Homeಸುದ್ದಿಗಳುಸೇನಾಪಡೆಯ ಹೆಲಿಕಾಪ್ಟರ್ ದುರಂತ ದುರ್ದೈವದ ಸಂಗತಿ

ಸೇನಾಪಡೆಯ ಹೆಲಿಕಾಪ್ಟರ್ ದುರಂತ ದುರ್ದೈವದ ಸಂಗತಿ

ಸಿಂದಗಿ; ಭಾರತ ದೇಶದ ಸರ್ವೋಚ್ಚ ಸೇನಾಧಿಪತಿ ಹಾಗೂ ತ್ರಿವಳಿ ಭದ್ರತಾ ಪಡೆಗಳ ಪ್ರಪ್ರಥಮ ಮುಖ್ಯಸ್ಥ, ದೇಶಕಂಡ ಅಪ್ರತಿಮ ಸೇನಾಧಿಕಾರಿ ಜನರಲ್ ಬಿಪಿನ್ ರಾವತ್ ಹೆಲಿಕಾಪ್ಟರ್ ದುರಂತದಲ್ಲಿ ಪತ್ನಿ ಸಮೇತ ದುರಂತಕ್ಕಿಡಾಗಿದ್ದು ಇಡೀ ಸೈನ್ಯಕ್ಕೆ ತುಂಬಲಾರದ ದುಃಖಕರ ಸಂಗತಿ. ಸೇನಾ ಪಡೆಯ ಮುಖ್ಯಸ್ಥರೇ ಪ್ರಯಾಣಿಸುತ್ತಿದ್ದ ಸೇನಾಪಡೆಗೆ ಸೇರಿದ ಹೆಲಿಕಾಪ್ಟರ್ ಅಪಘಾತಕ್ಕೆ ಈಡಾಗಿರುವುದು ದುರ್ದೈವದ ಸಂಗತಿ ಎಂದು ಮಾಜಿ ಸೈನಿಕ ಶ್ರೀಶೈಲ ಯಳಮೇಲಿ ಕಂಬನಿ ಮಿಡಿದರು.

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಜೈ ಭಾರತ ಜೈ ಕರ್ನಾಟಕ ಮಾಜಿ ಸೈನಿಕರ ಸಂಘದ ವತಿಯಿಂದ ಗುರುವಾರ ಸಂಜೆ ಜನರಲ್ ಬಿಪಿನ್ ರಾವತ್ ಅವರ ಶ್ರದ್ಧಾಂಜಲಿ ಸಲ್ಲಿಸಿ ಅವರು ಮಾತನಾಡಿದರು.

ತಹಶೀಲ್ದಾರ ಸಂಜೀವಕುಮಾರ ದಾಸರ ಮಾತನಾಡಿ, ಭಾರತ ಮತ್ತು ಪಾಕಿಸ್ತಾನ ನಡುವಿನ ದಾಳಿಯಿಂದ ಭಾರತೀಯ ಸೈನಿಕರು ಹುತಾತ್ಮರಾದಾಗ ಸರ್ಜಿಕಲ್ ಸ್ಟ್ರೈಕ್ ಮಾಡಿ ಎದುರಾಳಿ ಪಾಕಿಸ್ತಾನ ಪಡೆಗಳ ಹೆಣಗಳನ್ನು ಮಲಗಿಸಿದ್ದು ಬಿಪಿನ್ ರಾವತ್ ಅಲ್ಲದೆ ಮೂರು ವಿಭಾಗದ ಸೈನಿಕರ ಕಷ್ಟಗಳನ್ನು ಸರಕಾರದ ಜೊತೆ ಸಮಾಲೋಚನೆ ಮಾಡುವ ಮೂಲಕ ಸಮಸ್ಯೆ ಇತ್ಯರ್ಥಗೊಳಿದ ಮಹನೀಯರು. ನಿಷ್ಠೆ ಮತ್ತು ಪ್ರಾಮಾಣಿಕತೆಗೆ ಹೆಸರಾಗಿದ್ದ ಸೇನಾ ಮುಖ್ಯಸ್ಥರನ್ನು ಕಳೆದುಕೊಂಡು ಭಾರತಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.

ಮಾಜಿ ಸೈನಿಕರ ಸಂಘದ ಅಧ್ಯಕ್ಷ ಶಬ್ಬೀರ ಪಟೇಲ ಬಿರಾದಾರ ಮಾತನಾಡಿ, ಸುಮಾರು 40 ವರ್ಷಗಳಿಂದ ಸತತವಾಗಿ ಸೇನೆಯಲ್ಲಿ ಸೇವೆಯನ್ನು ಸಲ್ಲಿಸಿದಲ್ಲದೆ 3 ಪಡೆಗಳ ಮುಖ್ಯಸ್ಥರಾಗಿದ್ದರು ಕೂಡಾ ಕಛೇರಿಯಲ್ಲಿ ಒಂದು ದಿನವು ಕುಳಿತವರಲ್ಲ. ರಾಷ್ಟ್ರದ ಮೂಲೆ-ಮೂಲೆಗಳಿಗೂ ಹೋಗಿ 3 ಪಡೆಗಳನ್ನು ಹುರಿದುಂಬಿಸಿ ವೈರಿಪಡೆ ಯಾವುದೇ ಬೆದರಿಕೆಯನ್ನು ಒಡ್ಡಿದರೂ ಕೂಡಲೇ ಅದಕ್ಕೆ ಉತ್ತರ ನೀಡುವಲ್ಲಿ ಮೊದಲಿಗರು ತರಬೇತಿದಾರರಿಗೆ ಎಲ್ಲಾ ರೀತಿಯ ಸೌಲಭ್ಯ ಮತ್ತು ಧೈರ್ಯ ತುಂಬಿ ಕಾರ್ಯದಲ್ಲಿ ತೊಡಗುವ ಹಾಗೇ ಮಾಡಿದರು ಇಂಥವರನ್ನು ಕಳೆದುಕೊಂಡಿದ್ದು ಒಂದು ದುರಂತವೇ ಸರಿ ಎಂದು ಶೋಕ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಲಿಂಬೆ ಅಭಿವೃದ್ಧದಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪುರ, ರೇವಣಸಿದ್ದ ದೇಸಾಯಿ, ಮಲಕಪ್ಪ ಕುರನಳ್ಳಿ, ಶಂಕಲಿಂಗ ಚಿನಮಳ್ಳಿ, ಬಸಪ್ಪ ಬಿದರಕುಂದಿ, ಮಹಿಬೂಬ ಪಟೇಲ ಬಿರಾದದಾರ, ಸಿದ್ದರಾಮ ಹೊರಕೇರಿ, ಶೇಖರಗೌಡ ಹರನಾಳ ಸೇರಿದಂತೆ ಅನೇಕರಿದ್ದರು.


ವರದಿ: ಪಂಡಿತ್ ಯಂಪೂರೆ, ಸಿಂದಗಿ

RELATED ARTICLES

Most Popular

error: Content is protected !!
Join WhatsApp Group