ಕರ್ನಾಟಕ ವಿದ್ಯಾವರ್ಧಕ ಸಂಘದ ಕಲಾ ಮತ್ತು ಜಾನಪದ ಮಂಟಪದ ಸಭೆ

Must Read

ಧಾರವಾಡ- ಕನ್ನಡದ ಶಕ್ತಿ ಕೇಂದ್ರ ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದ ಕಲಾ ಮತ್ತು ಜಾನಪದ ಮಂಟಪದ ಸಲಹಾ ಸಮಿತಿ ಸಭೆ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಶಂಕರ ಹಲಗತ್ತಿ, ಕಲಾ ಮತ್ತು ಜಾನಪದ ಮಂಟಪ ಸಂಚಾಲಕರಾದ ಡಾ. ಮಹೇಶ ಧ.ಹೊರಕೇರಿ ಅವರ ನೇತೃತ್ವದಲ್ಲಿ ದಿ. 22ರಂದು ಸಾಯಂಕಾಲ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಸೇರಿ 2025- 26 ನೇ ಸಾಲಿನಲ್ಲಿ ನಡೆಯುವ ಚಟುವಟಿಕೆಗಳ ಕುರಿತು ವಿವರವಾಗಿ ಚರ್ಚಿಸಿ ರಾಜ್ಯದ ವಿವಿಧ ಕಡೆಗೆ ಕಲಾ ಮತ್ತು ಜಾನಪದ ಮಂಟಪದ ವತಿಯಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು.

ದಿ.28ರಂದು ಹುಬ್ಬಳ್ಳಿಯ ಶಿರೂರ ಪಾರ್ಕದಲ್ಲಿ ಮಂಟಪದ ಮೊದಲನೇ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.

ಸಲಹಾ ಸಮಿತಿಯ ಸದಸ್ಯರಾದ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಮೋಹನ ಬಸನಗೌಡ ಪಾಟೀಲ, ಗಣಪತಿ ದೇವೇಂದ್ರಪ್ಪ ಬಡಿಗೇರ, ಶ್ರೀಮತಿ ಜಯಶ್ರೀ ಎಸ್. ಪಾಟೀಲ, ಕಲ್ಲನಗೌಡ ಶಿವನಗೌಡ ಸಿದ್ಧಾಪುರ, ಲಾಲಸಾಬ ರಸೂಲಸಾಬ ಬೂದಿಹಾಳ, ರುದ್ರಗೌಡ ಶಂಕರಗೌಡ ಬಾಳನಗೌಡರ ಸಭೆಯಲ್ಲಿ ಭಾಗವಹಿಸಿ ಅನೇಕ ಸಲಹೆ ಸೂಚನೆ ನೀಡಿ ಎಲ್ಲಾ ಕಾರ್ಯಕ್ರಮಗಳಿಗೆ ತಾವು ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group