- Advertisement -
ಮೂಡಲಗಿ: ನವದೆಹಲಿಯಲ್ಲಿ ಕೇಂದ್ರ ರೈಲ್ವೆ ಬೋರ್ಡ ಚೇರಮನ್ ಶ್ರೀಮತಿ ಜಯಾವರ್ಮ ಸಿನ್ಹಾ ಅವರನ್ನು ಸೋಮವಾರ ಅ-30 ರಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಭೇಟಿಯಾಗಿ ಬೆಳಗಾವಿ- ಪಂಡರಪೂರ, ಬೆಳಗಾವಿ-ಮುಂಬೈ, ಬೆಳಗಾವಿಯಿಂದ ಜಾರ್ಖಂಡನ ಶಿಖರಾಜಿ ನಿಲ್ದಾಣದವರೆಗೆ ಹೊಸ ರೈಲು ಸಂಚಾರ ಪ್ರಾರಂಭಿಸುವುದು ಹಾಗೂ ಹಂಪಿ ಏಕ್ಸಪ್ರೆಸ್ ರೈಲನ್ನು ವ್ಹಾಯಾ ಧರ್ಮಾವರಂನಿಂದ ಪ್ರಶಾಂತಿ ನಿಲಯಂ (ಪುಟಪುರ್ತಿ) ನಿಲ್ದಾಣದವರೆಗೆ ವಿಸ್ತರಿಸಲು ವಿನಂತಿಸಿದರು.
ರೈಲ್ವೆ ಬೋರ್ಡ ಚೇರಮನ್ ಜಯಾವರ್ಮ ಸಿನ್ಹಾ ಅವರು ಸಂಸದರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಪ್ರಸ್ತಾವನೆಗಳನ್ನು ಪರಿಶೀಲಿಸಿ, ಅಗತ್ಯ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಸಂಸದರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.