ಘಟಪ್ರಭಾ ರೈಲ್ವೆ ನಿಲ್ದಾಣ ಸಲಹಾ ಸಮಿತಿಗೆ ನೇಮಕ

Must Read

ಮೂಡಲಗಿ: ಹುಬ್ಬಳ್ಳಿಯ ನೈರುತ್ಯ ರೈಲ್ವೆಯ ಘಟಪ್ರಭಾ ರೈಲ್ವೆ ಸ್ಟೇಶನ್‌ದ ಸಲಹಾ ಸಮಿತಿಗೆ ಅರಭಾವಿ ಮತಕ್ಷೇತ್ರದ ಐವರನ್ನು ಬೆಳಗಾವಿಯ ಸಂಸದ ಜಗದೀಶ ಶೆಟ್ಟರ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಶಿಫಾರಸ್ಸು ಮೇರೆಗೆ ಸದಸ್ಯರನ್ನಾಗಿ ನೇಮಕ ಮಾಡಿದ ಬಗ್ಗೆ ಹುಬ್ಬಳ್ಳಿಯ ನೈರುತ್ಯ ರೈಲ್ವೆಯ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಡಿ. ಪರಂದಮಾನಆದೇಶ ಹೊರಡಿಸಿದ್ದಾರೆ.

ಅರಭಾವಿ ಬಿಜೆಪಿ ಮಂಡಲದ ಕಾರ್ಯಕರ್ತರಾದ ಕೇದಾರಿ ಭಸ್ಮೆ(ಮೂಡಲಗಿ), ಮುತ್ತೆಪ್ಪ ಮನ್ನಾಪೂರ(ತಪಸಿ), ಭೀಮಶಿ ಮಾಳೇದವರ(ಸಂಗನಕೆರಿ), ಪ್ರಮೋದ ನುಗ್ಗಾನಟ್ಟಿ( ಕಲ್ಲೋಳಿ), ನಾಗೇಶ ಕುದರಿ(ತಳಕಟ್ನಾಳ) ಇವರು ಇದೇ ಜ.೧ರಿಂದ ಎರಡು ವರ್ಷಗಳ ಅವಧಿಗೆ ನೇಮಕವಾಗಿರುವರು.

ಬೆಳಗಾವಿಯ ಸಂಸದ ಜಗದೀಶ ಶೆಟ್ಟರ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರುಗಳ  ಶಿಫಾರಸು ಮೇರೆಗೆ ಈ ನೇಮಕ ಮಾಡಿರುವರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group