ಮಂಗಳೂರು ವಿವಿ ಪಠ್ಯಪುಸ್ತಕ ಸೇರಿದ ಅಶೋಕ ಚಿಕ್ಕಪರಪ್ಪಾ ಲೇಖನ

Must Read

ಬೆಳಗಾವಿ: ಸಮೀಪದ ಹಲಗಾ ಗ್ರಾಮದ ಹಿರಿಯ ಪತ್ರಕರ್ತರಾದ ಅಶೋಕ ಜಿ. ಚಿಕ್ಕಪರಪ್ಪಾ ಅವರು 2020ರಲ್ಲಿ ‘ಗೃಹಶೋಭಾ’ಮಾಸಪತ್ರಿಕೆಯಲ್ಲಿ ಬರೆದ ‘ಬರಡು ಭೂಮಿಯಲ್ಲಿ ಶ್ರೀಗಂಧ ಬೆಳೆದ ಸಾಧಕಿ – ಕವಿತಾ ಮಿಶ್ರಾ’ ಲೇಖನವನ್ನು ಮಂಗಳೂರು ವಿಶ್ವ ವಿದ್ಯಾಲಯದ ಬಿ.ಎಸ್.ಸಿ ಪ್ರಥಮ  ವರ್ಷದ ಕನ್ನಡ ಪಠ್ಯಪುಸ್ತಕ ‘ವಿಜ್ಞಾನ ಮಂಗಳ-2’ ದಲ್ಲಿ ಒಂದು ಪಾಠವಾಗಿ  ಅಳವಡಿಸಿಕೊಳ್ಳಲಾಗಿದೆ. ಕವಿತಾ ಮಿಶ್ರಾ ಅವರು ರಾಯಚೂರು ಜಿಲ್ಲೆಯ ಪ್ರಗತಿಪರ ರೈತರಾಗಿದ್ದು, ‘ಲೇಡಿ ಬಂಗಾರದ ಮನುಷ್ಯ’ ಎಂದೇ ಜನಜನಿತರಾಗಿದ್ದಾರೆ.

ಅಶೋಕ ಚಿಕ್ಕಪರಪ್ಪಾ ಅವರು ಬೆಳಗಾವಿಯ ‘ನಾಡೋಜ’ದಿಂದ ತಮ್ಮ ಪತ್ರಿಕಾ ಜೀವನ ಆರಂಭಿಸಿ, ಕನ್ನಡಮ್ಮ, ಸಂಯುಕ್ತ ಕರ್ನಾಟಕ, ಕರ್ಮವೀರ, ನೂತನ, ದಿಕ್ಸೂಚಿ- ಜೀವನಾಡಿ, ಗೃಹಶೋಭಾ ಹೀಗೆ ವಿವಿಧ ಪತ್ರಿಕೆಗಳಲ್ಲಿ ಪತ್ರಿಕೋದ್ಯಮದ ಹತ್ತು ಹಲವು ಜವಾಬ್ದಾರಿಗಳನ್ನು  ನಿಭಾಯಿಸಿದ್ದಾರೆ. ನಾಡಿನ ಪ್ರಖ್ಯಾತ ವ್ಯಕ್ತಿಗಳನ್ನು ಸಂದರ್ಶಿಸಿ ಲೇಖನ ಗಳನ್ನು ಬರೆದಿದ್ದಾರೆ. 

1996ರಲ್ಲಿ ‘ಕನ್ನಡಪ್ರಭ’ದಲ್ಲಿ ಬರೆದ ಪರಿಸರ ಕಾಳಜಿ ಕುರಿತಾದ ಒಂದು ಬರಹಕ್ಕೆ ಅವರಿಗೆ ‘ಶ್ರೀ ರಮೇಶ್ ಶಿಪ್ಪೂರಕರ್ ಬೆಳಗಾವಿ ಜಿಲ್ಲಾ ಮಟ್ಟದ ಅತ್ಯುತ್ತಮ ಪತ್ರಕರ್ತ’ ಪ್ರಶಸ್ತಿ ಬಂದಿತ್ತು. 

ಪ್ರಸ್ತುತ ಅಶೋಕ ಅವರು ದೃಷ್ಟಿ ವಿಕಲಚೇತನ ಸಾಧಕರ ಬಗೆಗೆ ಒಂದು ಪುಸ್ತಕ ರೂಪಿಸುವ ಕೆಲಸದಲ್ಲಿ ಮಗ್ನರಾಗಿದ್ದು, ಅದರ ಜತೆಗೆ  ಪಿ.ಸಿ., ಪಿಎಸ್ಐ, ಗ್ರೂಪ್ ‘ಸಿ’, ಪಿಡಿಒ, ಬಿಎಂಆರ್’ಸಿಎಲ್ ಕೆಎಎಸ್ ಹೀಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಸ್ಪರ್ಧಾರ್ಥಿಗಳಿಗೆ ಪುಸ್ತಕಗಳ ಬಗ್ಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಸ್ಪರ್ಧಾರ್ಥಿಗಳಿಗೆ ಬೇಕಾದ ಪುಸ್ತಕಗಳನ್ನು ಅವರಿಗೆ ರವಾನಿಸುವ ಕಾಯಕದಲ್ಲಿ ನಿರತರಾಗಿದ್ದಾರೆ.

Latest News

ಅರಭಾವಿಯಲ್ಲಿ ವಿಶ್ವ ಮಣ್ಣು ದಿನಾಚರಣೆ

ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯ, ಅರಭಾವಿಯಲ್ಲಿ ದಿನಾಂಕ: ೦೫.೧೨.೨೦೨೫ ರಂದು ವಿಶ್ವ ಮಣ್ಣು ದಿನಾಚರಣೆಯನ್ನು ರಾಷ್ಟ್ರೀಯ ಸೇವಾ ಯೋಜನೆ ಹಾಗೂ ತೋಟಗಾರಿಕೆ ವಿಸ್ತರಣಾ ಮತ್ತು...

More Articles Like This

error: Content is protected !!
Join WhatsApp Group