ವಿಧಾನಸೌಧದ ಮೆಟ್ಟಿಲುಗಳಿಗೆ ನಮಸ್ಕರಿಸಿದ ಅಶೋಕ ಮನಗೂಳಿ

Must Read

ಸಿಂದಗಿ– ಸಿಂದಗಿ ವಿಧಾನಸಭಾ ಮತಕ್ಷೇತ್ರದ ನೂತನ ಶಾಸಕ ಅಶೋಕ ಮನಗೂಳಿ ಅವರು ಸೋಮವಾರ ವಿಧಾನಸಭೆಯಲ್ಲಿ ಮೊದಲ ಬಾರಿಗೆ ಶಾಸಕರಾಗಿ ಭಾರತದ ಸಂವಿಧಾನ, ಸಿಂದಗಿ ಮತದಾರರು, ತಂದೆ ತಾಯಿಗಳ, ಹಾಗೂ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.

ಪ್ರಮಾಣವಚನಕ್ಕಿಂತ ಮುಂಚೆ ಹಿರಿಯ ಸಹೋದರ ಡಾ. ಅರವಿಂದ ಮನಗೂಳಿ ಅವರ ಕಾಲಿಗೆ ಬಿದ್ದು ನಮಸ್ಕರಿಸಿ ಆಶೀರ್ವಾದ ಪಡೆದರು. ನಂತರ ವಿಧಾನಸೌಧದ ಮುಖ್ಯದ್ವಾರದ ಮೆಟ್ಟಿಲುಗಳಿಗೆ ನಮಸ್ಕರಿಸಿ ಮೊದಲ ಬಾರಿಗೆ ವಿಧಾನಸಭೆಯನ್ನು ಪ್ರವೇಶ ಮಾಡಿದರು. ಈ ವೇಳೆ ಸಿಂದಗಿ ಮತಕ್ಷೇತ್ರದ ಅನೇಕ ಅಭಿಮಾನಿಗಳು ಕಾರ್ಯಕರ್ತರು ಹಾಗೂ ಮುಖಂಡರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಶಾಸಕ ಅಶೋಕ ಮನಗೂಳಿ ಮಾತನಾಡಿ, ಸಿಂದಗಿ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವ ಕನಸನ್ನು ಹೊತ್ತುಕೊಂಡಿದ್ದೇನೆ. ನನ್ನ ತಂದೆ ದಿವಂಗತ ಎಂ ಸಿ ಮನಗೂಳಿ ಅವರಹಾಗೆ ಜನಸೇವೆ ಮಾಡುವ ಮೂಲಕ ಕ್ಷೇತ್ರದ ಋಣವನ್ನು ತೀರಿಸುತ್ತೇನೆ. ಉದ್ಯೋಗ ಶಿಕ್ಷಣ ಆರೋಗ್ಯ ಮತ್ತು ಕೃಷಿ ಸೇರಿದಂತೆ ವಿವಿಧ ಮೂಲಭೂತ ಸೌಕರ್ಯಗಳನ್ನು ನನ್ನ ಕ್ಷೇತ್ರಕ್ಕೆ ಒದಗಿಸುವ ಮೂಲಕ ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ನನ್ನ ಮತ ಕ್ಷೇತ್ರದ ಎಲ್ಲಾ ಜನತೆಯ ಸಹಾಯ ಸಹಕಾರ ಮುತ್ತು ಮಾರ್ಗದರ್ಶನ ನಿರಂತರವಾಗಿ ಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ  ಕಾಂಗ್ರೆಸ್ ಮುಖಂಡ ಮಲ್ಲಣ್ಣ ಸಾಲಿ,ಗುರು ಗೌಡ ಪಾಟೀಲ್ ನಾಗಾವಿ, ಮಹಾಂತೇಶ್ ಪಟ್ಟಣಶೆಟ್ಟಿ, ಚಂದ್ರಕಾಂತ ಬೊಮ್ಮಣ್ಣಿ, ಅಶೋಕ ಪಟ್ಟಣಶೆಟ್ಟಿ, ರುಸ್ತುಮ್ ಮೊಗಲಾಯಿ, ಡಾ. ಮುತ್ತು ಮನಗೂಳಿ, ಪ್ರವೀಣ್ ಕಂಟಿಗೊಂಡ, ಮಂಜು ಬಿಜಾಪುರ್, ಇರ್ಫಾನ್ ತಲಕಾರಿ, ಡಾ. ರಾಜಶೇಖರ್ ಸಂಗಮ್, ಮೌಶಿನ್ ಬೀಳಗಿ, ಪ್ರಕಾಶ್ ಮುಜಾವರ್, ಮುತ್ತು ಪಟ್ಟಣಶೆಟ್ಟಿ, ಕಿರಣ್ ಕೋರಿ ಸಲೀಂ ಮುಲ್ಲಾ, ಶ್ರೀಧರ್ ಬೊಮ್ಮಣ್ಣಿ, ಜಿ ಟಿ ಪಾಟೀಲ ವಕೀಲರು, ಸಿದ್ದನಗೌಡ ಬಿರಾದಾರ ಹಂದಿಗನೂರು, ಸತೀಶ ಗೌಡ ಬಿರಾದರ್, ಶಶಿ ಗಣಿಹಾರ್, ಪರಶುರಾಮ್ ಕಾಂಬಳೆ, ರಾಹುಲ್ ಬ್ಯಾಕೋಡ, ಆನಂದ ನಿಗಡಿ , ರವಿ ಹಂದ್ರಾಳ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Latest News

ಕವನ : ಸಮಾನತೆಯ ಬೆಳದಿಂಗಳ ಪಲ್ಲವಿ

ಸಮಾನತೆಯ ಬೆಳದಿಂಗಳ ಪಲ್ಲವಿಭಾರತಾಂಬೆಗೆ ಹೊನ್ನ ಕಿರೀಟವಿದು ಸರಳ ಸಂವಿಧಾನ ನಮ್ಮ ಸಂವಿಧಾನಪೀಠಿಕೆಯ ಪರಿಧಿಯಲಿ ಜಾತ್ಯತೀತ,ಬ್ರಾತೃತ್ವ, ಸಮಾಜವಾದಿ ಸಾರ್ವಭೌಮತೆ,ಗಣತಂತ್ರ ನ್ಯಾಯ, ಸಮಾನತೆ ಸ್ವಾತಂತ್ರ್ಯದ ದುಂದುಭಿ ಜೀವದಾಯಿನಿ ಇದು ಭಾರತದ ಪಾಲಿಗೆ ಮುಕ್ತಿದಾಯಿನಿ ಇದು ದಾಸ್ಯದ ಸಂಕೋಲೆಗೆ ನಮ್ಮ ಸಂವಿಧಾನ ನಮಗೆ ಸುವಿಧಾನಲಿಖಿತವೂ ಧೀರ್ಘವೂ ಭಾರತಕ್ಕಿದು ಮಾರ್ಗವು ಅಸಮಾನತೆಯ...

More Articles Like This

error: Content is protected !!
Join WhatsApp Group