ಚಿಂತಕ ಅಶೋಕ ಕುಲಕರ್ಣಿ ಅವರಿಗೆ ಅಭಿನಂದನೆ
ಮುಧೋಳ – ಹಿರಿಯ ಪತ್ರಕರ್ತ. ಅನುಭವಿ, ಚಿಂತಕ, ಸಾಮಾಜಿಕವಾಗಿ ನಿರಂತರ ಸೇವೆಯಲ್ಲಿರುವ ಮುಧೋಳದ ಅಶೋಕ.ಜಿ.ಕುಲಕಣಿ೯ ಅವರನ್ನು ಡಾ.ಫ.ಗೂ.ಹಳಕಟ್ಟಿ ರಾಷ್ಟ್ರೀಯ ಟ್ರಸ್ಟ್ . ಮುಧೋಳ ತಾಲೂಕಾ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ವಚನ ಸಾಹಿತ್ಯ ಚಿಂತಕರ ಬಳಗಕ್ಕೆ ಹಷ೯ತಂದಿದೆ ಎಂದು ಶ್ರೀ ಮನ್ ನಿಜಗುಣ ಶಿವಯೋಗಿ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಪೂಜ್ಯರಾದ ಶರಣಬಸವ ಶಾಸ್ತ್ರಿಗಳು ಹೇಳಿದ್ದಾರೆ.
ಅವರು ಪತ್ರಿಕೆಯೊಂದಿಗೆ ಮಾತನಾಡುತ್ತಾ ಸಾವ೯ಕಾಲಿಕವಾಗಿ ಸತ್ಯ ಸಂದೇಶವನ್ನು ಸಾರುವ ವಚನದ ಸಾರವನ್ನು ಸಮಾಜಕ್ಕೆ ಮುಟ್ಟಿಸುವ ಕಾರ್ಯದಲ್ಲಿ ಅಶೋಕ ಕುಲಕರ್ಣಿ ಅವರು ಯಶಸ್ವಿಯಾಗಲಿ ಎಂದ ಅವರು ಇದು ಗುರುತರವಾದ ಜವಾಬ್ದಾರಿ. ಬಸವ ಪ್ರೇಮಿಗಳು. ಬಸವ ಚಿಂತಕರು. ಸಾಮಾಜಿಕ ಕಳಕಳಿಯನ್ನು ಹೊಂದಿರುವ ನಮ್ಮ ಭಾಗದ ಮುಖಂಡರೆಲ್ಲ ವಚನ ಸೇವೆಗೆ ಕೈಜೋಡಿಸುವುದು ಕೂಡ ಅತ್ಯಂತ ಅಗತ್ಯವಾಗಿದೆ ಎಂದರು.
ಒ.ಬಿ.ಸಿ.ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಂಗನಗೌಡ ಮಂಟೂರ.ಮುಗಳಖೋಡ ಗ್ರಾ.ಪಂ.ಸದಸ್ಯ ಶಂಕರಗೌಡ ಪಾಟೀಲ, ಪ್ರತಿಷ್ಠಾನದ ಮುಖಂಡರಾದ ವಿಠಲ ಸಿಂಗಾಡಿ, ಮುತ್ತಪ್ಪ ಬನಾಜಗೋಳ, ಸಂಗಮೇಶ ಲಕ್ಷ್ಮೇಶ್ವರ, ಮುತ್ತಣ್ಣ ಪೋಳ, ಬಸವರಾಜ ಜೋಗಿ, ರಮೇಶ ಸೋಲೋಣಿ ಮುಂತಾದವರು ಅಭಿನಂದಿಸಿದರು

