ನಾವು ದಲಿತ ರಾಗಿ ಹುಟ್ಟಿದು ತಪ್ಪಾ? ನಾವು ಹೀಗೆಯೇ ಸಾಯಬೇಕಾ? ; ಶಾಸಕ ರಹೀಮ್ ಖಾನ್ ಗೆ ದಲಿತರ ಪ್ರಶ್ನೆ

Must Read

ಬೀದರ: ಬೀದರ ನಗರದ ವಾರ್ಡ್ ನಂಬರ್‌ 29 ವ್ಯಾಪ್ತಿಯಲ್ಲಿ ಬರುವ ಚಿಯೋನ್ ಕಾಲೋನಿಯಲ್ಲಿ ಸುಮಾರು ಇಪತೈದು ವರ್ಷಗಳೇ ಕಳೆದರೂ ನಗರ ಸಭೆಯವರು ಯಾವುದೇ ಮೂಲಭೂತ ಸೌಕರ್ಯಗಳನ್ನು ಒದಗಿಸಿಲ್ಲ. ಕುಡಿಯುವ ನೀರು, ರಸ್ತೆ, ಚರಂಡಿ ವ್ಯವಸ್ಥೆ ಮಾಡಿಲ್ಲ. ನಾವು ದಲಿತರಾಗಿ ಹುಟ್ಟಿದ್ದೇ ತಪ್ಪಾ ಎಂದು ಇಲ್ಲಿನ ಜನರು ಆಕ್ರೋಶ ವ್ಯಕ್ತಪಡಿಸಿದರು.

ಗಡಿ ಜಿಲ್ಲೆ ಬೀದರ್ ನ ಬಸವಣ್ಣನವರು ನಡೆದಾಡಿದ ಭೂಮಿಯಲ್ಲಿ ಕೂಡ ತಾರತಮ್ಯ ಭಾವನೆ ತುಂಬಿದೆ ಎಂದು ಹೇಳಬಹುದಾದ ಪ್ರಸಂಗ ನಗರದ 29 ನೇ ವಾರ್ಡ್ ನಲ್ಲಿ ಕಂಡುಬಂದಿದೆ.

ಸ್ಥಳೀಯ ನಾಗರಿಕರು, ಮಹಿಳೆಯರು ಮೊದಲ ಬಾರಿಗೆ ಬಹಿರಂಗವಾಗಿ ಇಲ್ಲಿನ ಕಾಂಗ್ರೆಸ್ ಪಕ್ಷದ ಶಾಸಕ ರಹೀಂ ಖಾನ್ ವಿರುದ್ಧ ಆಕ್ರೋಶ ಹೊರಹಾಕಿ, ಶಾಸಕರು ದಲಿತರನ್ನು ಕಡೆಗಣಿಸುತಿದ್ದಾರೆ ಎಂದು ಆರೋಪಿಸಿದರು.

ಶಾಸಕರು ಕೇವಲ ಪ್ರಭಾವಿ ವ್ಯಕ್ತಿಗಳ ಮನೆಗಳು ಇರುವ ಕಡೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ. ದಲಿತ ಕುಟುಂಬಗಳು ಇರುವ ಕಡೆಗೆ ಯಾವುದೇ ಸೌಕರ್ಯಗಳನ್ನು ಒದಗಿಸುತ್ತಿಲ್ಲ. ಈ ವಾರ್ಡಿನಲ್ಲಿ ರಸ್ತೆಯ ಮೇಲೆಯೇ ನೀರು ಹರಿಯುತ್ತದೆ. ಕಾಲಿಟ್ಟರೆ ಬಟ್ಟೆಗೆ ನೀರು ಸಿಡಿಯುತ್ತದೆ. ಯಾರೂ ಈ ಕಡೆ ನೋಡುತ್ತಿಲ್ಲ. ಕೇವಲ ಓಟು ಕೇಳಲು ಮಾತ್ರ ಬರುತ್ತಾರೆ. ನಾವು ದಲಿತರಾಗಿ ಹುಟ್ಟಿದ್ದೇ ತಪ್ಪಾಯತಾ ? ನಮ್ಮ ಮಕ್ಕಳಾದರೂ ಚೆನ್ನಾಗಿ ಬದುಕಬಾರದಾ ? ಎಂದು ಮಹಿಳೆಯರು ಜನಪ್ರತಿನಿಧಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಶಾಸಕರಿಗೆ ಚುನಾವಣೆ ಯಲ್ಲಿ ಮಾತ್ರ ದಲಿತ ಓಟು ಬೇಕು. ಚುನಾವಣೆಯಲ್ಲಿ ಓಡಾಡಲು ಯುವಕರು ಬೇಕು. ಆದರೆ ಆ ಯುವಕರು ವಾಸಿಸುವ ಕುಟುಂಬ ಬೇಡವಾಗಿದೆ. ನಗರದ ಅಭಿವೃದ್ಧಿಗೆ ಸಾವಿರಾರು ಕೋಟಿ ರೂಪಾಯಿ ಅನುದಾನ ತಂದಿರುವದಾಗಿ ಜಂಭ ಕೊಚ್ಚಿ ಕೊಳ್ಳುತ್ತಾರೆ ಆದರೆ ನಗರದಲ್ಲಿ ಅಭಿವೃದ್ಧಿ ಯೋಜನೆ ಗಳನ್ನು ಮಾತ್ರ ಅರ್ಧ ಮರ್ಧ ಮಾಡಿದ್ದಾರೆ. ಪ್ರಭಾವಿ ವ್ಯಕ್ತಿಗಳ ಮನೆಗಳು ಇರುವ ಕಡೆಮಾತ್ರ ಮೂಲಭೂತ ಸೌಕರ್ಯ ಒದಗಿಸುವ ಶಾಸಕರಿಗೆ ನಮ್ಮಂತ ದಲಿತ ಬಡ ಕುಟುಂಬಗಳು ಇರುವ ಕಡೆ ಯಾವುದೇ ಸೌಕರ್ಯಗಳನ್ನು ಮಾಡುವ ಮನಸ್ಸಿಲ್ಲ.ನಗರದ ಯಾವುದೇ ಬಡಾವಣೆಗಳಿಗೆ ಹೋಗಿ ನೋಡಿ ಎಲ್ಲ ಕೆಲಸ ಅರ್ಧಂಬರ್ಧವಾಗಿವೆ. ಒಂದು ಬಡಾವಣೆಯಲ್ಲಿ ಕೂಡಾ ಸಂಪೂರ್ಣ ವಾಗಿ ಮೂಲ ಭೂತ ಸೌಕರ್ಯಗಳಾದ ರಸ್ತೆ ಚರಂಡಿ ನಿರ್ಮಾಣಕಾರ್ಯ ಪೂರ್ಣವಾಗಿಲ್ಲ ಎಂದು ಗಂಭೀರ ಆರೋಪ ಮಾಡಿದರು.

ಜನಸಾಮಾನ್ಯರ ಈ ಆಕ್ರೋಶದ ನಂತರವಾದರೂ ಶಾಸಕ ರಹಿಂ ಖಾನ್ ಎಚ್ಚೆತ್ತುಕೊಂಡು ವಾರ್ಡ್ 29 ರಲ್ಲಿನ ಕಾಮಗಾರಿಗಳನ್ನು ಆರಂಭಿಸುವರೋ ಅಥವಾ ಎಂದಿನಂತೆ ನಿರ್ಲಕ್ಷ್ಯ ಧೋರಣೆ ತೋರಿ ದಲಿತರು ಕೇವಲ ಓಟಿಗಾಗಿಯೇ ಎಂಬುದನ್ನು ಸಾಬೀತು ಮಾಡುವರೋ ಕಾದು ನೋಡಬೇಕು.


ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group