Homeಸುದ್ದಿಗಳುಬೈಕ್ ಕಳ್ಳನ ಬಂಧನ; ನ್ಯಾಯಾಂಗ ವಶಕ್ಕೆ

ಬೈಕ್ ಕಳ್ಳನ ಬಂಧನ; ನ್ಯಾಯಾಂಗ ವಶಕ್ಕೆ

spot_img

ಸಿಂದಗಿ: ಪಟ್ಟಣದಲ್ಲಿ ಘಟಿಸುತ್ತಿದ್ದ ಬೈಕ್ ಕಳ್ಳರ ಪತ್ತೆ ಕುರಿತು ಜಿಲ್ಲಾ ಪೊಲೀಸ್ ಅಧೀಕ್ಷಕರು, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಹಾಗೂ ಇಂಡಿ ಉಪ ವಿಭಾಗ ಪೊಲೀಸ್ ಉಪಾಧೀಕ್ಷಕರ ಆದೇಶದಂತೆ  ಸಿ.ಪಿ.ಐ. ಡಿ. ಹುಲುಗಪ್ಪ ಸಿಂದಗಿ ವೃತ್ತ ರವರ ಮಾರ್ಗದರ್ಶನದಲ್ಲಿ ಒಟ್ಟು ಅಂದಾಜು 1,65,000/- ರೂಗಳ ಕಿಮ್ಮತ್ತಿನ ಮೋಟಾರ ಸೈಕಲ್ ಗಳನ್ನು ವಶಪಡಿಸಿಕೊಂಡು ಆರೋಪಿತನನ್ನು ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದೆ ಎಂದು (ಅ,ವಿ) ಪಿ.ಎಸ್.ಆಯ್ ಅರವಿಂದ ಅಂಗಡಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು,  ನ.24 ರಂದು 13:30 ಗಂಟೆ ಸುಮಾರಿಗೆ, ಮೋರಟಗಿ ಸದರಿ ತನಿಖಾ ತಂಡವು ಆರೋಪಿತರ ತಪಾಸಣೆಯಲ್ಲಿ ಇದ್ದಾಗ  ಬೈ ಪಾಸ್ ಹತ್ತಿರ ಸಿಂದಗಿ ಬಸ್ ಡಿಪೋ ಕಡೆಯಿಂದ ಮೋರಟಗಿ ಬೈ ಪಾಸ್ ಕಡೆಗೆ ಮೋಟಾರ ಸೈಕಲ್ ತಗೆದುಕೊಂಡ ಹೊರಟ ಆರೋಪಿತನಾದ 1] ಮಾಳಪ್ಪ ತಂದೆ ಭೀಮಣ್ಣ ಜಂಬಗಿ, ವಯಾ: 22 ವರ್ಷ, ಜಾತಿ-ಹಿಂದೂ ಕುರಬರ, ಉದ್ಯೋಗ-ಒಕ್ಕಲುತನ, ಸಾ: ಚಾಂದಕವಟೆ, ತಾ: ಸಿಂದಗಿ, ಈತನನ್ನು ವಶಕ್ಕೆ ಪಡೆದು ವಿಚಾರಣೆ ಒಳಪಡಿಸಲು ಅವನು ಸಂಶಯಾಸ್ಪದವಾಗಿ ಮಾತನಾಡಲು ಅವನಿಗೆ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ವಿಚಾರಣೆಗೊಳಪಡಿಸಿದಾಗ ತಾನು ಈಗ ಸುಮಾರು 3 ವರ್ಷದ 2 ತಿಂಗಳಿಂದ ಇಂಡಿ ಮತ್ತು ಸಿಂದಗಿ, ಪಟ್ಟಣದ ಮನೆಗಳ ಮುಂದೆ ಹಾಗೂ ಇನ್ನಿತರ ಕಡೆಗಳಲ್ಲಿ ನಿಲ್ಲಿಸಿದ ಮೋಟಾರ ಸೈಕಲಗಳನ್ನು ಕಳವು ಮಾಡಿದ ಬಗ್ಗೆ ಒಪ್ಪಿಕೊಂಡಿದ್ದು ಆರೋಪಿತನಿಂದ ವಶಪಡಿಸಿಕೊಂಡು ಕಳುವಿನ ಮೋಟಾರ ಸೈಕಲ್‍ಗಳ ವಿವರ ಈ ಕೆಳಗಿನಂತಿವೆ. 

  1. ಹೊಂಡಾ ಕಂಪನಿಯ ಸಿ.ಬಿ. ಶೈನ್ ಮೋಟಾರ ಸೈಕಲ್ ಕಪ್ಪು ಬಣ್ಣದ್ದು ಇದರ ಅ:ಸ:ಕಿ: 45,000/- ರೂಗಳು
  2. ಹೊಂಡಾ ಕಂಪನಿಯ ಸಿ.ಬಿ. ಶೈನ್ ಮೋಟಾರ ಸೈಕಲ್ ನಂಬರ ಪ್ಲೇಟ್ ಇರಲಾರದ್ದು ಒಂದು ಕಪ್ಪು ಬಣ್ಣದ್ದು ಇದರ ಅ:ಕಿ: 25,000/- ರೂ.ಗಳು.
  3. ಹೊಂಡಾ ಕಂಪನಿಯ ಸಿ.ಬಿ. ಶೈನ್ ಮೋಟಾರ ಸೈಕಲ್ ನಂಬರ ಪ್ಲೇಟ್ ಇರಲಾರದ್ದು ಒಂದು ಕಪ್ಪು ಬಣ್ಣದ್ದು ಇದರ ಅ:ಸ:ಕಿ: 70,000/- ರೂ.ಗಳು.
  4. ಹೊಂಡಾ ಕಂಪನಿಯ ಸಿ.ಬಿ. ಶೈನ್ ಮೋಟಾರ ಸೈಕಲ್ ನಂಬರ ಪ್ಲೇಟ್ ಅಂತಾ ಇದ್ದದ್ದು ಒಂದು ಕಪ್ಪು ಬಣ್ಣದ್ದು ಇದರ ಅ:ಸ:ಕಿ: 45,000/- ರೂ.ಗಳು. ಹೀಗೆ ಒಟ್ಟು ಅಂದಾಜು 1,65,000/- ರೂಗಳು: ಕಿಮ್ಮತ್ತಿನ ಮೋಟಾರ ಸೈಕಲಗಳನ್ನು ವಶ ಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ಪ್ರಕರಣ ಪತ್ತೆ ಕಾರ್ಯದಲ್ಲಿ ಕಾರ್ಯನಿರ್ವಹಿಸಿದ ಪಿಎಸ್‍ಐ ರವರ ನೇತೃತ್ವದಲ್ಲಿ ಸಿಬ್ಬಂದಿ ಜನರಾದ ಎಸ್.ಪಿ. ಹುಣಸಿಕಟ್ಟೆ, ಆರ್.ಎಲ್. ಕಟ್ಟಿಮನಿ, ಪಿ.ಕೆ. ನಾಗರಾಳ, ಇವರನ್ನು ಒಳಗೊಂಡ ಒಂದು ತನಿಖಾ ತಂಡವನ್ನು ರಚನೆ ಮಾಡಿ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿಗಳ ಕರ್ತವ್ಯವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು, ವಿಜಯಪುರ ರವರು ಶ್ಲಾಘಿಸಿದ್ದಾರೆ.

RELATED ARTICLES

Most Popular

error: Content is protected !!
Join WhatsApp Group