ಮೂಡಲಗಿ: ಜ್ಞಾನದ ಬೆಳಕು ದಿನಪತ್ರಿಕೆ, ಪುಸ್ತಕ ಅರಿವು ನೀಡುವ ಕೇಂದ್ರ ಇದು.ಗ್ರಾಮಸ್ಥರು ಪುಸ್ತಕ ಓದುವ ಮೂಲಕ ಜ್ಞಾನವಂತರಾಗಬೇಕು.ಪ್ರತಿಯೊಬ್ಬರು ಅರಿವು ಕೇಂದ್ರದ ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಗ್ರಾಮ ಪಂಚಾಯತಿಯ ಪಿಡಿಒ ಶ್ರೀಶೈಲ ತಡಸನವರ ಹೇಳಿದರು.
ತಾಲೂಕಿನ ರಂಗಾಪೂರ ಗ್ರಾಮದಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ್ ಇಲಾಖೆಯಿಂದ ಅರಿವು ಕೇಂದ್ರ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅತಿಥಿಗಳಾದ ಗ್ರಾಮ ಪಂಚಾಯತಿ ಅಧ್ಯಕ್ಷೆ ದುರ್ಗಮ್ಮ ತಂಬಗಿ,ಉಪಾಧ್ಯಕ್ಷ ಉದಯ ಸನದಿ,ಸದಸ್ಯರು ಬಸವರಾಜ ಮಾದರ, ಮುತ್ತಪ್ಪ ಮರನೂರ, ಮಲ್ಲಪ್ಪ ಮಾದರ, ಹೆಸ್ಕಾಂ ಶಾಖಾಧಿಕಾರಿ ಸುರೇಶ ಮುಧೋಳ, ಗ್ರಾಮದ ಮುಖಂಡರು ಮಲ್ಲಿಕಾರ್ಜುನ ಕಬ್ಬೂರ, ಹಣಮಂತ ಬೀರನಗಡ್ಡಿ, ಬಸರಾಜ ಕಬ್ಬೂರ,ಈಶ್ವರ ಬೈಲವಾಡ,ರವಿ ಪಾಟೀಲ,ಸುನೀಲ ರಾಠೋಡ,ಶಿವು ಬಳಿಗಾರ, ಸಂಜೀವ ಪಾಟೀಲ, ಮೆಹಬೂಬ್ ಶೇಖಬಡೆ, ಮಹಾಂತೇಶ , ಹಣಮಂತ ತೇರದಾಳ,ನಿಜಗುಣಿ ಜಕ್ಕನ್ನವರ, ಹಣಮಂತ ಮಾದರ, ಈರಣ್ಣ ಗೋಡಿಗೌಡರ ಇನ್ನೂ ಅನೇಕರು ಅರಿವು ಕೇಂದ್ರ ಉದ್ಘಾಟನೆಯಲ್ಲಿ ಭಾಗಿಯಾಗಿದ್ದರು.

