ಸಿಂದಗಿ: ವಿಜಯಪುರ ಜಿಲ್ಲಾ ಕಾಂಗ್ರೆಸ್ ಸಮಿತಿ ಒಪ್ಪಿಗೆಯಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಎಸ್.ಸಿ. ಸಮಿತಿಯ ಅಧ್ಯಕ್ಷರ ಅನುಮೋದನೆ ಅನ್ವಯ ತಿರುಪತಿ ಬಂಡಿವಡ್ಡರ ಇವರನ್ನು ಸಿಂದಗಿ ಕಾಂಗ್ರೆಸ್ ಪರಿಶಿಷ್ಟ ಜಾತಿ ನಗರ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ಸಮಿತಿಯ ಬ್ಲಾಕ್ ಅಧ್ಯಕ್ಷ ಪರಶುರಾಮ ಕಾಂಬಳೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶ್ರೀಶೈಲ ಮೇಟಿ ಸನ್ಮಾನ
ಸಿಂದಗಿ: ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹದ ಸಹಾಯಕ ಅಧಿಕ್ಷಕರಾದ ಶ್ರೀಶೈಲ ಎಸ್. ಮೇಟಿ ಇವರನ್ನು ತಾಲೂಕಿನ ಬೋರಗಿ ಗ್ರಾಮದ ನಬಿರೋಷನ್ ಪ್ರಕಾಶನ ವತಿಯಿಂದ ಸನ್ಮಾನಿಸಲಾಯಿತು.
ಪಿಎಸ್‍ಐ ಗಣೇಶ್, ಆರಕ್ಷಕರಾದ ಮೌಲಾಲಿ ಕೆ ಆಲಗೂರ, ರಮೇಶ ಶೆಟ್ಟಿ, ವಿಜಯ ಕುಮಾರ ಸೇರಿದಂತೆ ಅಧಿಕಾರಿ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
ಹಣಮಂತ ಯಂಟಮಾನ ನೇಮಕ
ಸಿಂದಗಿ: ವಿಜಯಪುರ ಜಿಲ್ಲಾ ಕಾಂಗ್ರೆಸ್ ಸಮಿತಿ ಒಪ್ಪಿಗೆಯಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಎಸ್.ಸಿ. ಸಮಿತಿಯ ಅಧ್ಯಕ್ಷರ ಅನುಮೋದನೆ ಅನ್ವಯ ಹಣಮಂತ ಯಂಟಮಾನ ಇವರನ್ನು ಸಿಂದಗಿ ಕಾಂಗ್ರೆಸ್ ಪರಿಶಿಷ್ಟ ಜಾತಿ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ ಎಂದು ಸಮಿತಿಯ ಬ್ಲಾಕ್ ಅಧ್ಯಕ್ಷ ಪರಶುರಾಮ ಕಾಂಬಳೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.