘಟನೆ ಎಂಬುದು ಸ್ವಹಿತಕ್ಕಾಗಿ ಕೆಲಸ ಮಾಡದೆ ಸಮುದಾಯದ ಏಳಿಗೆಗಾಗಿ ಕೆಲಸ ಮಾಡಬೇಕು. ಸಮುದಾಯದಲ್ಲಿ ನೂರಾರು ಸಂಘಟನೆ ಇದ್ದರೂ ನಮ್ಮೆಲ್ಲರ ಗುರಿ ಒಂದೆ ಆಗಿದೆ. ಇಂದಿನ ಯುವ ಪೀಳಿಗೆ ಒಬ್ಬರು ಇನ್ನೊಬ್ಬರ ಮೇಲೆ ನಂಬಿಕೆ-ವಿಶ್ವಾಸವಿಟ್ಟು ಸಂಘಟನೆಯನ್ನು ಬಲಪಡಿಸಬೇಕು ಎಂದು ಸಲಹೆ ನೀಡಿ ರಾಜ್ಯಾಧ್ಯಕ್ಷರಾದ ಡಾ. ರಮೇಶ ಚಕ್ರವರ್ತಿಯವರ ಆದೇಶದ ಮೇರೆಗೆ ನೂತನ ಸಿಂದಗಿ ತಾಲೂಕಾಧ್ಯಕ್ಷರಾಗಿ ನೇಮಕರಾದ ಬಸವರಾಜ ಯಲ್ಲಪ್ಪ ಕಟ್ಟಿಮನಿ ರವರಿಗೆ ಆದೇಶ ಪ್ರತಿ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಆದಿಜಾಂಭವ ಜನಸಂಘದ ಉತ್ತರ ಕರ್ನಾಟಕ ವಲಯ ಅಧ್ಯಕ್ಷರಾದ ಸಾಯಬಣ್ಣ ದೇವರಮನಿ, ಕೆಂಚಪ್ಪ ಪುರದಾಳ, ಆಕಾಶ ಇಂಗಳಗಿ, ಕನಕಮೂರ್ತಿ ವಗ್ಗರ, ಕಲ್ಯಾಣಿ ಪುರದಾಳ, ಮಂಜುನಾಥ ಕಟ್ಟಿಮನಿ ಹಣಮಂತ ಹೊಸಮನಿ, ರಾಹುಲ ದೊಡಮನಿ, ಮಂಜುನಾಥ ಯಾದವ, ನಾಗೇಶ ವಗ್ಗರ, ಸೋಮು ಕಡಿಮನಿ,ಸಂಜು ಕಟ್ಟಿಮನಿ, ಪ್ರಜ್ವಲ ದೇವರಮನಿ,ರಾಘು ಮೇಲಿನಮನಿ, ಅಶೋಕ ನೆಲಗಿ, ಇನ್ನು ಅನೇಕ ಮುಖಂಡರು ಮತ್ತು ಜಿಲ್ಲಾ ಮತ್ತು ತಾಲ್ಲೂಕೂ ಪ್ರಮುಖರು ಉಪಸ್ಥಿತರಿದ್ದರು.