ಅರಭಾವಿ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಅರ್ಜಿ ಆಹ್ವಾನ

Must Read

ಮೂಡಲಗಿ – ಶಿಶು  ಅಭಿವೃದ್ಧಿ ಯೋಜನೆ ಅರಭಾವಿ ಪ್ರಾಪ್ತಿಯಲ್ಲಿ ಖಾಲಿ ಇರುವ 15 ಅಂಗನವಾಡಿ ಕಾರ್ಯಕರ್ತೆಯರ ಹಾಗೂ 50 ಸಹಾಯಕಿಯರ ಹುದ್ದೆಗಳಿಗೆ 19-35 ವರ್ಷದೊಳಗಿನ ಅರ್ಹ ಮಹಿಳಾ ಮತ್ತು ಮಹಿಳಾ ಲಿಂಗತ್ವ ಅಲ್ಪಸಂಖ್ಯಾತ ಅಭ್ಯರ್ಥಿಗಳಿಂದ ಆನಲೈನ್ (Online) ಮುಖಾಂತರ ಅರ್ಜಿ ಕರೆಯಲಾಗಿದೆ.

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ:16-04-2025 ಆಗಿದ್ದು, ಆಸಕ್ತಿಯುಳ್ಳ ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಅಗತ್ಯ ದಾಖಲೆಗಳೊಂದಿಗೆ ಆನ್‌ಲೈನಲ್ಲಿ ಸಲ್ಲಿಸಬಹುದಾಗಿದೆ. ದಿನಾಂಕ:16/05/2025 ರಂದು ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ.

ದಿನಾಂಕ:05/07/2024ರಂದು ಹೊರಡಿಸಿದ ನೇಮಕಾತಿ ಅಧಿಸೂಚನೆಯನ್ನು ತಾಂತ್ರಿಕ ಕಾರಣಗಳಿಂದ ರದ್ದು ಪಡಿಸಲಾಗಿರುತ್ತದೆ. ದಿನಾಂಕ:05/07/2024ರ ಪ್ರಕಟಣೆಯಂತೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಮೊತ್ತೊಮ್ಮೆ ಆನ್‌ಲೈನ ಮೂಲಕ ಅರ್ಜಿ ಸಲ್ಲಿಸಬೇಕೆಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ವಿವರವಾದ ಅಧಿಸೂಚನೆ (ಪ್ರಕಟಣೆ)ಯನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ ಮೂಡಲಗಿ, ತಹಶೀಲ್ದಾರ ಕಛೇರಿ ಮೂಡಲಗಿ, ತಾಲೂಕ ಪಂಚಾಯತ ಕಛೇರಿ ಮೂಡಲಗಿ, ಹಾಗೂ ಆಯಾ ಪುರಸಭೆ, ಪಟ್ಟಣ ಪಂಚಾಯತ, ಗ್ರಾಮ ಪಂಚಾಯತ ಮತ್ತು ಸಂಬಂಧಿಸಿದ ಅಂಗನವಾಡಿ ಕೇಂದ್ರಗಳ ನೋಟಿಸ್ ಬೋರ್ಡಿನ ಮೇಲೆ ಪ್ರಕಟಿಸಲಾಗಿದೆ

ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಾಲಯ ಮೂಡಲಗಿ ದೂರವಾಣಿ ಸಂಖ್ಯೆ: 08334-200367 ಇವರನ್ನು ರಜಾ ದಿನಗಳನ್ನು ಹೊರತುಪಡಿಸಿ ಕಛೇರಿ ವೇಳೆಯಲ್ಲಿ ಸಂಪರ್ಕಿಸಲು ಶಿಶು ಅಭಿವೃದ್ಧಿ ಅಧಿಕಾರಿಗಳು ಕೋರಿದ್ದಾರೆ

Latest News

ಕವನ : ಕರುನಾಡ ಒಡೆಯರು

ಕರುನಾಡ ಒಡೆಯರುಕರುನಾಡ ಒಡೆಯರು ಕನ್ನೆಲದ ಧೀರರು ಕನ್ನಡವ ಕಟ್ಟಿದರು ಕಲ್ಯಾಣ ಶರಣರುದೇವ ಭಾಷೆಯ ತೊರೆದು ಜನ ಭಾಷೆ ಮೆರೆದು ಸತ್ಯದ ಕೂರಲಗದೀ ಕನ್ನಡ ನುಡಿ ಕಟ್ಟಿದರುಚಂಪೂ ಮೋಹವ ಬಿಟ್ಟು ದೇಸಿ ಪ್ರಜ್ಞೆಯ ಕಟ್ಟು ಕಾಯಕದ ಧರ್ಮವನು ಕಟ್ಟಿದರು ಶರಣರುಹಾಸಿ...

More Articles Like This

error: Content is protected !!
Join WhatsApp Group