ಮೈಸೂರಿನ ಕೃಷ್ಣಮೂರ್ತಿಪುರಂನಲ್ಲಿರುವ ಶಾರದಾವಿಲಾಸ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ೭ನೇ ತರಗತಿ ವಿದ್ಯಾರ್ಥಿಯಾದ ಮೇಘಾಲಯ ಮೂಲದ ಅರ್‌ಕ್ಯಾಂಗಲ್ ಸುಟಾಂಗ್ ರವರು ಜಿಲ್ಲಾ ಹಾಗೂ ವಲಯ ಮಟ್ಟದಲ್ಲಿ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಗಳಿಸುವುದರ ಮೂಲಕ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ನವೆಂಬರ್ ೧೪, ೨೦೨೫ ರಂದು ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ೧೦೦ ಮೀ. ಓಟದ ಸ್ಪರ್ಧೆ ಹಾಗೂ ಉದ್ದಜಿಗಿತದ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ ಸ್ಥಾನವನ್ನು ಗಳಿಸಿರುತ್ತಾರೆ. ನವೆಂಬರ್ ೨೦, ೨೧ ರಂದು ಹಾಸನದಲ್ಲಿ ನಡೆಯಲಿರುವ ರಾಜ್ಯಮಟ್ಟದ ಸ್ಪರ್ಧೆಗಳಿಗೆ ಆಯ್ಕೆಯಾಗಿದ್ದಾರೆ. ಚಾಮರಾಜನಗರದಲ್ಲಿ ನಡೆದ ಮೈಸೂರು ವಿಭಾಗ ಮಟ್ಟದಲ್ಲಿ ನಡೆದ ವಿವಿಧ ಕ್ರೀಡೆಗಳಾದ ೧೦೦ಮೀ., ೨೦೦ಮೀ., ೪೦೦ಮೀ., ೬೦೦ಮೀ. ಓಟದ ಸ್ಪರ್ಧೆ ಹಾಗೂ ಗುಂಡು ಎಸೆತ, ಚಕ್ರ ಎಸೆತ, ಉದ್ದಜಿಗಿತ ಸ್ಪರ್ಧೆಗಳಲ್ಲೂ ಭಾಗವಹಿಸಿರುತ್ತಾರೆ.
ಮೂಲತಃ ಮೇಘಾಲಯದಿಂದ ಓದಲು ಬಂದಿರುವ ಅರ್‌ಕ್ಯಾಂಗಲ್ ಸುಟಾಂಗ್ ರವರ ಕ್ರೀಡಾ ಪ್ರತಿಭೆ ಹಾಗೂ ಸಾಧನೆಯನ್ನು ಮೆಚ್ಚಿ ಶಾರದಾವಿಲಾಸ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ಡಾ.ಬಿ.ಎನ್.ಸುಬ್ರಾಯ, ಗೌರವ ಕಾರ್ಯದರ್ಶಿಗಳಾದ ಆರ್.ದಿನೇಶ್ ಮತ್ತು ಆಡಳಿತ ಮಂಡಳಿ ಸದಸ್ಯರು, ಶಾಲೆಯ ಮುಖ್ಯೋಪಾಧ್ಯಯರಾದ ಶ್ರೀಮತಿ ರೇಖಾ.ಸಿ, ಕ್ರೀಡಾ ಶಿಕ್ಷಕರಾದ ವಿಜಯಕುಮಾರ್ ಮತ್ತು ಶಿಕ್ಷಕ ವೃಂದ ಇವರ ಸಾಧನೆಯನ್ನು ಪ್ರೋತ್ಸಾಹಿಸಿ ಅಭಿನಂದಿಸಿದ್ದಾರೆ.

