ತಾಳೆ ಬೆಳೆಗಾರರಿಂದ ಸಚಿವರಿಗೆ ಮನವಿ

Must Read

ಸಿಂದಗಿ: ಕಲಬುರ್ಗಿ ಮಾರ್ಗವಾಗಿ ಸಿಂದಗಿ ಕಾರ್ಯಕ್ರಮದ ನಿಮಿತ್ಯ ತೆರಳಿದ ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆ ಸಚಿವ ಆರ್ ಶಂಕರ್ ಅವರಿಗೆ ಮಾರ್ಗ ಮಧ್ಯದಲ್ಲಿ ಗಬಸಾವಳಗಿ ಗ್ರಾಮದಲ್ಲಿ ತಾಳೆ ಬೆಳೆ ಬೆಳೆದ ರೈತರು ಹಾಗೂ ಸಿಂದಗಿ ತಾಲೂಕ ತಾಳೆ ಬೆಳೆಗಾರರ ಸಂಘದ ಅಧ್ಯಕ್ಷ ಎ.ಬಿ.ಹಿರೇಮಠ ಅವರು ಮತ್ತು ರೈತ ಸಂಘದ ಯುವ ಘಟಕ ರಾಜ್ಯ ಉಪಾಧ್ಯಕ್ಷ ಶಿವಕುಮಾರ ಬಿರಾದಾರ ಇವರು ಸೇರಿ ತಾಳೆ ಬೆಳೆ ಬೆಳೆದ ಬೆಳೆಗಾರರಿಗೆ ಅನ್ಯಾಯವಾಗುತ್ತಿದೆ ಹಾಗೂ ಹಲವಾರು ಸೌಲಭ್ಯಗಳು ತಾಳೆ ಬೆಳೆಗಾರರಿಗೆ ರೈತರಿಗೆ ಇದ್ದದ್ದನ್ನು ಸರ್ಕಾರ ಹಿಂಪಡೆದಿದೆ. ಹೀಗಾಗಿ ರೈತರಿಗೆ ಬಹಳ ತೊಂದರೆಯಾಗಿದೆ ಕೂಡಲೇ ಸಚಿವರು ತಾಳೆ ಬೆಳೆಗಾರರ ಸಮಸ್ಯೆ ಬಗೆ ಹರಿಸಬೇಕೆಂದು ಮನವಿ ಸಲ್ಲಿಸಿದರು.

ಲಿಂಬೆ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪೂರ ಹಾಗೂ ರೈತರಾದ ಶಂಕರಗೌಡ ಅ ಬಿರಾದಾರ ಬಾಬು ರೆಡ್ಡಿ ಬಿರಾದಾರ ಶಾಂತಗೌಡ ಬಿರಾದಾರ ಬಿಜೆಪಿ ಮುಖಂಡರಾದ ಬಂಗಾರೇಪ್ಪಗೌಡ ಬಿರಾದಾರ, ಭೀಮರೆಡ್ಡಿ ಬಿರಾದಾರ, ಬಿಜೆಪಿ ಮುಖಂಡ ಶಿವಶರಣ ಹೆಳವರ ಉಪಸ್ಥಿತರಿದ್ದರು.

Latest News

ಲೇಖನ : ಜೀವನವನ್ನು ಉನ್ನತೀಕರಿಸಿಕೊಳ್ಳಬೇಕೇ ಹೊರತು ಜೀವನಶೈಲಿಯನ್ನಲ್ಲ

ಬದುಕೆಂಬುದು ಮೇಲ್ನೋಟಕ್ಕೆ ಎಲ್ಲರಿಗೂ ಒಂದೇ ರೀತಿ ಕಾಣುತ್ತದೆ. ಆದರೆ ಕೆಲವರ ಬದುಕು ಸಾರ್ಥಕತೆಯನ್ನು ಪಡೆದುಕೊಳ್ಳದೇ ಕೇವಲ ಬಂದ ಪುಟ್ಟ ಹೋದ ಪುಟ್ಟ ಎನ್ನುವಂತಾಗುತ್ತದೆ. ಹಗಲು ರಾತ್ರಿ...

More Articles Like This

error: Content is protected !!
Join WhatsApp Group