ಮೂಡಲಗಿ: ಸುಮಾರು 43 ವರ್ಷಗಳ ಬೇಡಿಕೆಯನ್ನು ಈಡೇರಿಸಿಕೊಳ್ಳಲು ಸೆ. 22ರಂದು ಬೆಂಗಳೂರಿನ ಸ್ವತಂತ್ರ ಉದ್ಯಾನವನದಲ್ಲಿ ಅನಿರ್ದಿಷ್ಟ ಅವಧಿಯ ಮುಷ್ಕರವನ್ನು ರಾಜ್ಯ ಕಂದಾಯ ಇಲಾಖೆ ಗ್ರಾಮ ಸಹಾಯಕರ ಸಂಘವು ಕರೆ ಕೊಟ್ಟ ಹಿನ್ನೆಲೆಯಲ್ಲಿ ನಮ್ಮನ್ನು ಕೇಂದ್ರ ಸ್ಥಾನದಿಂದ ಬಿಡಲು ನಮಗೆ ಅನುಮತಿ ನೀಡಬೇಕೆಂದು ಇಲ್ಲಿನ ಕಂದಾಯ ಇಲಾಖೆ ಗ್ರಾಮ ಸಹಾಯಕರ ಸಂಘದ ಪದಾಧಿಕಾರಿಗಳು ತಹಸೀಲ್ದಾರ ಡಿ.ಜಿ.ಮಹಾತ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ರಾಜ್ಯದ 10450 ಗ್ರಾಮ ಸಹಾಯಕರು ಕಡ್ಡಾಯವಾಗಿ ಈ ಮುಷ್ಕರದಲ್ಲಿ ಭಾಗವಹಿಸಲು ರಾಜ್ಯ ಸಂಘದ ನಿರ್ದೇಶನ ಹಾಗೂ ಆದೇಶವಿರುವುದರಿಂದ ನಾವೂ ಕೂಡ ಈ ಮುಷ್ಕರದಲ್ಲಿ ಭಾಗವಹಿಸಬೇಕಾಗಿರುವುದರಿಂದ ನಾವು ಕಾರ್ಯ ನಿರ್ವಹಿಸುವ ಕೇಂದ್ರ ಸ್ಥಾನ ಬಿಡಲು ಅನುಮತಿ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಕಂದಾಯ ಇಲಾಖೆ ಗ್ರಾಮ ಸಹಾಯಕರ ಸಂಘದ ಅಧ್ಯಕ್ಷ ಭೀಮಶಿ ಸೊರಗಾಂವಿ, ಉಪಾಧ್ಯಕ್ಷ ಬೀರಪ್ಪ ಮೆನಸಪ್ಪಗೋಳ, ಅರ್ಬಣ್ಣ ತಳವಾರ, ಮಾರುತಿ ಮಂಡರ, ಹಸನ ಡೊಂಗ್ರೆ, ಅಡಿವೆಪ್ಪ ಹಡಿಗಿನಾಳ, ವಿಠ್ಠಲ ತಳವಾರ, ಲಾಲಸಾಬ ಸಯ್ಯದ, ಉಮೇಶ ಕಂದಿ, ಮಲ್ಲೇಶ ತಳವಾರ, ಗೋವಿಂದ ಗೋಪಾಳಿ ಇದ್ದರು.